More

    ಕನ್ಹಯ್ಯ ಲಾಲ್ ಹಂತಕರನ್ನು ಗಲ್ಲಿಗೇರಿಸಿ; ಲೋಕಸಭೆಯಲ್ಲಿ ಆಗ್ರಹ

    ನವದೆಹಲಿ: ಪ್ರವಾದಿ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿ, ಪಕ್ಷದ ವಕ್ತಾರೆ ಸ್ಥಾನದಿಂದ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಸೋಷಿಯಲ್ ಮೀಡಿಯಾದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕನ್ಹಯ್ಯ ಲಾಲ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹಾಗೆ ಕೊಲೆಗೈದವರನ್ನು ಗಲ್ಲಿಗೇರಿಸುವಂತೆ ಇಂದು ಲೋಕಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ.

    ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರು ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಂಗಡಿಗೆ ಉಡುಪು ಹೊಲಿಸುವವರ ಸೋಗಿನಲ್ಲಿ ಬಂದಿದ್ದ ಹಂತಕರು, ಕನ್ಹಯ್ಯ ಲಾಲ್​ನ ಕೊಲೆಗೈದಿದ್ದಲ್ಲದೆ, ರುಂಡ ಕಡಿದು ಹಾಕಿದ್ದರು. ಈ ಸಂಬಂಧ ಅಂದೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಆ ಬಳಿಕ ಮತ್ತಷ್ಟು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

    ಈ ವಿಚಾರ ಇಂದು ಲೋಕಸಭೆ ಅಧಿವೇಶನದ ಶೂನ್ಯವೇಳೆಯಲ್ಲಿ ಪ್ರಸ್ತಾಪವಾಗಿದ್ದು, ಹಂತಕರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಲಾಗಿದೆ. ಉದಯಪುರದ ಲೋಕಸಭಾ ಸದಸ್ಯ ಅರ್ಜುನ್ ಲಾಲ್ ಮೀನ ಮಾತನಾಡಿ, ಕನ್ಹಯ್ಯ ಲಾಲ್ ರುಂಡ ಕತ್ತರಿಸಿದ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಹಂತಕರನ್ನು ಗಲ್ಲಿಗೇರಿಸಬೇಕು. ಅಲ್ಲದೆ ಹಂತಕರು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ದಾವತ್ ಇ ಇಸ್ಲಾಮಿಗೆ ಸೇರಿದವರಾಗಿದ್ದು, ಆ ಸಂಘಟನೆಯ ಚಟುವಟಿಕೆಗಳ ಮೇಲೂ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.

    ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

    ಪ್ರೇಯಸಿಯ ರುಂಡ ಕಡಿದ ಪ್ರೇಮಿ; ಕೊಲೆಗಾರನನ್ನು ತನಗೊಪ್ಪಿಸಿ ಎಂದು ಸ್ಟೇಷನ್​ ಮುಂದೆ ರೊಚ್ಚಿಗೆದ್ದ ಅಣ್ಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts