More

  ಹಾಫ್ ಬಾಯಿಲ್ಡ್ ರೆಡಿ; ಬ್ಯಾಚಲರ್​ ಬಾಯ್ಸ್​ ಕಾಮಿಡಿ ಸಿನಿಮಾ

  ‘ಹಾಫ್ ಬಾಯಿಲ್ಡ್’ ರೆಡಿಯಾಗಿದೆ. ಹಾಗಂತ ಇದು ಹಾಫ್ ಬಾಯಿಲ್ಡ್ ಮೊಟ್ಟೆ ಅಲ್ಲ, ‘ನಾವೆಲ್ರೂ ಹಾಫ್ ಬಾಯಿಲ್ಡ್’ ಎಂಬ ಚಿತ್ರ. ಹೀಗೊಂದು ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಮಾಡಲಾಗಿದ್ದು, ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಶುಕ್ರವಾರ (ಜ.24) ಬಿಡುಗಡೆ ಆಗಲಿರುವುದರಿಂದ ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.

  ಚಿತ್ರಕ್ಕೆ ನಟ ತಬಲಾ ನಾಣಿ ಸಂಭಾಷಣೆ ಬರೆದಿರುವುದು ವಿಶೇಷ. ಇಷ್ಟು ದಿನ ನಟನೆ ಮೂಲಕ ರಂಜಿಸುತ್ತಿದ್ದ ಅವರು, ಈ ಚಿತ್ರದಲ್ಲಿ ಸಂಭಾಷಣೆ ಮೂಲಕ ಕಚಗುಳಿ ಇಟ್ಟಿದ್ದಾರಂತೆ. ಚಿತ್ರದ ಬಗ್ಗೆ ಮಾತನಾಡುವ ನಾಣಿ, ‘ನಟನ ಚಿಕ್ಕಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರತಿ ಮಾತಿನಲ್ಲಿ ಹಾಸ್ಯವಿದೆ. ಉಳಿದ ಪಾತ್ರಧಾರಿಗಳು ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಮೊದಲ ಬಾರಿಗೆ ಚಿತ್ರಕ್ಕೆ ಸಂಭಾಷಣೆ ಬರೆದಿದ್ದೇನೆ’ ಎಂದರು.

  ‘ನಾಲ್ಕು ಜನ ಬ್ಯಾಚಲರ್​ಗಳು ಜೀವನದಲ್ಲಿ ಹೇಗಿರುತ್ತಾರೆ ಎಂಬುದನ್ನು ತಿಳಿಸುವುದೇ ಚಿತ್ರಕಥೆ. ಅವರಿಗೆ ಜೀವನದ ಬಗ್ಗೆ ಏನೂ ಗೊತ್ತಿರುವುದಿಲ್ಲ, ಎಲ್ಲವೂ ಅರ್ಧಂಬರ್ಧ ತಿಳಿದಿರುತ್ತದೆ. ಹಾಗಾಗಿ ಚಿತ್ರಕ್ಕೆ ‘ನಾವೆಲ್ರೂ ಹಾಫ್ ಬಾಯಿಲ್ಡ್’ ಹೆಸರಿಡಲಾಯಿತು’ ಎಂದು ವಿವರಿಸಿದರು ನಿರ್ದೇಶಕ ಬಿ. ಶಿವರಾಜ್ ವೆಂಕಟಚ್ಚ.

  ‘ಚಿತ್ರರಂಗಕ್ಕೆ ಬರಬೇಕು ಎಂಬ ತುಂಬ ದಿನದ ಆಸೆ ಈ ಚಿತ್ರದ ಮೂಲಕ ನೆರವೇರಿದೆ. ಶೂಟಿಂಗ್ ಜಾಗ ಹುಡುಕಿಕೊಂಡು ನಮ್ಮೂರಿಗೆ ಬಂದಿದ್ದ ನಿರ್ದೇಶಕರು ಚಿತ್ರದ ಕಥೆ ಹೇಳಿ, ನಿರ್ವಪಕರನ್ನು ಹುಡುಕುತ್ತಿದ್ದೇನೆ ಎಂದರು. ಕಥೆ ಚೆನ್ನಾಗಿದೆ ಅನಿಸಿದ್ದರಿಂದ ನಾನೇ ಸಿನಿಮಾ ನಿರ್ವಿುಸಲು ಒಪ್ಪಿದೆ’ ಎಂದರು ನಿರ್ವಪಕ ಅಮೀರ್ ಅಹ್ಮದ್.

  ಪ್ರಮುಖ ಪಾತ್ರಧಾರಿಗಳಾದ ಡಿ.ಕೆ.ಸುನೀಲ್ ಕುಮಾರ್, ದೀಪಕ್, ಮಂಜು ಬದ್ರಿ, ಹಂಪೇಶ್ ಅರಸುರ್, ಮಾತಂಗಿ ಪ್ರಸನ್ನ, ವಿನ್ಯಾ ಶೆಟ್ಟಿ ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು. ವಿಜೀತ್ ಕೃಷ್ಣ ಸಂಗೀತ, ಕುಶೇಂದರ್ ರೆಡ್ಡಿ ಛಾಯಾಗ್ರಹಣ, ಕೆ.ನಾಗೇಂದ್ರ, ವೈ.ಎಸ್.ಶ್ರೀಧರ್ ಸಂಕಲನ ಈ ಚಿತ್ರಕ್ಕಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts