More

    ಅಂಗವಿಕಲರಿಗೆ ಅನುಕಂಪ ತೋರಿಸಿ, ಅವಮಾನಿಸದಿರಿ

    ಚನ್ನಗಿರಿ: ಅಂಗವಿಕಲರಿಗೆ ಅನುಕಂಪ ತೋರಿಸಿ, ಅವಮಾನ ಮಾಡಬಾರದು. ಪ್ರೀತಿಯಿಂದ ಗೌರವಿಸಿ ಪ್ರೋತ್ಸಾಹ ನೀಡಿದರೆ ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಲಹೆ ನೀಡಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಪಂಚಾಯಿತಿಯಿಂದ ನಿರ್ಬಂಧಿತ ಅನುದಾನದಡಿ ಅಂಗವಿಕಲರಿಗೆ ಸ್ವಯಂ ಚಾಲಿತ ದ್ವಿಚಕ್ರ ವಾಹನಗಳನ್ನು ಗುರುವಾರ ವಿತರಿಸಿ, ಮಾತನಾಡಿದರು.

    ಅಂಗವೈಕಲ್ಯ ಶಾಪವಲ್ಲ. ದೇವರು ಪ್ರತಿಯೊಬ್ಬರಿಗೂ ಕಲೆ, ಶಕ್ತಿ ನೀಡಿರುತ್ತಾನೆ. ಜತೆಗೆ ವಿಶೇಷವಾಗಿ ಅಂಗವಿಕಲರಲ್ಲಿ ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.

    ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತದೆ. ಅದರಲ್ಲಿ ಶೇ. 5 ಅಂಗವಿಕಲರಿಗಾಗಿ ಮೀಸಲಿಡಬೇಕು. ಶ್ರವಣಯಂತ್ರ, ಹಾಸಿಗೆ, ಊರುಗೋಲು ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಾಯಿತು.

    ನಿಶಕ್ತರಾದವರಿಗೆ ಓಡಾಡಲು ಜೀವನ ರೂಪಿಸುವುದಕ್ಕಾಗಿ 18 ಲಕ್ಷ ರೂ. ಕ್ರೋಢೀಕರಿಸಿ, 19 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ದ್ವಿಚಕ್ರ ವಾಹನ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಅವಶ್ಯಕತೆ ಇರುವವರಿಗೆ ನೀಡಲಾಗುವುದು ಎಂದರು.

    ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ಪ್ರಕಾಶ್ ಮಾತನಾಡಿ, ತಾಪಂಗೆ ಬರುವಂಥ ಅನುದಾನದಲ್ಲಿ ಶೇ. 5ರಷ್ಟನ್ನು ಅಂಗವಿಕಲರಿಗೆ ಮೀಸಲಿಟ್ಟು ಅದರಲ್ಲಿ ವಾಹನ ನೀಡಲಾಗಿದೆ. ಇದನ್ನು ಪಡೆದವರು ಸದ್ಬಳಕೆ ಮಾಡಿಕೊಂಡು ಜೀವನ ಕಟ್ಟಿಕೊಳ್ಳಬೇಕು ಎಂದರು.

    ಬಗರ್‌ಹುಕುಂ ಸಮಿತಿ ಸದಸ್ಯ ಕೆ.ಕೆಂಚಪ್ಪ, ಅಂಗವಿಕಲ ಸಮಿತಿ ರಾಜ್ಯಾಧ್ಯಕ್ಷ ಸುಬ್ರಮಣ್ಯ, ತಾಲೂಕು ಅಧ್ಯಕ್ಷ ಎಸ್.ಆರ್. ಲೋಕೇಶ್, ತಾಪಂ ಮಾಜಿ ಅಧ್ಯಕ್ಷ ಪಿ.ಲೋಹಿತ್‌ಕುಮಾರ್, ಚಂದನ್‌ಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts