More

    ಅಂಗವಿಕಲರ ಸ್ಥೈರ್ಯ ಎಲ್ಲರಿಗೂ ಸ್ಫೂರ್ತಿ: ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅಭಿಮತ

    ಶ್ರೀರಂಗಪಟ್ಟಣ: ಅಂಗನ್ಯೂನತೆ ಎಂಬುದು ದೈಹಿಕವಾಗಿ ಕಾಡಿದೆ ಹೊರತು ಮಾನಸಿಕವಾಗಿ ಹುರುಪು, ಸ್ಥೈರ್ಯ ಎಲ್ಲರಿಗೂ ಸ್ಫೂರ್ತಿ ನೀಡುವಂಥದ್ದು ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
    ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ನೂತನವಾಗಿ ರಚಿಸಿರುವ ಕಾವೇರಿ ತೀರದ ವಿಶೇಷ ಚೇತನರ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು. ಅಂಗವಿಕಲ ಎಂದಾಗ ಮನಸ್ಸಿಗೆ ನೋವಾಗಬಹುದು. ಆದರೆ ಸಮಾಜದಲ್ಲಿ ನಿಮ್ಮನ್ನು ಕೈಲಾಗದವರಂತೆ ಕಾಣುವವರು ನಿಜವಾದ ಅಂಗವಿಕಲ ಮನಸ್ಥಿತಿಯವರು. ಗ್ರಾಮೀಣ ಭಾಗದಲ್ಲಿ ಸಂಘಟನೆ ಮಾಡಿ ಟ್ರಸ್ಟ್ ಮೂಲಕ ಸದಸ್ಯರನ್ನು ನೋಂದಾಯಿಸಿ ಸರ್ಕಾರದ ಸೌಲಭ್ಯಗಳನ್ನು ಅಗತ್ಯವಿರುವ ಜನರಿಗೆ ತಲುಪಿಸಲು ಶ್ರಮ ಪ್ರಾಮಾಣಿಕವಾಗಿರಲಿ ಎಂದು ತಿಳಿಸಿದರು. ಟ್ರಸ್ಟ್ ವತಿಯಿಂದ ಅಂಗವಿಕಲ ಸಾಧಕರಿಗೆ ಗೌರವಿಸಿ ಅಭಿನಂದಿಸಲಾಯಿತು. ಟ್ರಸ್ಟ್‌ನ ಸದಸ್ಯರಿಗೆ ಫುಡ್ ವಿತರಣೆ ಮಾಡಲಾಯಿತು.
    ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ ಮಾತನಾಡಿದರು.
    ತಾಪಂ ವಿಶೇಷ ಚೇತನರ ಕೋ-ಆರ್ಡಿನೇಟರ್ ಕೃಷ್ಣ, ಗ್ರಾಮದ ಮುಖಂಡರಾದ ರಮೇಶ್, ಪಿಕಾರ್ಡ್ ಬ್ಯಾಂಕ್‌ನ ದೇವರಾಜು, ಕಾವೇರಿ ತೀರ ವಿಶೇಷ ಚೇತನ ಟ್ರಸ್ಟ್ ಅಧ್ಯಕ್ಷ ಮೀಸೆ ನಾಗರಾಜು, ಉಪಾಧ್ಯಕ್ಷ ಮಹದೇವು, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಮರಳಗಾಲ ಮಂಜುನಾಥ್, ನಿರ್ದೇಶಕರಾದ ರಾಮಚಂದ್ರು, ಚಿನ್ನಾಚಾರಿ ಸುರೇಶ್, ಗೋವಿಂದರಾಜು, ತಮ್ಮಯ್ಯ, ಸುರೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts