More

    ಮೋರಿಗೇರಿ ದುರ್ಗಾಂಬಿಕಾದೇವಿ ಜಾತ್ರೆ ಅದ್ದೂರಿ

    ಹಗರಿಬೊಮ್ಮನಹಳ್ಳಿ: ಕಾರಣಹುಣ್ಣಿಮೆ ನಿಮಿತ್ತ ತಾಲೂಕಿನ ಮೋರಿಗೇರಿ ಗ್ರಾಮದೇವತೆ ಶ್ರೀ ಮರಡಿ ದುರ್ಗಾಂಬಿಕಾದೇವಿ ಜಾತ್ರೆ ಅದ್ದೂರಿಯಾಗಿ ಬುಧವಾರ ನೆರವೇರಿತು.

    ಎರಡು ದಿನ ನಡೆದ ಕಾರ್ಯಕ್ರಮಗಳಲ್ಲಿ ದೇವಸ್ಥಾನದಲ್ಲಿ ಸಂಜೆ ನಿಲೆ ಹಾಕಿದ ನಂತರ ಭಕ್ತರು ಕುಟುಂಬ ಸಮೇತ ಬಂದು ದೇವಿಗೆ ಉಡಿತುಂಬಿದರು. ಕೆಲವರು ದೀರ್ಘದಂಡ ನಮಸ್ಕಾರ ಹಾಕಿದರೆ, ಕೆಲವರು ಗೌರಿಕಳಸ ಹೊರುವ ಹರಕೆ ತೀರಿಸಿದರು. ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯನ್ನು ಮೆರವಣಿಗೆ ಮೂಲಕ ಮರಡಿಗುಡ್ಡದ ಮೇಲಿರುವ ದೇವಸ್ಥಾನಕ್ಕೆ ತಂದು ಕೂರಿಸಲಾಯಿತು. ಗದ್ದಿಕೇರಿ, ಹೊಳಗುಂದಿ, ಹಗರಿಬೊಮ್ಮನಹಳ್ಳಿ, ಇಟಗಿ ಮುಂತಾದ ಊರುಗಳಿಂದ ನೂರಾರು ಭಕ್ತರು ಆಗಮಿಸಿ, ಕಾಯಿ, ಕರ್ಪೂರ, ಮಂಗಳಾರತಿ ಸಮರ್ಪಿಸಿದರು.

    ಈ ಜಾತ್ರೆಯ ವಿಶೇಷ ಆಕರ್ಷಣೆ ಹಳ್ಳಿಬಂಡಿ ಉತ್ಸವವನ್ನು ಊರಿನ ವಿವಿಧ ಸಂಘಟನೆಗಳು ನಡೆಸಿದವು. ರೈತರು ಜೋಡಿ ಎತ್ತುಗಳನ್ನು ಅಲಂಕರಿಸಿ ಹಳ್ಳಿಬಂಡಿಗೆಯೊಂದಿಗೆ ಸಾಲಾಗಿ ಊರಿನ ಸುತ್ತ ಮೆರವಣಿಗೆ ನಡೆಸಿದರು. ವಾದ್ಯಗಳು ಶೋಭೆ ಹೆಚ್ಚಿಸಿದವು.

    ಮೋರಿಗೇರಿ ದುರ್ಗಾಂಬಿಕಾದೇವಿ ಜಾತ್ರೆ ಅದ್ದೂರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts