More

    ಶಿಕ್ಷಣದಿಂದ ಆರ್ಥಿಕ, ಸಾಮಾಜಿಕ ಪ್ರಗತಿ

    ಹನುಮಸಾಗರ: ಯುವಜನತೆಗೆ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಕುದರಿಮೋತಿಯ ವಿಜಯಮಹಾಂತ ಶ್ರೀಗಳು ಹೇಳಿದರು.
    ಪಟ್ಟಣದ ಶ್ರೀ ಕರಿಸಿದ್ಧೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ 2,991 ನೇ ತುಲಾಭಾರ ಸೇವೆ ಭಕ್ತರಿಂದ ಸ್ವೀಕರಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳುವುದರಿಂದ ಮನಸ್ಸು ನಿರ್ಮಲ, ಸ್ವಚ್ಛವಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಆರ್ಥಿಕ, ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ. ಯುವಕರು ದುಶ್ಚಟಗಳಿಗೆ ದಾಸರಾಗದೆ ಕುಟುಂಬದ ಪ್ರಗತಿಯತ್ತ ಗಮನ ಹರಿಸಬೇಕು. ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು. ಇದಕ್ಕೂ ಮುನ್ನ ಶ್ರೀ ಅನ್ನದಾನೇಶ್ವರ ಮಠದಿಂದ ಸಾರೋಟಿನಲ್ಲಿ ಶ್ರೀಗಳನ್ನು ಮೆರವಣಿಗೆ ಮೂಲಕ ಕರಿಸಿದ್ಧೇಶ್ವರ ಮಠಕ್ಕೆ ಕರೆತರಲಾಯಿತು. ತೆರೆದಾಳ ಪಟ್ಟಣದ ಶಿವಕುಮಾರ ದೇವರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಮಹಾಂತಯ್ಯ ಕೋಮಾರಿ, ಬಸವರಾಜ ಹಳ್ಳೂರ, ಮುತ್ತಣ್ಣ ಸಂಗಮದ, ವಿಶ್ವನಾಥ ಕನ್ನೂರು, ವಿದ್ಯಾಧರ ಸೊಪ್ಪಿಮಠ, ಮಹಾಂತೇಶ ಕಂಪ್ಲಿ, ಸಂಗಮೇಶ ಸಂಗಮದ, ಸೂಚಪ್ಪ ದೇವರಮನಿ, ಚಂದ್ರಶೇಖರ ಹಲಕೂಲಿ, ಮಲ್ಲಯ್ಯ ಕೋಮಾರಿ, ಮಂಜುನಾಥ ಕೋಮಾರಿ, ರಮೇಶ ನಿಡಗುಂದಿ ಇತರರಿದ್ದರು.

    ಫೋಟೋ: 11 ಹನುಮಸಾಗರ 1
    ಹನುಮಸಾಗರದ ಶ್ರೀ ಕರಿಸಿದ್ಧೇಶ್ವರ ಮಂಗಲ ಭವನದಲ್ಲಿ ವಿಜಯಮಹಾಂತ ಶ್ರೀಗಳ ತುಲಾಭಾರ ಕಾರ್ಯಕ್ರಮ ನಡೆಯಿತು. ಮುಖಂಡರಾದ ಕರಿಸಿದ್ದಪ್ಪ ಕುಷ್ಟಗಿ, ಮಹಾಂತೇಶ ಅಗಸಿಮುಂದಿನ, ಶ್ರೀಶೈಲ ಮೋಟಗಿ, ಪ್ರಶಾಂತ ಗಡಾದ, ಬಸಣ್ಣ ಅಗಸಿಮುಂದಿನ, ಬಸವಂತಪ್ಪ ಕಂಪ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts