More

    ನೇಕಾರಿಕೆ ಉಳಿಸಿ ಬೆಳೆಸಲು ಪ್ರತ್ಯೇಕ ಬಜೆಟ್ ಕೊಡಿ

    ಬೆಂಗಳೂರು: ಆರ್ಥಿಕತೆ ಬೆಳವಣಿಗೆ, ಉದ್ಯೋಗ ಸೃಷ್ಟಿಯಲ್ಲಿ ನೇಕಾರಿಕೆ ವೃತ್ತಿ ಕೊಡುಗೆ ದೊಡ್ಡದಾಗಿದೆ. ನೇಕಾರರ ಬದುಕು, ಸುಸ್ಥಿರ ಪ್ರಗತಿಗಾಗಿ ಪ್ರತ್ಯೇಕ ಬಜೆಟ್ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಒತ್ತಾಯಿಸಿದರು.

    ಬಿಜೆಪಿ ಬೆಂಗಳೂರು ನಗರ ಕಚೇರಿಯಲ್ಲಿ ರಾಷ್ಟ್ರೀಯ ಕೈಮಗ್ಗ ದಿನದ ನಿಮಿತ್ತ ಸೋಮವಾರ ಏರ್ಪಡಿಸಿದ್ದ ನೇಕಾರರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೈಮಗ್ಗದ ಮಹತ್ವ ಸಾರಲು, ಒತ್ತಾಸೆಯಾಗಿ ನಿಲ್ಲುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿವಹಿಸಿದೆ. ನೇಕಾರರಿಗೆ ಅಗತ್ಯ ನೆರವು ನೀಡಿ ಪ್ರೋತ್ಸಾಹಕ್ಕೂ ಮುಂದಾಗಿದೆ.

    ಆದರೆ ರಾಜ್ಯ ನಿರಾಸಕ್ತಿ ತಳೆದಿರುವುದು ಬೇಸರದ ಸಂಗತಿ. ಚುನಾವಣೆಯಲ್ಲಿ ನೇಕಾರರಿಗೆ 20 ಎಚ್‌ಪಿ ಅಶ್ವಶಕ್ತಿವರೆಗೆ ಉಚಿತ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತು ಉಳಿಸಿಕೊಳ್ಳುವ ಬದಲಿಗೆ ವಿದ್ಯುತ್ ಏರಿಕೆಯ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಂಕಷ್ಟದ ಪರಿಸ್ಥಿತಿ

    ಬದಲಾದ ಮನಸ್ಥಿತಿ, ತೀವ್ರ ಪೈಪೋಟಿ, ಕೈಮಗ್ಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕೊರತೆ, ಸರ್ಕಾರದ ಅಸಡ್ಡೆಯಿಂದ ನೇಕಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಾಲಬಾಧೆ ತಾಳದೆ ಹಲವು ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಕೈಮಗ್ಗ ವೃತ್ತಿಯಲ್ಲಿ ತೊಡಗಿದ್ದವರ ಸಂಖ್ಯೆ 12,500 ರಿಂದ ಮೂರು ಸಾವಿರಕ್ಕೆ ಕುಸಿದಿದೆ. ಅವರೂ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಪುನಶ್ಚೇತನಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವುದು ತುರ್ತು ಅಗತ್ಯವಾಗಿದೆ ಎಂದು ಎಂ.ಡಿ.ಲಕ್ಷ್ಮೀನಾರಾಯಣ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts