More

    ಹಮಾಲರಿಗೆ ಆರ್ಥಿಕ ನೆರವು ಒದಗಿಸಲು ಒತ್ತಾಯಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಮನವಿ

    ಯಲಬುರ್ಗಾ: ಕೋವಿಡ್-19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಹಾಗೂ ಸಿದ್ಧರಾಮೇಶ್ವರ ಹಮಾಲರ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು.

    ಸಂಘದ ಅಧ್ಯಕ್ಷ ಕಲ್ಲಪ್ಪ ಬಂಗಾಳಿಗಿಡದ ಮಾತನಾಡಿ, ಕರೊನಾ ಲಾಕ್‌ಡೌನ್‌ನಿಂದ ಕಳೆದ ಎರಡು ತಿಂಗಳಿಂದಲೂ ಹಮಾಲಿ ಕಾರ್ಮಿಕರು ಮತ್ತು ನಾನಾ ದಿನಗೂಲಿ ಕಾರ್ಮಿಕರಿಗೆ ಕುಟುಂಬ ನಿರ್ವಹಣೆ ಮಾಡಕಲು ಕಷ್ಟಕರವಾಗಿದೆ. ಸಿಎಂ ಬಿಎಸ್‌ವೈ ಅವರು ಕಾರ್ಮಿಕರಿಗೆ ವಿಶೇಷ ಪ್ಯಾಕೆಜ್ ಘೋಷಿಸಿರುವುದು ಸ್ವಾಗತಾರ್ಹ. ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುವ ಹಮಾಲರು ಮತ್ತು ಸರಬರಾಜು ಮಾಡುತ್ತಿರುವ ಕಾರ್ಮಿಕರಿಗೆ ಇದು ಅನ್ವಯವಾಗಿಲ್ಲ. ಕೂಡಲೇ ಎಲ್ಲ ಕಾರ್ಮಿಕರಿಗೆ ಸಮರ್ಪಕವಾಗಿ ಅನ್ವಯವಾಗುವಂತೆ ಪ್ಯಾಕೇಜ್ ಘೋಷಣೆ ಮಾಡಬೇಕು. ಕನಿಷ್ಠ 10 ಸಾವಿರ ರೂ. ಗಳ ಆರ್ಥಿಕ ನೆರವು ಮತ್ತು ಎರಡು ತಿಂಗಳಿಗೆ ಆಗುವಷ್ಟು ಕಿಟ್ ನೀಡಬೇಕು. ಕರೊನಾ 3ನೇ ಹಂತದ ಸೇನಾನಿಗಳೆಂದು ಪರಿಗಣಿಸಿ ವಿಮಾ ವ್ಯವಸ್ಥೆ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಪದಾಧಿಕಾರಿಗಳಾದ ಸಿದ್ದಪ್ಪ ದಂಡಿನ್, ಶಂಕ್ರಪ್ಪ ತಳುವಗೇರಿ, ಅಲ್ಲಾಭಕ್ಷಿ ಮಲ್ಲಾನೂರ್, ಹಜರತ್‌ಸಾಬ್, ಸಂಗಪ್ಪ ಹೊಸಳ್ಳಿ, ಮುಖಂಡರಾದ ಅಬ್ದುಲ್‌ರಜಾಕ್, ಉಮೇಶ ಗುಡದಪ್ಪನವರ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts