More

    ಹೋರಾಟಗಾರರ ನಿರ್ಲಕ್ಷ್ಯ ಸಲ್ಲ: ತಾಪಂ ಸದಸ್ಯ ಬುಡ್ಡಿ ಬಸವರಾಜ ಆರೋಪ

    ಹಗರಿಬೊಮ್ಮನಹಳ್ಳಿ: ವರುಣನ ಕೃಪೆಯಿಂದ ಮಾಲವಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ವಿವಿಧ ಸಂಘಟನೆಗಳಿಗೆ ಸಂತಸ ಮೂಡಿಸಿದೆ ಎಂದು ಕರವೇ ತಾಲೂಕಾಧ್ಯಕ್ಷ, ತಾಪಂ ಸದಸ್ಯ ಬುಡ್ಡಿ ಬಸವರಾಜ ಹೇಳಿದರು.

    ಮಾಲವಿ ಜಲಾಶಯದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಮಾಲವಿ ಜಲಾಶಯಕ್ಕೆ ಶಾಶ್ವತ ನಿರೋದಗಿಸುವ ಯೋಜನೆಗೆ ಒತ್ತಾಯಿಸಿ ತಾಲೂಕಿನ 30 ಕ್ಕೂ ಹೆಚ್ಚು ಸಂಘಟನೆಗಳಿಂದ ಹೋರಾಟ ನಡೆಸಲಾಗಿದೆ. ಡ್ಯಾಂ ಭರ್ತಿಯಾಗಿದ್ದಕ್ಕೆ ಶಾಸಕರು ಹೋರಾಟಗಾರರನ್ನು ನಿರ್ಲಕ್ಷಿಸಿ ಬಾಗಿನ ಅರ್ಪಿಸಿದ್ದಾರೆ. ಹೋರಾಟಗಾರರು ಜಲಾಶಯಕ್ಕೆ ಅನುದಾನ ನೀಡುವಂತೆ ಸರ್ಕಾರದ ಗಮನಸೆಳೆದ ಪರಿಣಾಮ ಹೋರಾಟಕ್ಕೆ ಸ್ಪಂದಿಸಿ ಮಾಜಿ ಸಿಎಂ ಸಿದ್ದರಾಮಯ್ಯನವರು ಅನುದಾನ ನೀಡಿದ್ದಾರೆ ಎಂಬುದು ಮರೆಯುವಂತಿಲ್ಲ ಎಂದರು.

    ರೈತ ಮುಖಂಡ ಅಂಬಾಡಿ ನಾಗರಾಜ ಮಾತನಾಡಿದರು. ಇದಕ್ಕೂ ಮುನ್ನ ಮಾಲವಿ ಗ್ರಾಮದ ಮೈಲಾರಲಿಂಗೇಶ್ವರ ದೇಗುಲದಿಂದ ಜಲಾಶಯದವರೆಗೆ ಮೆರವಣಿಗೆ ಸಾಗಿತು. ಡೊಳ್ಳು ಕುಣಿತ, ವಿವಿಧ ವಾದ್ಯವೃಂದ ಹಾಗೂ ಮಹಿಳೆಯರು ಕಳಸಹೊತ್ತು ಸಾಗಿದರು.

    ಉತ್ತಂಗಿ ಮಠದ ಸೋಮಶೇಖರ ದೇವರು ಸ್ವಾಮೀಜಿ, ಗದ್ದಿಕೇರಿ ಹಿರೇಮಠದ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ಮುಖಂಡ ಅಂಬಾಡಿ ನಾಗರಾಜ, ಕನ್ನಡ ಪರ ಸಂಘಟನೆಗಳ ಅಧ್ಯಕ್ಷರಾದ ಇ.ಭರತ್, ನಾಣಿಕೇರಿ ಭರಮಜ್ಜ, ಕನ್ನಿಹಳ್ಳಿ ಚಂದ್ರಶೇಖರ್, ಸಂಚಿ ಶಿವಕುಮಾರ, ಕಾನಿಪ ಸಂಘದ ಅಧ್ಯಕ್ಷ ಉಮಾಪತಿ ಶೆಟ್ಟರ್, ಆಟೋ ಚಾಲಕರ ಸಂಘದ ಕೈಲಾಸಮೂರ್ತಿ, ಸಿಪಿಐಎಂನ ಎಸ್.ಜಗನ್ನಾಥ, ಮಾಳಮ್ಮ, ಮಾತನಾಡಿದರು. ಪುರಸಭೆ ಸದಸ್ಯರಾದ ಬಿ.ಗಂಗಾಧರ, ಜೋಗಿ ಹನುಮಂತ, ಕೆ.ಎಂ.ನವೀನ್, ಬಣಕಾರ ಸುರೇಶ್, ನಾಗರಾಜ ಜನ್ನು, ಪ್ರಮುಖರಾದ ಕೆ.ರಾಮಣ್ಣ, ಕೆ.ಮೈಲಾರಪ್ಪ, ಸಂಪತ್ ಕುಮಾರನಾಯ್ಕ, ಅನಿಲ್ ಕುಮಾರ ಜಾಣಾ, ಸಂತೋಷ ಪೂಜಾರ, ಎಂ.ಗುರುಬಸವರಾಜ, ವಿಶ್ವನಾಥ, ಪೂಜಾರ ಸಿದ್ದಪ್ಪ, ಅಂಬಳಿ ಕೇಶವಮೂರ್ತಿ, ವೆಂಕಟೇಶ್ ಉಪ್ಪಾರ, ಬಾಬು ಸೇರಿದಂತೆ ಅನೇಕ ಸಂಘಟನೆ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts