More

    ನಿರ್ಮಾಣ ಹಂತದ ಕೊಠಡಿಯಲ್ಲಿ ಎಸ್ಸಾಂ

    ಹನುಮಸಾಗರ: ಸ್ಥಳೀಯ ಹಾಗೂ ಹನುಮನಾಳ ಹೋಬಳಿಯ 6 ಕೇಂದ್ರದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದ ಬಾಲಕ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 344 ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಿದ್ದು, ಇಬ್ಬರು ವಿದ್ಯಾರ್ಥಿಗಳು, ಒಬ್ಬ ವಿದ್ಯಾರ್ಥಿನಿ ಗೈರಾಗಿದ್ದರು. ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 240 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 5 ಬಾಲಕರು ಗೈರಾಗಿದ್ದರು.

    ಹನುಮನಾಳದ ಎರಡು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ 239 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಇಬ್ಬರು ಬಾಲಕರು ಗೈರಾಗಿದ್ದರು. ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 269 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾದರೆ, 3 ಬಾಲಕರು, ಮೂವರು ಬಾಲಕಿಯರು ಗೈರಾಗಿದ್ದರು.
    ಜಹಗೀರ ಗುಡದೂರು ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 142 ಬಾಲಕ, 163 ಬಾಲಕಿಯರು ಒಟ್ಟು 307 ಮಕ್ಕಳು ಪರೀಕ್ಷೆ ಬರೆದರು. ಯಾರೊಬ್ಬರೂ ಗೈರಾಗಿರಲಿಲ್ಲ. ಪರೀಕ್ಷೆಗೆ ಹಾಜರಾದ ಮಕ್ಕಳಿಗೆ ಆರಂಭದಲ್ಲೇ ಎಸ್ಡಿಎಂಸಿ, ಶಾಲಾ ಸಿಬ್ಬಂದಿ ಗೇಟ್ ಬಳಿ ನಿಂತು ಪೇನ್‌ಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.

    ಪಾಲಕರ ಆಕ್ಷೇಪ: ಸಮೀಪದ ಕಬ್ಬರಗಿ ಸರ್ಕಾರಿ ಪ್ರೌಢ ಶಾಲೆಯ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದಕ್ಕೆ ಪಾಲಕರು ಆಕ್ಷೇಪ ವ್ಯಕ್ತಪಡಿಸಿದರು. ಕಾಮಗಾರಿ ಪ್ರಗತಿಯಲ್ಲಿರುವ ಕಟ್ಟಡದಲ್ಲಿ ಪರೀಕ್ಷೆ ನಡೆಸಿದ್ದು, ಏನಾದರು ಆದರೆ ಯಾರು ಜವಾಬ್ದಾರಿ?. ಕಳೆದ ವರ್ಷದಂತೆ ಈ ಬಾರಿಯೂ ಪ್ರಾಥಮಿಕ ಶಾಲೆಯಲ್ಲೇ ಪರೀಕ್ಷೆ ನಡೆಸಬಹುದಿತ್ತು. ಯಾಕೆ ಅಪೂರ್ಣ ಕೋಠಡಿಗಳಲ್ಲಿ ಮಕ್ಕಳನ್ನು ಕೂರಿಸಬೇಕಿತ್ತು ಎಂದು ಪಾಲಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಶೇಷನಗೌಡ ಪಾಟೀಲ್, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ 1 ಕಿ.ಮೀ.ಗೂ ಅಧಿಕ ದೂರವಿದೆ. ಏನಾದರೂ ಬೇಕಾದರೆ ಅಲ್ಲಿಂದ ಇಲ್ಲಿಗೆ ಸಿಬ್ಬಂದಿ ಓಡಾಡಬೇಕಿತ್ತು. ಪಾಲಕರೂ ತೊಂದರೆ ಅನುಭವಿಸಬೇಕಾಗಿತ್ತು. ಹೀಗಾಗಿ ಮೇಲಧಿಕಾರಿಗಳ ಅನುಮತಿ ಪಡೆದು ಇಲ್ಲಿಯೇ ಎಲ್ಲಾ ಬ್ಲಾಕ್‌ಗಳನ್ನು ಮಾಡಲಾಗಿದೆ. ಮಕ್ಕಳಿಗೆ ಎಲ್ಲ ಕೋಠಡಿಗಳಲ್ಲೂ ಬೆಂಚ್ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ ಎಂದರು. ಇಲ್ಲಿ 140 ಬಾಲಕರು, 139 ಬಾಲಕಿಯರು ಒಟ್ಟು 279 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಯಾರೊಬ್ಬರೂ ಗೈರಾಗಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts