More

    Photos| ರಾಜ್ಯದಲ್ಲಿ ಆಲಿಕಲ್ಲು ಮಳೆ! ಮಂಜು ಹೊದ್ದು ಮಲಗಿವೆ ಹಲವು ಗ್ರಾಮಗಳು

    ಕೊಡಗು: ಶನಿವಾರಸಂತೆ ಸಮೀಪದ ಹಲವು ಗ್ರಾಮದಲ್ಲಿ ಶುಕ್ರವಾರ ಆಲಿಕಲ್ಲು ‌ಮಳೆ ಧಾರಾಕಾರವಾಗಿ ಆಗಿದ್ದು, ಜನತೆಯಲ್ಲಿ ಅಚ್ಚರಿ ಮೂಡಿಸಿದೆ. ಜಮ್ಮುಕಾಶ್ಮೀರದಲ್ಲಿ‌ ಮಂಜು ಮಳೆ ಬಿದ್ದಂತೆ ಇಲ್ಲೂ ಗೋಲಿ ಗಾತ್ರದ ರಾಶಿ-ರಾಶಿ ಆಲಿಕಲ್ಲುಗಳು ಬಿದ್ದಿವೆ. ಅಂಕನಹಳ್ಳಿ, ನಿಡ್ತ, ಮೆಣಸ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಇಡೀ ವಾತವರಣ ಆಲಿಕಲ್ಲುಗಳಿಂದ ಹರಡಿಕೊಂಡಿತ್ತು. ಮಧ್ಯಾಹ್ನ 1 ಗಂಟೆಗೆ ಆರಂಭವಾದ ಆಲಿಕಲ್ಲು ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿದಿದೆ. ನೀರಿನ ಬದಲು‌‌ ಆಲಿಕಲ್ಲು ಸುರಿದ ಪರಿಣಾಮ ರೈತರು ಕಂಗಲಾಗಿದ್ದಾರೆ. ಕಾಳುಮೆಣಸು, ಕಾಫಿ ‌ಬೆಳೆ ಹಾನಿಯಾಗಿದೆ. ಇನ್ನು ಇಂತಹ ಮಳೆಯನ್ನು ಜೀವಮಾನದಲ್ಲಿ ಎಂದೂ ಕಂಡಿರಲಿಲ್ಲ ಎಂದ ಸ್ಥಳೀಯರು ಆಶ್ಚರ್ಯದಿಂದ ಆಲಿಕಲ್ಲುಗಳನ್ನು ನೋಡುತ್ತಿದ್ದ ದೃಶ್ಯ ಕಂಡು ಬಂತು. ಮಳೆ ನಂತರ ತುಸು ಬಿಸಿಲಿನ ವಾತಾವರಣ ಕಂಡುಬಂದಿದೆ. ಜಿಲ್ಲೆಯಾದ್ಯಂತ ಇಂದು ಮೋಡ ಕವಿದ ವಾತಾವಣರವಿದೆ. ಹಾಸನದಲ್ಲೂ ಅಲ್ಲಲ್ಲಿ ಆಲಿಕಲ್ಲು ಮಳೆಯಾಗಿದೆ. ಇನ್ನು ಶನಿವಾರಸಂತೆಯಲ್ಲಿ ಆಲಿಕಲ್ಲು ಮಳೆಯ ಫೋಟೋಗಳು ಇಲ್ಲಿವೆ ನೋಡಿ.

    3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

    ಒಂದೂವರೆ ವರ್ಷದ ಮಗು ಕೊಂದಿದ್ದ ಪಾಪಿ ತಂದೆಗೆ ಗಲ್ಲುಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts