More

    ಎಚ್.ಡಿ. ರೇವಣ್ಣ ಅರ್ಜಿ ತಿರಸ್ಕಾರವಾಗಿದ್ದು ಯಾಕೆ ?

    ಮೈಸೂರು: ಮಾಜಿ ಸಚಿವ ಎಚ್.ಡಿ. ರೇವಣ್ಣ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರೇವಣ್ಣ ಮೇಲೆ ಏನು ಕೇಸ್ ಇಲ್ಲ ಎಂದಾದರೆ ನಿರೀಕ್ಷಣಾ ಜಾಮೀನಿಗೆ ಯಾಕೆ ಅರ್ಜಿ ಹಾಕಿದ್ದರು. ಇದರಲ್ಲಿ ರಾಜಕೀಯ ಎಲ್ಲಿಂದ ಬಂತು? ಅಪರಾಧವಾಗಿಲ್ಲ ಎಂದಾದರೆ ಜಾಮೀನು ಅರ್ಜಿ ಯಾಕೆ ತಿರಸ್ಕಾರ ಆಗಿದೆ ಎಂದರು.

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲ ಸ್ಥಾನ ಬಂದಿದ್ದಾರೆ. ಒಳ್ಳೆಯ ಶಿಕ್ಷಣ ಸಿಗುವ ಉದ್ದೇಶದಿಂದ ಮೊರಾರ್ಜಿ ದೇಸಾಯಿ ಶಾಲೆ ತೆಗೆಯಲಾಗಿದೆ. ನಾನು 1994ರಲ್ಲಿ ಡಿಎಸ್‌ಎಸ್ ಸಂಪರ್ಕದಲ್ಲಿದೆ. ಅವರ ಬೇಡಿಕೆಯಂತೆ ಆ ಶಾಲೆಗಳನ್ನು ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಪ್ರತಿ ಹೋಬಳಿಗೆ ಒಂದೊಂದು ವಸತಿ ಶಾಲೆ ತೆಗೆದಿದ್ದೇವೆ. 900 ಕ್ಕೂ ಹೆಚ್ಚು ಶಾಲೆಗಳಿವೆ. ಹೆಣ್ಣು ಮಗಳು ಮೊದಲ ರ‌್ಯಾಂಕ್ ಪಡೆದಿದ್ದಾಳೆ. ಆ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.

    ಚುನಾವಣೆ ನೀತಿ ಸಂಹಿತೆ ಇರುವ ಕಾರಣಕ್ಕೆ ಸರ್ಕಾರದ ವತಿಯಿಂದ ಬಸವ ಜಯಂತಿ ಆಚರಣೆ ಮಾಡುತ್ತಿಲ್ಲ. ಹೀಗಾಗಿ ಕೇವಲ ಬಸವ ಪುತ್ಥಳಿಗೆ ಮಾಲಾರ್ಪಾಣೆ ಮಾಡುತ್ತಿದ್ದೇನೆ. ಜತೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಬಸವಣ್ಣನವರ ಮೂರ್ತಿಗೆ ಮಾಲಾರ್ಪಾಣೆ ಮಾಡುತ್ತೇವೆ. ಅವರ ಆದರ್ಶ, ವಿಚಾರಗಳನ್ನ ಸ್ಮರಣೆ ಮಾಡುತ್ತೇನೆ. ರಾಜ್ಯದ ಜನತೆಗೆ ಶುಭಾಶಯ ತಿಳಿಸುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts