More

    ಸದ್ಭಾವನ ಪಾದಯಾತ್ರೆಗೆ ಸ್ವಾಗತ

    ಎಚ್.ಡಿ.ಕೋಟೆ: ಬಸವ ಜ್ಯೋತಿ ಸದ್ಭಾವನ ಪಾದಯಾತ್ರೆಯನ್ನು 2ನೇ ಬಾರಿಗೆ ಹಮ್ಮಿಕೊಂಡಿರುವ ಡಾ.ಶಿವಾನಂದ ಸ್ವಾಮೀಜಿ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ತಾಲೂಕಿನ ವೀರಶೈವ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಸ್ವಾಗತಿಸಿದರು.
    ಬಸವಾದಿ ಶರಣರ ಸಂದೇಶಗಳ ವಚನಗಳನ್ನು ಹಳ್ಳಿ ಹಳ್ಳಿಗೆ, ಮನೆ ಮನಗಳಿಗೆ ಮುಟ್ಟಿಸುವ ಕೆಲಸವನ್ನು ಮಾಡುವ ಉದ್ದೇಶದಿಂದ ಕಾಲ್ನಡಿಗೆ ಸದ್ಭಾವನಾ ಯಾತ್ರೆಯನ್ನು ಮಾಡುತ್ತಿದ್ದೇನೆ ಎಂದು ಹುಲಸೂರು ಹುಲುಕುಂಟಿ ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಸ್ವಾಮೀಜಿ ತಿಳಿಸಿದರು.

    ಯಾತ್ರೆ ಸಂದರ್ಭದಲ್ಲಿ ಬಸವಣ್ಣನವರ ವಚನ ಸಂದೇಶವನ್ನು ಪ್ರಚಾರಪಡಿಸಲು 20 ಸಾವಿರ ಹಿಂದಿ ಮತ್ತು 20 ಸಾವಿರ ಇಂಗ್ಲಿಷ್ ಕರಪತ್ರಗಳನ್ನು ಹಂಚಲಾಗುತ್ತದೆ. ಹಾಗೆ ಬಸವಣ್ಣನವರ 102 ವಚನಗಳ ಕಿರು ಹೊತ್ತಿಗೆ ರೂಪದಲ್ಲಿ ಜನರಿಗೆ ತಲುಪಿಸಲು 2 ಲಕ್ಷ ಪ್ರತಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

    ಪಾದಯಾತ್ರೆ: 2019ರ ಮೇ 7 ರಂದು ಬಸವ ಕಲ್ಯಾಣದಿಂದ ಆರಂಭಿಸಿದ ಪಾದಯಾತ್ರೆಯು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ನಂತರ ನೇಪಾಳ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯದ ಪುಲ್ಲಪಳ್ಳಿ ಮಾರ್ಗವಾಗಿ ಎಚ್.ಡಿ.ಕೋಟೆ ಗಡಿಭಾಗದ ಡಿ.ಬಿ.ಕುಪ್ಪೆ ಮೂಲಕ ಕರ್ನಾಟಕ ಗಡಿ ಪ್ರವೇಶ ಮಾಡಿದ್ದಾರೆ.

    ವಿಚಾರ: ರೈತರು ದೇಶದ ಬೆನ್ನೆಲುಬು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಕಾಯವೇ ಕೈಲಾಸ ಎಂಬ ಬಸವಣ್ಣನವರ ಆದರ್ಶದಂತೆ ಪ್ರತಿಯೊಬ್ಬರೂ ಕಾಯಕದಿಂದಲೇ ಬದುಕಬೇಕು. ಜಾತಿ ಮತ ಪಂಥ ಮರೆತು, ಮತ್ತೆ ಬಸವಣ್ಣನವರ ಕಲ್ಯಾಣರಾಜ್ಯ ಸ್ಥಾಪನೆಗಾಗಿ ಎಲ್ಲರೂ ಈ ಯಾತ್ರೆಗೆ ಕೈಜೋಡಿಸಿ ಎಂದು ಬಸವ ಜ್ಯೋತಿ ಸದ್ಭಾವನಾ ಪಾದಯಾತ್ರೆಯಲ್ಲಿ ಶ್ರೀಗಳು ಸಂದೇಶವನ್ನು ಪ್ರತಿ ಹಳ್ಳಿ ಹಳ್ಳಿಗಳಿಗೂ ಸಾರುತ್ತಿದ್ದಾರೆ.

    ಈಗಾಗಲೇ 10,500 ಕಿಮೀ. ಪಾದಯಾತ್ರೆಯನ್ನು ಮಾಡಲಾಗಿದ್ದು, ಇನ್ನೂ ಮೂರು ತಿಂಗಳು ಯಾತ್ರೆಯನ್ನು ಮುಂದುವರಿಸಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಮತ್ತೆ ಬಸವ ಕಲ್ಯಾಣದಲ್ಲಿ ಮುಕ್ತಾಯವಾಗತ್ತದೆ.

    ಶಾಸಕ ಅನಿಲ್ ಚಿಕ್ಕಮಾದು ತಾಲೂಕಿನ ಹೈರಿಗೆ ಗ್ರಾಮದಲ್ಲಿ ಸ್ವಾಮೀಜಿಯನ್ನು ಸ್ವಾಗತಿಸಿ, ಅವರೊಂದಿಗೆ 2 ಕಿ.ಮೀವರೆಗೆ ನಡೆದು ಸದ್ಭಾವನಾ ಯಾತ್ರೆಗೆ ಶುಭ ಕೋರಿದರು. ಅಖಿಲ ಭಾರತ ಲಿಂಗಾಯತ- ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ಸರಗೂರು ತಾಲೂಕು ಘಟಕದ ಅಧ್ಯಕ್ಷ ದಡದಹಳ್ಳಿ ಶಿವರಾಜು, ತಾಲೂಕು ಅಧ್ಯಕ್ಷ ಮೊತ್ತ ಬಸವರಾಜು ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ, ಗಿರೀಶ್ ಮೂರ್ತಿ, ಡಿ.ಸಿ.ಸಿದ್ದಪ್ಪ, ನಂದೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts