More

    ಗುರುವಂದನೆ ಕಾರ್ಯ ಶ್ಲಾಘನೀಯ

    ನಾಲತವಾಡ: ಅಂದಾಜು 25 ವರ್ಷಗಳ ಶೈಕ್ಷಣಿಕ ಬದುಕು ನೆನಪಿಸಿಕೊಳ್ಳುವ ಪರಸ್ಪರ ಸಮ್ಮಿಲನ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಡಿ.ಡಿ.ರಾಮನಗೌಡ ಕನ್ನೊಳ್ಳಿ ಹೇಳಿದರು.

    ಸ್ಥಳೀಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬೆಳ್ಳಿ ಹಬ್ಬದ ನಿಮಿತ್ತ ಹಳೆಯ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗದೇ ಪಠ್ಯೇತರ ಚಟುವಟಿಕೆಯಲ್ಲಿ ತೊಡಬೇಕು. ಸಂಗೀತದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

    ಜಿಲ್ಲಾ ಸಮನ್ವಯಾಧಿಕಾರಿ ಎಸ್.ಬಿ.ಸಜ್ಜನ ಮಾತನಾಡಿದರು. ಪ್ರಾಚಾರ್ಯ ಜಿ.ಎಂ.ಗುಳಗಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಎಸ್.ಎಚ್.ಜೈನಾಪೂರ, ಕೆ.ಎಸ್.ಮಾರಾಪೂರ, ಎಸ್.ಜಿ.ವಾಲೀಕಾರ, ಪಿ.ಬಿ.ಕಮರಿ ಮತ್ತಿತರರನ್ನು ಸನ್ಮಾನಿಸಲಾಯಿತು. ಎಂ.ವಿ.ವಸದ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts