More

    ನಿಮ್ಮ ಜಿಮ್​ ಲಾಕ್​ ಆಗಿದೆಯೇ? ಇಲ್ಲಿವೆ ಕೆಲ ಪರ್ಯಾಯ ಮಾರ್ಗಗಳು…

    ಇದು ಲಾಕ್​ಡೌನ್​ ಸಮಯ. ಈ ತಲೆಮಾರಿನ ಜನತೆಗೆ ಕಂಡುಕೇಳರಿಯದ ಸ್ಥಿತಿಗತಿ ಇದಾಗಿದೆ. ಎಲ್ಲರಿಗೂ ಮನೆಯಲ್ಲೇ ಇರಬೇಕಾದ ಅನಿವಾರ್ಯ ಎದುರಾಗಿದೆ. ಈಗ ಮನೆಯಲ್ಲೇ ಕೆಲಸ ಮಾಡುವ ಪರಿಪಾಠ ಶುರುವಾಗಿದೆ. ಯುವಜನತೆ ಸದೃಢ ಶರೀರ ನಿರ್ವಹಣೆ​ ಮಾಡಲು ಜಿಮ್​ ಮೊರೆ ಹೋಗುತ್ತಿರುತ್ತಾರೆ. ಆದರೆ, ಲಾಕ್​ಡೌನ್​ನಿಂದಾಗಿ ಜಿಮ್​ ಕೂಡ ಲಾಕ್​ ಆಗಿದೆ. ಆದರೆ ಮನೆಯಲ್ಲಿ ವರ್ಕ್​ಔಟ್​ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಲಾಕ್​ಡೌನ್​ನಂತಹ ವಿಷಮ ಸ್ಥಿತಿಯಲ್ಲೂ ಕೆಲವು ಉತ್ತಮ ಪರಿಪಾಠಗಳನ್ನು ರೂಢಿಸಿಕೊಳ್ಳುವ ಮೂಲಕ ಈ ಸಮಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದು. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್​ಗಳು.

    * ಸದೃಢರಾಗಿರಲು ಬಯಸುತ್ತೀರಾ? ಜಿಮ್​, ಯೋಗ ಕೇಂದ್ರಗಳು ಮುಚ್ಚಿವೆ, ಉದ್ಯಾನಕ್ಕೆ ಹೋಗಬೇಕೆಂದರೆ ದುರದೃಷ್ಟವಶಾತ್​ ಅಲ್ಲಿಯೂ ಪ್ರವೇಶ ನಿಷೇಧಿಸಲಾಗಿದೆ. ಹಾಗಾದರೆ ಫಿಟ್​ನೆಸ್​ಗಾಗಿ ನೀವೇನು ಮಾಡಬಹುದು?

    * ಕ್ರಿಯಾಶೀಲರಾಗಲು ಸೂಕ್ತ ಕಾರ್ಯಕ್ರಮ ಪಟ್ಟಿ ರಚಿಸಿಕೊಳ್ಳಿ ಮತ್ತು ಸ್ವಯಂ ಪ್ರೇರಣೆಯಾಗಿರಲು, ಅದೂ ವಿಶೇಷವಾಗಿ ವ್ಯಾಯಾಮದ ವಿಷಯಕ್ಕೆ ಬಂದಾಗ ಇದು ತುಂಬ ಕಷ್ಟ. ಆದರೆ ತುಂಬಾ ಮುಖ್ಯವಾದುದು. ನಿಮ್ಮ ಈ ಹಿಂದಿನ ದಿನಚರಿಯನ್ನು ಅನುಸರಿಸುವುದು ನೀವು ಮಾಡಬೇಕಾದ ಉತ್ತಮ ಕೆಲಸ. ವೇಳಾಪಟ್ಟಿ ಅನುಸರಿಸುವುದೂ ಕೂಡ ತುಂಬಾ ಮುಖ್ಯ. ಸರಿಯಾದ ಸಮಯಕ್ಕೆ ಮಲಗಿ ಮತ್ತು ಎದ್ದೇಳಿ.

    * ನಿಮ್ಮ ವರ್ಕ್​ಔಟ್​ಗೆ ಸಂಗೀತದ ಸಾಥ್​ ಇರಲಿ. ಹೌದು, ಅಭ್ಯಾಸದ ವೇಳೆ ಗಮನ ಕೇಂದ್ರೀಕರಿಸುವುದು ಮುಖ್ಯ, ಸಂಗೀತ ನಿಮ್ಮ ಮನಸ್ಸನ್ನು ಶಾಂತವಾಗಿಡಲು ಸಹಾಯವಾಗುತ್ತದೆ. ಆ ಮೂಲಕ ಮನೆಯಲ್ಲಿ ನಿಮ್ಮ ವರ್ಕ್​ಔಟ್​ ಹಿಂದೆಂದಿಗಿಂತಲೂ ಆನಂದಮಯವಾಗಿರಲು ಸಾಧ್ಯವಾಗುತ್ತದೆ. ಆದ್ದರಿಂದ ವ್ಯಾಯಾಮ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಡಬಲ್ಲ ಸಂಗೀತವನ್ನು ಆಲಿಸಿ.

    * ನಿಮ್ಮ ಈ ಹಿಂದಿನ ಅಭ್ಯಾಸ ಕ್ರಮವನ್ನು ಮರೆಯಬೇಡಿ. ಮನೆಯಲ್ಲೇ ಇದ್ದು ವರ್ಕ್​ಔಟ್​ ಮಾಡುತ್ತಿದ್ದರೆ, ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗುವಂತಿರಲಿ, ಮನೆಯಲ್ಲಿರುವಾಗ ತಿಂಡಿ ತಿನ್ನುವುದನ್ನು ಬಿಟ್ಟುಬಿಡುವುದು ಅಥವಾ ವೇಳೆಯಲ್ಲಿ ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳಿ. ಉಪಹಾರದ ಸಮಯ ನಿಮ್ಮ ಈ ಹಿಂದಿನ ವೇಳಾಪಟ್ಟಿಯಂತೆಯೇ ಇರಲಿ. ವರ್ಕ್​ಔಟ್​ ಪೂರ್ವದ ಊಟ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹೆಚ್ಚು ಕೆಲಸ ಮಾಡಲು ಇದು ಸಹಾಯವಾಗುತ್ತದೆ.

    * ಬೆನ್ನಿಗೆ ಆರಾಮದಾಯಕವೆನಿಸಲು, ಬೆನ್ನು ನೋವಿನ ಸಮಸ್ಯೆ ಇಲ್ಲದಿದ್ದರೂ ಯೋಗ ಚಾಪೆಯನ್ನು ಬಳಸಿ. ಕಾರ್ಪೆಟ್​ ಅಥವಾ ಮಡಚಿದ ಹಾಸಿಗೆಯನ್ನೂ ಬಳಸಬಹುದು. ಪ್ರಮುಖ ವ್ಯಾಯಾಮವನ್ನು ನೆಲ ಹಾಸಿನ ಮೇಲೆ ಮಾಡಿ. ಬೆನ್ನು ನೋವು ಅಥವಾ ಸಮಸ್ಯೆಗಳನ್ನು ತಪ್ಪಿಸಲು ಬಯಸಿದಲ್ಲಿ ಇದು ಮುಖ್ಯವಾದುದು.

    * ಸ್ಪೋರ್ಟ್ಸ್​ ಉಡುಗೆಯನ್ನು ಬಿಟ್ಟುಬಿಡಬೇಡಿ. ನೀವು ವರ್ಕ್​ ಔಟ್​ ಮಾಡುವಾಗ ಆ್ಯಕ್ಟೀವ್​ ಉಡುಗೆ ಧರಿಸಲು ಕಾರಣವಿದೆ. ಆದ್ದರಿಂದ ನೀವು ಮನೆಯಲ್ಲೇ ವರ್ಕಔಟ್​ ಮಾಡುತ್ತಿದ್ದರೂ ಜಿಮ್​ನಲ್ಲಿರುವಂತೆಯೇ ಉಡುಗೆ ಧರಿಸುವುದು ಮುಖ್ಯ.

    * ವರ್ಕ್​ಔಟ್​ ನಂತರದ ಊಟವನ್ನು ತಪ್ಪಿಸಬೇಡಿ. ನಿಮ್ಮಲ್ಲಿ ಈಗ ಹೆಚ್ಚು ಸಮಯ ಲಭ್ಯವಿರುವುದರಿಂದ ನೀವೇ ಮನೆಯಲ್ಲಿ ಪ್ರೋಟಿನ್​ಯುಕ್ತ ಹಾಗೂ ಸ್ವಾದಿಷ್ಠ ಆಹಾರ ತಯಾರಿಸಿಕೊಳ್ಳಬಹುದು.

    * ವ್ಯಾಯಾಮ ಮಾಡುವಾಗ ಅತಿಹೆಚ್ಚು ಆಯಾಸಗೊಳ್ಳಬೇಡಿ. ನಿಮಗೆ ಹೆಚ್ಚು ಕಾಲಾವಕಾಶವಿದೆ ಎಂದು ಎಲ್ಲ ಅಭ್ಯಾಸವನ್ನೂ ಒಟ್ಟಿಗೇ ಮಾಡಬೇಕೆಂದೇನಿಲ್ಲ. ಅತಿ ಹೆಚ್ಚು ವರ್ಕ್​ಔಟ್​ ಮಾಡುವುದರಿಂದ ಸ್ನಾಯು ನೋವು, ಅತಿ ಆಯಾಸ, ನೋವು ಉಂಟಾಗುತ್ತದೆ.

    * ಹಳೆಯ ಅಭ್ಯಾಸಗಳಿಗೇ ಅಂಟಿಕೊಳ್ಳಬೇಡಿ, ಹೊಸ ಅಭ್ಯಾಸ, ಪರಿಪಾಠಗಳನ್ನು ಪ್ರಯತ್ನಿಸಿ, ಜಿಮ್​ ಹೊರತಾಗಿ ಮನೆಯಲ್ಲೇ ವರ್ಕ್​ಔಟ್​ ಮಾಡುವುದು ತುಂಬ ನೀರಸವೆನಿಸಬಹುದು. ಆದ್ದರಿಂದ ಝುಂಬಾ ಇತ್ಯಾದಿ ಹೊಸ ಅಭ್ಯಾಸವನ್ನು ಪ್ರಯತ್ನಿಸಿ. ಗೂಗಲ್​ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ಯೂಟೋರಿಯಲ್​ಗಳು, ನೇರ ಪ್ರಸಾರ ಲಭ್ಯವಿರುತ್ರವೆ. ಇದರಿಂದ ಹೊಸ ಪರಿಪಾಠಗಳನ್ನು ರೂಢಿಸಿಕೊಳ್ಳಲು ಇನ್ನೂ ಸುಲಭ.

    * ಪ್ರತಿ ದಿನ ಭಿನ್ನ ವ್ಯಾಯಾಮವನ್ನು ಆಯ್ದುಕೊಳ್ಳಿ. ಪದೆ ಪದೆ ಒಂದೇ ವಿಧಾನವನ್ನು ಅಭ್ಯಾಸ ಮಾಡುವುದರಿಂದ ನಿಮಗೆ ನೀರಸವೆನಿಸಬಹುದು ಮತ್ತು ಕೇವಲ ಒಂದು ಗುಂಪಿನ ಸ್ನಾಯುವಿನ ಮೇಲೆ ನಿವು ಗಮನ ಕೇಂದ್ರೀಕರಿಸಿದಂತಾಗುತ್ತದೆ. ಆದ್ದರಿಂದ ಸಂಪೂರ್ಣ ದೇಹವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ದಿನ ಒಂದೊಂದು ಭಾಗಕ್ಕೆ ಅನ್ವಯಿಸುವ ವಿಭಿನ್ನ ಅಭ್ಯಾಸ ಮಾಡಿ.

    * ಎಕ್ಸೆಗೇಮಿಂಗ್​ ಎಂಬುದು ಒಂದು ವಿಭಿನ್ನ ಆಯ್ಕೆ: ಮನೆಯಲ್ಲೇ ಇದ್ದರೂ ಕ್ರಿಯಾಶೀಲರಾಗಿರಲು ಇದು ಉತ್ತಮ ಮಾರ್ಗ. ನಿಮ್ಮ ಬಳಿ ಎಕ್ಸ್​ಬಾಕ್ಸ್​ ಅಥವಾ ಪ್ಲೇ ಸ್ಟೇಷನ್​ ಇದ್ದರೆ ಸದೃಢವಾಗಿರಲು ನಿವು ವ್ಯಾಯಾಮಾಧಾರಿತ ಆಟಗಳನ್ನು ಆಡಬಹುದು.

    ‘ಭಿಲ್ವಾರಾ ಮಾದರಿ’ಯ ಹಿಂದಿರುವ ಶಕ್ತಿ ಯಾವುದು?: ಸೋಂಕು ಪ್ರಕರಣ ತಗ್ಗಿಸಿ ವಿಶ್ವದ ಗಮನ ಸೆಳೆದ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts