More

    ಮಕ್ಕಳ ಮನಸ್ಸು ಅರ್ಥೈಸಿಕೊಂಡು ಪಾಠ ಮಾಡಿ

    ಹನುಮಸಾಗರ: ಮಕ್ಕಳಿಗೆ ಆರಂಭದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಬದಲಾದ ಪಠ್ಯಕ್ರಮ ಅನುಸಾರ ಬೋಧನೆ ಮಾಡುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಾಲೋಚನಾ ಸಭೆ ಉತ್ತಮ ವೇದಿಕೆಯಾಗಿದೆ ಎಂದು ಸಿಆರ್‌ಪಿ ಅಯ್ಯಪ್ಪ ಸುರುಳ ಹೇಳಿದರು.

    ಅಡವಿಭಾವಿ ಕ್ಲಸ್ಟರ್ ಮಟ್ಟದ ಮಲಕಾಪೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ನಲಿ-ಕಲಿ ಶಿಕ್ಷಕರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

    ಆರಂಭದಲ್ಲಿ ಮಕ್ಕಳಲ್ಲಿ ಕಲಿಕೆಯಲ್ಲಿ ಆಸಕ್ತಿ ಬೆಳೆವಂತೆ ಬೋಧನೆ ಮಾಡಬೇಕು. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು, ಚಟುವಟಿಕೆಗಳ ಮೂಲಕ ಕ್ರಿಯಾತ್ಮಕವಾಗಿ ಬೋಧನೆ ಮಾಡಬೇಕು. ಪಠ್ಯ ಕ್ರಮ ಬದಲಾಗಿದ್ದರಿಂದ ಬೋಧನಾ ಸಮಯದಲ್ಲಿ ಗೊಂದಲಗಳು ಎದುರಾಗುವುದು ಸಹಜ. ನಿಮಗೆ ಎದುರಾಗುವ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿ. ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ಕಂಡುಕೊಳಲು ಹಿಂಜರಿಕೆ ಬೇಡ ಎಂದರು.

    ನಲಿ-ಕಲಿ ಬೋಧಿಸುವ ಶಿಕ್ಷಕ, ಶಿಕ್ಷಕಿಯರರಿಗೆ ಸಂಪನ್ಮೂಲ ವ್ಯಕ್ತಿ ಬಸವರಾಜ ರೋಡ್ಡಾ ತರಬೇತಿ ನೀಡಿದರು. ಎಸ್ಡಿಎಂಸಿ ಅಧ್ಯಕ್ಷೆ ಸಾವಿತ್ರಿ ಹಿರೇಮಠ, ಗ್ರಾಪಂ ಸದಸ್ಯ ರಾದ ರಮೇಶ್ ಗೌಡ, ಮಹಾದೇವಿ ಕರಕಂಡಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts