More

    ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಕೆ ಅಗತ್ಯ: ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಅಭಿಮತ

    ಹನುಮಸಾಗರ: ರಕ್ಷಣಾ ಕಲೆ ಕರಾಟೆಯನ್ನು ವಿದ್ಯಾರ್ಥಿನಿಯರು ಕಡ್ಡಾಯವಾಗಿ ಕಲಿಯಬೇಕು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಕಂಬಳಿ ಹೇಳಿದರು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕರಾಟೆ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡೆ ಮನುಷ್ಯ ಜೀವನದ ಅವಿಭಾಜ್ಯ ಅಂಗ. ಕರಾಟೆ ಕಲೆಯುವುದರಿಂದ ಸ್ವಯಂ ರಕ್ಷಣೆಗೆ ನೆರವಾಗಲಿದೆ. ನಿರಂತರ ಪ್ರಯತ್ನದಿಂದ ಹಂತ ಹಂತವಾಗಿ ಕ್ರೀಡೆಯಲ್ಲಿ ಉನ್ನತ ಸ್ಥಾನ ತಲುಪಲು ಸಾಧ್ಯವಿದೆ ಎಂದರು.

    ಎಸ್ಡಿಎಂಸಿ ಉಪಾಧ್ಯಕ್ಷ ಸೂಚಪ್ಪ ದೇವರಮನಿ ಮಾತನಾಡಿ, ಕ್ರೀಡೆಯಲ್ಲಿ ನಿರ್ಣಾಯಕರು ನ್ಯಾಯಯುತವಾಗಿ ತೀರ್ಪು ನೀಡಬೇಕು. ಆಟಗಳಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಭಾಗವಹಿಸುವುದು ಮುಖ್ಯ ಎಂದರು.

    ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಕಂಬಳಿ, ಪ್ರಭಾರ ಮುಖ್ಯಶಿಕ್ಷಕ ಶಂಕ್ರಪ್ಪ ತಳವಾರ, ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಹುಸೇನ್‌ಸಾಬ್ ಇಳಕಲ್, ನಂದಲಾಲ್ ದಲಬಂಜನ, ಅಮರೇಶ ತಮ್ಮಣ್ಣವರ, ಡಯಟ್ ಉಪನ್ಯಾಸಕರಾದ ರಾಜೇಂದ್ರ ಬೆಳ್ಳಿ, ಪ್ರಾಣೇಶ, ಕಲೀಂಶೇಕ್, ಜಂಪ್ ರೋಪ್ ಸಂಸ್ಥೆ ಉಪಾಧ್ಯಕ್ಷ ಅಬ್ದುಲ್ ಕರೀಂ ಒಂಟೆಳ್ಳಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದಾಲಿಂಗಪ್ಪ ಹಳ್ಳೂರು, ಗೌರಮ್ಮ ತಳವಾರ, ತರಬೇತುದಾರ ಮಹಾಂತೇಶ ಬೀಳಗಿ, ನಿರ್ಣಾಯಕರಾದ ಈರಣ್ಣ ಬಾದಾಮಿ, ಮಂಜು ವಾಲ್ಮೀಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts