More

    ತಾಲೂಕು ಕಚೇರಿಗೆ ಶಿಕ್ಷಕರ ಅಲೆದಾಟ ತಪ್ಪಿಸಲು ಗುರುಸ್ಪಂದನಾ ಪೂರಕ

    ಅಳವಂಡಿ: ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲೂಕು ಕಚೇರಿಗೆ ಶಿಕ್ಷಕರ ಅಲೆದಾಟ ತಪ್ಪಿಸಲು ಈ ಕಾರ್ಯಕ್ರಮ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಶಂಕರಯ್ಯ ತಿಳಿಸಿದರು.

    ಗ್ರಾಮದ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕ ಘಟಕದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಲಯವಾರು ಗುರುಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶಿಕ್ಷಕರ 10, 15, 20, 25 ವರ್ಷದ ಟೈಮ್ ಬಾಂಡ್‌ಗಳನ್ನು ಹಾಕುವುದು, ಸ್ಥಳದಲ್ಲಿಯೇ ಆದೇಶಗಳನ್ನು ವಿತರಣೆ ಮತ್ತು ಶಿಕ್ಷಕರ ಗಳಿಕೆ ರಜೆ, ಉನ್ನತ ವ್ಯಾಸಂಗ ಮಾಡಿದ ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಲಾಗುವುದು. ಒಟ್ಟಾರೆಯಾಗಿ ಈ ಕಾರ್ಯಕ್ರಮ ಶಿಕ್ಷಕರ ಅಲೆದಾಟ ತಪ್ಪಿಸಿ ಸೇವಾ ಪುಸ್ತಕದಲ್ಲಿ ಅಗತ್ಯ ವಿಷಯಗಳನ್ನು ದಾಖಲಿಸುವುದು ಇದರ ಉದ್ದೇಶ ಎಂದರು.

    ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸುರೇಶ ತೋಟದ, ತಾಲೂಕು ಅಕ್ಷರ ದಾಸೋಹ ನಿರ್ದೆಶಕ ಹನುಮಂತಪ್ಪ, ಪತ್ತಿನ ಸಹಕಾರ ಸಂಘದ ಖಜಾಂಚಿ ವೆಂಕರಡ್ಡಿ ಇಮ್ಮಡಿ, ಶಿಕ್ಷಣ ಸಂಯೋಜಕರಾದ ಗವಿಸಿದ್ದೇಶ ಶೆಟ್ಟರ, ಭೀಮಪ್ಪ ಹೂಗಾರ, ಸಿಆರ್‌ಪಿಗಳಾದ ವಿಜಯಕುಮಾರ ಟಿಕಾರೆ, ಬಸವರಾಜ, ವೀರೇಶ ಕೌಟಿ, ಹನುಮಂತಪ್ಪ, ಎಸ್ಡಿಎಂಸಿ ಅಧ್ಯಕ್ಷ ನಜರುದ್ದೀನ್, ಮಂಜುನಾಥ, ಶಿವಪ್ಪ ಜೋಗಿ, ಗ್ಯಾನಮ್ಮ ಹಳ್ಳಿಕೇರಿ, ರಮೇಶ ಬುಡ್ಡನಗೌಡರ, ಬಾಳಪ್ಪ ಕಾಳೆ, ನಫೀಸಾಖಾನ್, ಗವಿಸಿದ್ದಪ್ಪ ಕೆರೆ, ಮಂಜುನಾಥ, ಸಿದ್ದಪ್ಪ, ಗಂಗಪ್ಪ, ಬಿಇಒ ಕಛೇರಿ ಮ್ಯಾನೇಜರ್ ಮೀನಾಜುದ್ದೀನ್, ಎಫ್‌ಡಿಎ ಸುಂಕಪ್ಪ, ಮುಖ್ಯ ಶಿಕ್ಷಕರಾದ ಮಾರುತಿ, ನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts