More

    ನಿರ್ಭಯಾ ಅಪರಾಧಿಗಳ ನೇಣಿಗೇರಿಸಲು, ಮೇರಟ್​ನಿಂದ ನೇಣಿಗೇರಿಸುವವರು, ಬಿಹಾರ್​ನ ಬಕ್ಸಾರ್​ ಕಾರಾಗೃಹದಿಂದ ಬಂದಿವೆ ಕುಣಿಕೆಗಳು

    ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಶಿಕ್ಷೆಗೆ ತಯಾರಿ ಆರಂಭವಾಗಿದ್ದು, ತಿಹಾರ್​ ಜೈಲಿನಲ್ಲಿ ಸಕಲವೂ ಸಿದ್ಧವಾಗಿದೆ.

    ಮೇರಟ್​ನಿಂದ ನೇಣಿಗೇರಿಸುವವರನ್ನು ಕರೆತರಲಾಗುತ್ತಿದೆ. ನಾಲ್ವರನ್ನು ನೇಣಿಗೇರಿಸಲು ತಿಹಾರ್​ ಜೈಲಿನಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ.

    ನೇಣಿನ ಕುಣಿಕೆಗಳನ್ನು ಬಿಹಾರದ ಬಕ್ಸಾರ್​ ಕಾರಾಗೃಹದಿಂದ ತರಿಸಿಕೊಳ್ಳಲಾಗಿದೆ. ಪಾರ್ಲಿಮೆಂಟ್​ನ ಮೇಲೆ ದಾಳಿ ನಡೆಸಿದ್ದ ಅಫ್ಜಲ್​ ಗುರುನನ್ನು ನೇಣಿಗೇರಿಸಲು ಇದೇ ಬಕ್ಸಾರ್​ ಕಾರಾಗೃಹದ ಕುಣಿಕೆಗಳನ್ನು ಬಳಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

    ಏಷ್ಯಾದ ಅತಿ ದೊಡ್ಡ ಜೈಲು ಎಂದೇ ಖ್ಯಾತಿ ಗಳಿಸಿರುವ ತಿಹಾರ್​ ಜೈಲಿನಲ್ಲಿ ನೇಣಿಗೇರಿಸುವ ನಕಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.

    ನಾಲ್ವರು ಅಪರಾಧಿಗಳನ್ನು ಬೇರೆ ಬೇರೆ ಸೆಲ್​ಗಳಲ್ಲಿ ಇಡಲಾಗುತ್ತದೆ. ಅವರ ಮೇಲೇ ಸಿಸಿ ಕ್ಯಾಮರಾದ ಮೂಲಕ ನಿಗಾ ವಹಿಸಲಾಗುತ್ತದೆ. ನೇಣಿಗೇರಿಸಲಾಗುವ ಜೈಲ್​ 3ನೇ ನಂಬರಿನ ಬ್ಯಾರಕ್​ನಲ್ಲಿ ಎಲ್ಲವೂ ಸಿದ್ಧಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೇನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts