More

    ಯುವಕರು ಹಿಂದು ಧರ್ಮ ಉಳಿವಿಗೆ ಶ್ರಮಿಸಿ

    ಹನುಮಸಾಗರ: ಭಾರತೀಯರನ್ನು ಒಂದುಗೂಡಿಸುವುದು ಶಿವಾಜಿ ಮಹಾರಾಜರ ಪ್ರಮುಖ ಉದ್ದೇಶವಾಗಿತ್ತು ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.

    ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಮಿತಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಜಯಂತ್ಯುತ್ಸವ ಹಾಗೂ ಹಿಂದು ಸಮಾವೇಶದಲ್ಲಿ ಮಾತನಾಡಿದರು.

    ಸಂಕಷ್ಟದ ಪರಿಸ್ಥಿತಿಯಲ್ಲಿ ಹಿಂದು ಧರ್ಮವನ್ನು ಶಿವಾಜಿ ಕಟ್ಟಿ ಬೆಳೆಸಿದ್ದಾರೆ. ಹಾಗಾಗಿ ಧರ್ಮವನ್ನು ಉಳಿಸಿ, ಬೆಳಸುವ ಕಾರ್ಯ ಯುವಕರ ಮೇಲಿದೆ. ನಮ್ಮಲ್ಲಿನ ಒಗ್ಗಟ್ಟು ಎಂದಿಗೂ ಕಳೆಗುಂದಬಾರದು. ಭಾರತದಲ್ಲಿದ್ದು ಪಾಕಿಸ್ತಾನಿಗಳಿಗೆ ಸಹಾಯ ಮಾಡುವವರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.

    ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ಹಿಂದು ಧರ್ಮಕ್ಕಾಗಿ ಶಿವಾಜಿ ಪ್ರಾಣ ತ್ಯಾಗ ಮಾಡಿದರು. ಜಾತಿಗಾಗಿ ಹೋರಾಡಲಿಲ್ಲ. ದೇಶಕ್ಕಾಗಿ ಹಿಂದು ಧರ್ಮದ ಉಳಿವಿಗಾಗಿ ಶ್ರಮಿಸಿದವರು. ನಾವು ಎಲ್ಲರೂ ಹಿಂದುಗಳು. ನಮ್ಮ ಧರ್ಮ ಹಿಂದು. ನಮ್ಮ ದೇಶ ಹಿಂದು ರಾಷ್ಟ್ರ, ಬಸವಾದಿ ಶರಣರು ಸಹ ಜಾತಿ ಮಾಡದೆ ಮಾನವ ಒಳಿತಿಗಾಗಿ ಶ್ರಮಿಸಿದವರು. ನಮ್ಮ ದೇಶದ ಮುಸ್ಲಿಮರು ಸಹ ಹಿಂದುಗಳೇ ಎಂದರು.
    ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿವೆ. ಯುವಕರು ಜಾತಿ ಎಂಬ ಸಂಕುಚಿತ ಮನೋಭಾವದಿಂದ ಹೊರಬಂದು ಒಗ್ಗಟ್ಟಿನಿಂದ ಇರಬೇಕು. ಶಿವಾಜಿಯಂತೆ ರಾಷ್ಟ್ರದ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

    ಸಿದ್ಧನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಶಿವಾಜಿ ಇರದಿದ್ದರೆ ಭಾರತದಲ್ಲಿ ಹಿಂದುಗಳು ಇರುತ್ತಿರಲಿಲ್ಲ. ಹಿಂದುಗಳು ಉಳಿದರೆ ಮಾತ್ರ ಹಿಂದುತ್ವ ಉಳಿಯುತ್ತದೆ. ಎಲ್ಲದರಲ್ಲೂ ರಾಜಕೀಯ ಪ್ರವೇಶವಾಗಿರುವುದು ವಿಷಾದನೀಯ ಎಂದರು.

    ಆರ್‌ಎಸ್‌ಎಸ್ ತಾಲೂಕಾ ಸಂಪರ್ಕ ಪ್ರಮುಖ ಶ್ರೀಕಾಂತ ಸಾ ರಂಗ್ರೇಜ್ ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಮಿತಿಯ ಶಿವಪುತ್ರಪ್ಪ ಕೊಳ್ಳೂರು, ರುದ್ರಗೌಡ ಗೌಡಪ್ಪನವರ, ಬಸವರಾಜ ದ್ಯಾವಣ್ಣವರ, ನಾಗರಾಜ ಹಕ್ಕಿ, ರಮೇಶ ಬಡಿಗೇರ, ವೀರೇಶ ಈಳಗೇರ, ವಿಜಯ ಕುಷ್ಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts