More

    ಕಗ್ಗತ್ತಲಲ್ಲಿ ಹೊಯ್ಸಳೇಶ್ವರ ದೇಗುಲ

    ಹಾಸನ: ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲ್ಯಕ್ಷ್ಯದಿಂದಾಗಿ ಹಳೇಬೀಡಿನ ಐತಿಹಾಸಿಕ ಹೊಯ್ಸಳೇಶ್ವರ ದೇಗುಲವು ಹತ್ತು ದಿನಗಳಿಂದ ಕಗ್ಗತ್ತಿನಲ್ಲಿ ಇರುವಂತಾಗಿದೆ.

    ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣ ಸೆಸ್ಕ ಸಿಬ್ಬಂದಿ ಸಂಪರ್ಕ ಕಡಿತಗೊಳಿಸಿದ್ದು ೬ ತಿಂಗಳ ಬಾಕಿ ೪೫,೦೦೦ ರೂ. ಪುರಾತತ್ವ ವಿಭಾಗ ಪಾವತಿಸಬೇಕಿದೆ. ಪ್ರತಿನಿತ್ಯ ದೇಗುಲಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಹಾಗೂ ಭಕ್ತಾದಿಗಳು ಅಧಿಕಾರಿಗಳ ಉದಾಸೀನ ಮನೋಭಾವ ತಿಳಿದು ಬೇಸರ ವ್ಯಕ್ತಪಡಿಸುತ್ತಿದ್ದು, ದೇಗುಲದ ಒಳಭಾಗದ ಶಿಲ್ಪಕಲೆಯನ್ನು ಸವಿಯಲಾಗದೆ ನಿರಾಶರಾಗುತ್ತಿದ್ದಾರೆ. ಸಾವಿರಾರು ಜನ ಭೇಟಿ ಕೊಡುವ ದೇಗುಲದ ವಿದ್ಯುತ್ ಬಿಲ್ ಭರಿಸಲಾಗದ ಪುರಾತತ್ವ ಇಲಾಖೆ ವಿರುದ್ಧ ಸಹಜವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ಇದೇ ಕಾರಣಕ್ಕೆ ದೇಗುಲದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಸೆಸ್ಕ್ ಸಿಬ್ಬಂದಿ, ಬಾಕಿ ಪಾವತಿಸುವುದಾಗಿ ಹೇಳಿದ್ದ ಪುರಾತತ್ವ ವಿಭಾಗದ ಅಧಿಕಾರಿಗಳ ಭರವಸೆ ಮೇರೆಗೆ ಹಾಗೂ ಅರ್ಚಕರ ಮನವಿ ಆಲಿಸಿ ಪುನಃ ಸಂಪರ್ಕ ಕಲ್ಪಿಸಿದ್ದರು. ಅಂದಿನಿಂದಲೂ ಬಿಲ್ ಬಾಕಿ ಇದ್ದು, ಈಗ ಮೊತ್ತವೂ ಹೆಚ್ಚಾಗಿರುವ ಕಾರಣ ನಿಯಮಾನುಸಾರ ಕನೆಕ್ಷನ್ ಸ್ಥಗಿತಗೊಳಿಸಲಾಗಿದೆ. ಸಾವಿರಾರು ರೂಪಾಯಿ ಬಾಕಿ ಇದ್ದರೂ ಮರುಸಂಪರ್ಕ ಕಲ್ಪಿಸಿದ್ದನ್ನು ಪ್ರಶ್ನಿಸಿ‌ ಮೇಲಧಿಕಾರಿಗಳು ಸೆಸ್ಕ್ ಸಿಬ್ಬಂದಿಗೆ ಕಾರಣ ಕೇಳಿ‌ ನೊಟೀಸ್ ನೀಡಿದ್ದು, ಬಿಲ್ ಪಾವತಿಸದೆ ನಾವೇನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಹೇಸರು ಹೇಳಲಿಚ್ಚಿಸದ ಸಿಬ್ಬಂದಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts