More

    24ಕ್ಕೆ ಸಂವಿಧಾನ ಉಳಿಸಿ ಆಂದೋಲನ

    ವಿಜಯಪುರ: ಬಿಜಾಪುರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಫೆ.24 ರಂದು ಮಧ್ಯಾಹ್ನ 3ಕ್ಕೆ ಕೊಲ್ಹಾರ ರಸ್ತೆಯ ಜುಮನಾಳ ಕ್ರಾಸ್ ಬಳಿಯ ವಿಶಾಲ ಜಾಗದಲ್ಲಿ ‘ಭಾರತೀಯ ಸಂವಿಧಾನ ಉಳಿಸಿ’ ಜನಾಂದೋಲನ ಹಮ್ಮಿಕೊಳ್ಳಲಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುವರೆಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಹಮೀದ್ ಮುಶ್ರೀಫ್ ಹೇಳಿದರು.
    ಈಗಾಗಲೇ ಬೃಹತ್ ಜನಾಂದೋಲನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. 12 ಎಕರೆ ವಿಶಾಲ ಜಾಗದಲ್ಲಿ ಆಂದೋಲನ ಸಂಘಟಿಸಲಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳ ಜನತೆ ಈ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನವಾಗಿದೆ. ಸಮಾನತೆ, ಜಾತ್ಯತೀತತೆ ಮುಂತಾದ ಉದಾತ್ತ ಧ್ಯೇಯಗಳನ್ನು ಒಳಗೊಂಡಿದೆ. ದೇಶದ ಪ್ರತಿಯೊಬ್ಬನಿಗೂ ಘನತೆಯಿಂದ ಬದುಕುವ ಹಕ್ಕನ್ನು ಸಂವಿಧಾನ ಕರುಣಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ದಂತಹ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಭಾರತೀಯ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಸಂವಿಧಾನ ವಿರೋಧಿ ನೀತಿಯನ್ನು ವಿರೋಧಿಸುವುದು ಭಾರತೀಯ ಪ್ರಜೆಗಳ ಕರ್ತವ್ಯವಾಗಿದೆ ಎಂದರು.
    ಮುಖಂಡ ಮೊಹ್ಮದ್‌ರಫೀಕ್ ಟಪಾಲ್ ಮಾತನಾಡಿ, ಆಂದೋಲನ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಜನರಿಗೂ ಸ್ಪಷ್ಟವಾಗಿ ಕಾರ್ಯಕ್ರಮ ಕಾಣಿಸುವಂತೆ ವ್ಯವಸ್ಥಿತ ರೀತಿಯಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದ್ದು, ಅದರ ಜತೆಗೆ 8012 ಅಡಿ ಅಳತೆಯ ಬೃಹತ್ ಎಲ್‌ಇಡಿ ಪರದೆ ಸೇರಿ 1612 ಅಳತೆಯ ಹಲವು ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ವಿವಿಧ ಮಠಾಧೀಶರು, ಹಿರಿಯ ರಾಜಕೀಯ ನೇತಾರರು, ಹೋರಾಟಗಾರರು, ಚಿಂತಕರು ಭಾಗವಹಿಸಿ ತಮ್ಮ ವಿಚಾರ ಮಂಡಿಸಲಿದ್ದಾರೆ ಎಂದು ತಿಳಿಸಿದರು.
    ಮುಸ್ಲಿಂ ಧರ್ಮಗುರು ಹಜರತ್ ಸೈಯ್ಯದ್ ತನ್ವೀರಪೀರಾ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಮಾಜಿ ಸಚಿವ ಯಶವಂತ್ ಸಿನ್ಹಾ, ಸಿಪಿಐ ರಾಷ್ಟ್ರೀಯ ಮುಖಂಡ ಸೀತಾರಾಮ ಯೆಚೂರಿ, ಕೇಂದ್ರ ಮಾಜಿ ಸಚಿವ ಶತ್ರುಘ್ನ ಸಿನ್ಹಾ, ಮಲ್ಲಿಕಾರ್ಜುನ ಖರ್ಗೆ, ಹಿರಿಯ ನ್ಯಾಯವಾದಿ ಭಾನುಪ್ರತಾಪ್ ಸಿಂಗ್, ವಿಶ್ರಾಂತ ಐಎಎಸ್ ಅಧಿಕಾರಿ ಸೈಯ್ಯದ್ ಜಮೀರ್ ಪಾಷಾ, ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲ್‌ಗೌಡ, ಭೀಮ್ ಆರ್ಮಿ ಸಂಸ್ಥಾಪಕ ಮುಖ್ಯಸ್ಥ ಚಂದ್ರಶೇಖರ ಆಜಾದ್, ಹಿರಿಯ ಚಿಂತಕ ಡಾ.ರಾಮ್, ಹೋರಾಟಗಾರ ಶಶಿಕಾಂತ ಸೆಂಥಿಲ್, ಪ್ರೊ.ಸುಷ್ಮಾ ಅಂಧಾರೆ, ಸಾಮಾಜಿಕ ಹೋರಾಟಗಾರ ಉಸ್ಮಾನ್‌ಶರ್ೀ ಆಗಮಿಸಲಿದ್ದಾರೆ ಎಂದು ತಿಳಿಸಿದರು.
    ನವದೆಹಲಿಯ ಉಲೇಮಾ-ಹಿಂದ್ ಕಾರ್ಯದರ್ಶಿ ಮೌಲಾನಾ ಮೆಹಮೂದ್ ಮದನಿ, ಖ್ಯಾತ ಚಿಂತಕ ಸ್ವಾಮಿ ಅಗ್ನಿವೇಶ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಶ್ರೀ, ಹುಬ್ಬಳ್ಳಿಯ ಸೈಯ್ಯದ್ ತಾಜುದ್ದೀನ್ ಖಾದ್ರಿ, ಬೆಂಗಳೂರು ಮೌಲಾನಾ ಶಬ್ಬೀರ ನದ್ವಿ, ರಾಯಚೂರಿನ ಸೈಯ್ಯದ್ ತಾಜುದ್ದೀನ್ ನೂರ್‌ದರೀಯಾ, ಉತ್ತರ ಪ್ರದೇಶದ ಮೌಲಾನಾ ತೌಕೀರ್ ರಜಾ ಖಾನ್, ಶ್ರೀ ಕೊರಣೇಶ್ವರ ಸ್ವಾಮೀಜಿ, ಕ್ರೈಸ್ತ್ ಧರ್ಮಗುರು ಡಾ. ಪೀಟರ್, ಡಾ. ಜ್ಞಾನಪ್ರಕಾಶ ಸ್ವಾಮೀಜಿ, ಇಳಕಲ್ಲ ಗುರು ಮಹಾಂತ ಸ್ವಾಮೀಜಿ, ಮೌಲಾನಾ ಮಕ್ಸೂದ್ ಅಹ್ಮದ್ ರಶ್ದಿ, ಮೌಲಾನಾ ಅಬ್ದುಲ್‌ಹಸೀಬ್ ಮದ್ನಿ ಮತ್ತಿತರರು ಪಾಲ್ಗೊಳ್ಳುವರೆಂದು ವಿವರಿಸಿದರು.
    ಮುಖಂಡರಾದ ಅಬ್ದುಲ್‌ರಜಾಕ್ ಹೊರ್ತಿ, ಅಡಿವೆಪ್ಪ ಸಾಲಗಲ್ಲ, ಶ್ರೀನಾಥ ಪೂಜಾರಿ, ಭೀಮಶಿ ಕಲಾದಗಿ, ಪ್ರಭುಗೌಡ ಪಾಟೀಲ, ಮೈನುದ್ದೀನ್ ಬೀಳಗಿ, ಯಾಜ್ ಕಲಾದಗಿ, ರ್ಇಾನ್ ಶೇಖ, ಇದ್ರೂಸ್ ಭಕ್ಷಿ, ದಸ್ತಗೀರ ಸಾಲೋಟಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts