More

    ಧಾರ್ಮಿಕತೆ ಜತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಿ; ಗುರುಶಾಂತೇಶ್ವರ ಶ್ರೀ

    ರಾಣೆಬೆನ್ನೂರ: ಗ್ರಾಮೀಣ ಭಾಗದ ಜನತೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದು ನೆಗಳೂರ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.
    ತಾಲೂಕಿನ ಹನುಮಾಪುರ ಗ್ರಾಮದ ದುರ್ಗಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಮಂಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
    ಗ್ರಾಮ ಭಾರತದಲ್ಲಿ ಇಂದು ಭಕ್ತಿಯ ಕೊರತೆ, ಗುರು ಹಿರಿಯರಿಗೆ ಗೌರವ ಕೊಡುವುದು ತುಂಬಾ ಕಡಿಮೆಯಾಗುತ್ತಿದೆ. ಇಂತಹ ಗುಣಗಳು ಕಡಿಮೆಯಾಗಿ ಜನರಲ್ಲಿ ಸಂಸ್ಕಾರ ಸಂಸ್ಕೃತಿ ಗುಣಗಳು ಹೆಚ್ಚಾಗಬೇಕಾದರೆ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.
    ಶಾಸಕ ಬಸವರಾಜ ಶಿವಣ್ಣನವರ ಕಾರ್ಯಕ್ರಮ ಉದ್ಘಾಟಿಸಿದರು.
    ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಪಂಡಿತ ಕಾಶಿನಾಥ, ಮಾಲತೇಶ ಜಾಲಣ್ಣನವರ, ದಾನಪ್ಪ ಚೂರಿ, ನಾಗರಾಜ ಆನ್ವೇರಿ, ಡಾ. ಪುಟ್ಟಯ್ಯ ಭಿಕ್ಷಾವರ್ತಿಮಠ, ಎಫ್.ಎಂ. ಕೊರಚರ, ಶಿವಾನಂದಪ್ಪ ಕೋಣನವರ, ವೀರಪ್ಪ ಬಜ್ಜಿ, ವಿರುಪಾಕ್ಷಗೌಡ ಬೂದಗಟ್ಟಿ, ಗುಡ್ಡಪ್ಪ ಶಿರೂರು, ಗುಡ್ಡಪ್ಪ ಕೋರೆಪ್ಪನವರ, ಶಿವಪುತ್ರಪ್ಪ ಕೋರೆಪ್ಪನವರ, ಹೊನ್ನಪ್ಪ ಕೊರಚರ, ಮುರುಗೇಶ ಗುಡಸಲಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts