More

    ಲಸಿಕೆಗಳು ಶೇ.50 ಯಶಸ್ಸು ಪಡೆದರೂ ಕರೊನಾ ನಿಗ್ರಹ; ಅಮೆರಿಕ ತಜ್ಞ ಅಭಿಮತ; ಆಶಾದಾಯಕ ಬೆಳವಣಿಗೆ

    ನವದೆಹಲಿ: ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋಣಿ ಫೌಸಿ ಕರೊನಾ ಲಸಿಕೆಗಳ ಬಗ್ಗೆ ಬಹುಮುಖ್ಯ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ.

    ಜಗತ್ತಿನ ವಿವಿಧೆಡೆ ಸಂಶೋಧನೆ ನಡೆಸಲಾಗುತ್ತಿರುವ ಲಸಿಕೆಗಳು ಅಂತಿಮವಾಗಿ ಶೇ.50 ಯಶಸ್ಸು ಗಳಿಸಿದರೂ ಕೋವಿಡ್​ ನಿಯಂತ್ರಿಸಬಹುದು ಎಂದು ಹೇಳಿದ್ದಾರೆ.
    ಹೀಗಾಗಿ ಯಾವುದೇ ಒಂದು ಅಥವಾ ಕೆಲವೇ ಲಸಿಕೆಗಳ ಮೇಲೆ ಅವಲಂಬಿತವಾಗಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ. ಇದು ಅತ್ಯಂತ ಆಶಾದಾಯಕ ವಿಚಾರ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಏಕೆಂದರೆ, ಜಗತ್ತಿನಲ್ಲೀಗ ಕರೊನಾ ನಿಗ್ರಹಕ್ಕಾಗಿ 200ಕ್ಕೂ ಹೆಚ್ಚು ಲಸಿಕೆಗಳ ಸಂಶೋಧನೆ, ಅಭಿವೃದ್ಧಿ ನಡೆಯುತ್ತಿದೆ. ಕೆಲವು ಈ ಪೈಪೋಟಿಯಲ್ಲಿದ್ದರೆ, ಕೆಲವು ಈಗಷ್ಟೇ ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ ಬಂದಿವೆ. ಇವುಗಳು ಶೇ.50 ರಷ್ಟು ಯಶಸ್ಸುಗಳಿಸಿದರೂ ಕರೊನಾ ವೈರಸ್​ ಮಹಾಮಾರಿಯನ್ನು ಸೋಲಿಸಬಲ್ಲವು ಎಂದು ಫೌಸಿ ಹೇಳಿದ್ದಾರೆ.

    ಇದನ್ನೂ ಓದಿ; ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ 

    ಜತೆಗೆ, ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅತ್ಯಂತ ಸುರಕ್ಷಿತ ಲಸಿಕೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ಸಂಶೋಧನೆಯಲ್ಲಿರುವ ಲಸಿಕೆಗಳು ಶೇ.50 ಯಶಸ್ಸಿನ ಪ್ರಮಾಣ ಹೊಂದಿದ್ದರೂ ಒಂದು ವರ್ಷದಲ್ಲಿ ಜಗತ್ತು ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನವೆಂಬರ್​ 3ರ ಒಳಗೆ ಅಂದರೆ ಚುನಾವಣೆ ದಿನಾಂಕಕ್ಕೂ ಮುನ್ನ ಲಸಿಕೆ ತಯಾರಾಗಲಿದೆ ಎಂದು ಹೇಳಿದ್ದಾರೆ. ಆದರೆ, 2021ರ ಆರಂಭಕ್ಕಷ್ಟೇ ಸಾರ್ವಜನಿಕರಿಗೆ ಈ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

    ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts