More

    ಊಗಿನಹಳ್ಳಿಯಲ್ಲಿ ಹನುಮಂತೋತ್ಸವ

    ಕಿಕ್ಕೇರಿ : ಹೋಬಳಿಯ ಗಡಿಯಂಚಿನ ಊಗಿನಹಳ್ಳಿ ಗ್ರಾಮದಲ್ಲಿ ಕುರುಹಿನಶೆಟ್ಟಿ ಸಮಾಜದಿಂದ ವಿಜೃಂಭಣೆಯಿಂದ ರಾಮೋತ್ಸವ, ಹನುಮಂತೋತ್ಸವ ನೆರವೇರಿತು. ಹನುಮದೇವರ ಭಾವಚಿತ್ರಕ್ಕೆ ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ರಾಮ ಮಂದಿರದಿಂದ ಸಾಗಿದ ಉತ್ಸವಕ್ಕೆ ಗ್ರಾಮಸ್ಥರು ಹಣ್ಣು, ಕಾಯಿ ಅರ್ಪಿಸಿ ಆರತಿ ಬೆಳಗಿದರು. ಗ್ರಾಮಸ್ಥರು ಮನೆಯ ಮುಂದೆ ಬಣ್ಣದ ನೀರು, ಬಣ್ಣದ ಪುಡಿ ಇಟ್ಟು ಮಕ್ಕಳು, ಯುವಕರಿಗೆ ಓಕಳಿಯಾಡಲು ಸಹಕರಿಸಿದರು. ನಂತರ ಮೂಲ ರಾಮಮಂದಿರ ಗುಡಿಗೆ ಉತ್ಸವ ಸಾಗಿತು. ದೇವರಿಗೆ ಮಹಾಮಂಗಳಾರತಿ ಬೆಳಗಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
    ಶನಿವಾರ ರಾತ್ರಿ ಪಟ್ಟಾಭಿರಾಮದೇವರ ಉತ್ಸವ ಸಂಭ್ರಮದಿಂದ ನೆರವೇರಿತು. ತೀರ್ಥ ಪ್ರಸಾದ, ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಮುಖಂಡರಾದ ಕೆಇಬಿ ತಿಮ್ಮಶೆಟ್ಟಿ, ಮುರಳೀಧರ್, ಮುತ್ತುಶೆಟ್ಟಿ, ಗೋವಿಂದ, ಕೃಷ್ಣಶೆಟ್ಟಿ, ನ್ಯಾಯಬೆಲೆ ತಿಮ್ಮಶೆಟ್ಟಿ, ರೂಪೇಶ್, ನಂಜುಂಡಶೆಟ್ಟಿ, ಕೇಶವಶೆಟ್ಟಿ, ಗೋಪಾಲ್, ಹರೀಶ್, ಮೇಲುಕೋಟೆ ಪುಟ್ಟಶೆಟ್ಟಿ, ಕಿಕ್ಕೇರಿ ಕೆ.ವಿ. ಅರುಣಕುಮಾರ್, ಭೀಮಣ್ಣಶೆಟ್ಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts