More

    ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಶೀಘ್ರವೇ ಬಡ್ತಿ: ಎಂಎಲ್ಸಿ ಶಶೀಲ್ ನಮೋಶಿ ಭರವಸೆ

    ಹನುಮಸಾಗರ: ಸರ್ಕಾರಿ ಪ್ರೌಢಶಾಲೆ ಶಿಕ್ಷಕರನ್ನು ಪದವಿ ಪೂರ್ವ ಕಾಲೇಜಿಗೆ ಪದೋನ್ನತಿ ನೀಡಲು ಸದ್ಯದಲ್ಲೇ ಬಡ್ತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ಏರ್ಪಡಿಸಿದ್ದ ಹನುಮಸಾಗರ ಭಾಗದ ಪ್ರೌಢಶಾಲೆ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಕೆಲ ತಾಂತ್ರಿಕ ಕಾರಣಗಳಿಂದ 2011 ರಿಂದ ಪ್ರೌಢ ಶಾಲಾ ಶಿಕ್ಷಕರಿಗೆ ಪದೋನ್ನತಿ ನೀಡಲು ಸಾಧ್ಯವಾಗಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು, ಶೀಘ್ರ ಬಡ್ತಿ ಪ್ರಕ್ರಿಯೆ ನಡೆಯಲಿದೆ. ಮೊದಲು 50ರ ಅನುಪಾತದಲ್ಲಿ ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿ ನೀಡಲಾಗುತ್ತಿತ್ತು. ಬಳಿಕ ಸರ್ಕಾರ ನಿಯಮಾವಳಿಗಳನ್ನು ಬದಲಿಸಿ 75:25 ರ ಅನುಪಾತದಲ್ಲಿ ಪರೀಕ್ಷೆ ಮೂಲಕ ಬಡ್ತಿ ನೀಡಲು ಮುಂದಾಗಿತ್ತು. ಇದಕ್ಕೆ ಪ್ರೌಢ ಶಾಲಾ ಶಿಕ್ಷಕರ ಸಂಘ ಅಡ್ಡಪಡಿಸಿದ್ದಕ್ಕಾಗಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಸದ್ಯ ಸಂಘವು ಸರ್ಕಾರದ ನಿಯಮಕ್ಕೆ ಒಪ್ಪಿದ್ದು, ಸದ್ಯದಲ್ಲೇ ಬಡ್ತಿ ಪ್ರಕ್ರಿಯೆ ಶುರುವಾಗುತ್ತದೆ ಎಂದರು.

    ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿರುವ ಶಿಕ್ಷಕರಿಗೆ ಆರ್ಥಿಕವಾಗಿ ಅನ್ಯಾಯವಾಗಿರುವುದು ಗಮನಕ್ಕೆ ಬಂದಿದೆ. ಈ ವಿಷಯ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದ್ದು, 10, 15, 20 ಹಾಗೂ 25ನೇ ವರ್ಷದ ಬಡ್ತಿ ನೀಡುವುದು ಹಾಗೂ ಪ್ರಾಥಮಿಕ ಶಾಲೆಯ ಸೇವೆ ಪರಿಗಣಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಮುಂದಾಗುತ್ತಿಲ್ಲವೆಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಶೀಲ್ ನಮೋಶಿ, ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವುದಕ್ಕೆ ನನ್ನ ಬೆಂಬಲವೂ ಇದೆ. ಮುಂದೊಂದು ದಿನ ಖಂಡಿತವಾಗಿ ಹಳೆ ಪಿಂಚಣಿ ಯೋಜನೆ ಎಲ್ಲರಿಗೂ ಅನ್ವಯಿಸುತ್ತದೆ ಎಂದರು. ಅತಿಥಿ ಶಿಕ್ಷಕರಿಗೆ ಸೇವಾಭದ್ರತೆ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಪ್ರತಿ ವರ್ಷ ಶೇ.5 ಕೃಪಾಂಕ ನೀಡಲು ಸದನದಲ್ಲಿ ಒತ್ತಾಯಿಸುವಂತೆ ಅತಿಥಿ ಶಿಕ್ಷಕರ ಸಂಘ ಮನವಿ ಮಾಡಿತು.

    ಉಪಪ್ರಾಚಾರ್ಯ ಎಂ.ಎಸ್.ಬಡದಾನಿ, ಶಿಕ್ಷಕರಾದ ಹುಸೇನಸಾಬ್ ಇಳಕಲ್, ಗುರು ಕಾಮಾ, ಮಲ್ಲಪ್ಪ ಭಂಡಾರಿ, ಕಿಶನರಾವ್ ಕುಲಕರ್ಣಿ, ಅಮರೇಶ ತಮ್ಮಣ್ಣನವರ, ರಾಜೇಂದ್ರ ಬೆಳ್ಳಿ, ಸುರೇಶ ಅಂಕೋಲಿ, ಶಂಕ್ರಪ್ಪ ತಳವಾರ, ಹಬೀಬ್‌ಪಾಷಾ ಮಕಾನದಾರ, ಚಂದ್ರು ಗುಳೇದ, ಚಿದಾನಂದ ಕಸ್ತೂರಿ, ಬೀರಪ್ಪ ಕಡ್ಲಿಮಟ್ಟಿ, ನಂದುಲಾಲ ದಲಬಂಜನ್, ಬಾಳಪ್ಪ ಗುಡಿಗದ್ದಿ, ರವಿ ಪಾವಿ, ಬಸವರಾಜ ಹನುಮಸಾಗರ, ಅಬ್ದುಲ್ ವಾಲಿಕಾರ, ತಿಪ್ಪಣ್ಣ ಪಾಲಕಾರ, ಉಮಾಕಾಂತ ರಜಪೂತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts