More

    ಹಜ್ ಯಾತ್ರಿಕರಿಗೆ ಕೋವಿಡ್ ಲಸಿಕೆ ಕಡ್ಡಾಯ

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
    ಈ ಬಾರಿ ಕರ್ನಾಟಕದಿಂದ 7,142ಕ್ಕೂ ಹೆಚ್ಚು ಮಂದಿ ಯಾತ್ರಾರ್ಥಿಗಳು ಹಜ್ ಯಾತ್ರೆ ಮಾಡಲಿದ್ದಾರೆ. ಎಲ್ಲರಿಗೂ ಕೋವಿಡ್ ಲಸಿಕೆ ಕಡ್ಡಾಯವಾಗಿದೆ.

    ಇಸ್ಲಾಂ ಧರ್ಮೀಯರಿಗೆ ಹಜ್ ಯಾತ್ರೆ ಅತ್ಯಂತ ಪವಿತ್ರವಾಗಿದ್ದು, ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ- ಮದೀನಾಕ್ಕೆ ಹೋಗಿ ಹಜ್ ಕರ್ಮಗಳನ್ನು ಪೂರೈಸಬೇಕು ಎಂಬುದು ಈ ಸಮುದಾಯದ ಪ್ರತಿಯೊಬ್ಬರ ಮಹದಾಸೆಯಾಗಿದೆ.

    ಕೇಂದ್ರ ಮತ್ತು ರಾಜ್ಯ ಹಜ್ ಸಮಿತಿಯಿಂದ ಆಯ್ಕೆಯಾದವರಿಗೆ ಯಾತ್ರೆಗೆ ಹೊರಡಲು ಅವಕಾಶವಿದ್ದು, ಇದಕ್ಕೂ ಮುನ್ನ ಇವರೆಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.

    ರಾಜ್ಯದಲ್ಲಿ ಮೇ 25ರವರೆಗೂ ಆರೋಗ್ಯ ಇಲಾಖೆಯಿಂದ ಆಯಾ ಜಿಲ್ಲೆಗಳಲ್ಲೇ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಲಾಗಿದೆ.

    ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮತಿ ಇರಾನಿ ಅವರು ಹಜ್ ಸಂಬಂಧ 2023ರ ಕೆಎಸ್‌ಎಯಲ್ಲಿ ಹಾಜಿಗಳಿಗೆ ಸೇವೆ ಸಲ್ಲಿಸಲು ಆಯ್ಕೆಯಾದ ನಿಯೋಗಿಗಳ ಆಡಳಿತ ಮತ್ತು ವೈದ್ಯಕೀಯ ತಂಡಕ್ಕಾಗಿ ಈಚೆಗೆ ಆಯೋಜಿಸಿದ್ದ ತರಬೇತಿಯಲ್ಲಿ ಅನೇಕರು ಪಾಲ್ಗೊಂಡಿದ್ದರು.

    ಭಾರತ ಮತ್ತು ಕೆಎಸ್‌ಎ ನಡುವಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ಬಾರಿ ದೇಶದಿಂದ 1.75 ಲಕ್ಷ ಯಾತ್ರಿಕರು (ಹಾಜಿಗಳು) ಯಾತ್ರೆಗೆ ಹೊರಡಲಿದ್ದಾರೆ ಎಂಬ ಮಾಹಿತಿ ಇದೆ.

    ಲಸಿಕೆ ಎಲ್ಲೆಲ್ಲಿ ?
    ದಿನಾಂಕ- ಸ್ಥಳ

    ಮೇ 17-ಚಿಕ್ಕಮಗಳೂರು, ಕಲಬುರ್ಗಿ/ಯಾದಗಿರಿ, ಧಾರವಾಡ/ಗದಗ, ಚಿತ್ರದುರ್ಗ, ರಾಯಚೂರು
    18- ಬೆಳಗಾವಿ, ಬೀದರ್, ಮೈಸೂರು/ಮಂಡ್ಯ/ಕೊಡಗು/ಚಾಮರಾಜನಗರ, ದಾವಣಗೆರೆ
    20- ಚಿಕ್ಕಬಳ್ಳಾಪುರ/ರಾಮನಗರ, ಬಳ್ಳಾರಿ/ಕೊಪ್ಪಳ/ವಿಜಯನಗರ
    22- ಬಾಗಲಕೋಟೆ/ಕೋಲಾರ/ಹಾಸನ
    23- ವಿಜಯಪುರ
    24- ತುಮಕೂರು/ಉತ್ತರಕನ್ನಡ
    24/25-ಬೆಂಗಳೂರು ಗ್ರಾಮಾಂತರ/ಬೆಂಗಳೂರು ನಗರ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts