More

    ಗುರು ಹಿರಿಯರ ಸ್ಮರಣೆ ಮಾಡಿದರೆ ದೈವತ್ವ ಸಿದ್ಧಿ

    ಅರಕಲಗೂಡು: ಮನುಷ್ಯ ಪರಿಶುದ್ಧ ಬದುಕು ಕಟ್ಟಿಕೊಳ್ಳುವ ಮುಖೇನ ಗುರು ಹಿರಿಯರ ಸ್ಮರಣೆ ಮಾಡಿದರೆ ದೈವತ್ವ ಹೊಂದಬಹುದು ಎಂದು ಕರ್ಪೂರವಳ್ಳಿ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಬಸವಾಪಟ್ಟಣದ ತೋಂಟದಾರ್ಯ ಮಠದಲ್ಲಿ ಮಾಸಿಕ ಬೆಳಗದಿಂಗಳ ಭಾವ ಸಮ್ಮಿಲನದ 4ನೇ ಚಿಂತನಾಗೋಷ್ಠಿ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಮರುಳಗಾವಿ ಮಠದ ತ್ರಿವಿಧ ದಾಸೋಹಿ ಕಾಲಾಗ್ನಿ ರುದ್ರಮುನಿ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಸಮಾಜ ಸೇವೆಯನ್ನೇ ಬದುಕಿನ ಗುರಿಯಾಗಿಸಿಕೊಂಡಿದ್ದ ಕಾಲಾಗ್ನಿ ರುದ್ರಮುನಿಗಳು ಬಹಳಷ್ಟು ಮಠ- ಮಾನ್ಯಗಳ ನಿರ್ಮಾತೃವಾಗಿ ಶ್ರಮಿಸಿದ್ದರು. ತಾಯಿ ಹೃದಯವುಳ್ಳವರಾಗಿದ್ದ ಶ್ರೀಗಳ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ಸಮಾಜ ಸೇವಕ ಬೆಂಗಳೂರು ವಿ.ಎ.ಚಂದ್ರಶೇಖರಯ್ಯ ಅವರು ಕಾಲಾಗ್ನಿ ರುದ್ರಮುನಿ ಶ್ರೀಗಳ ಲೋಕಹಿತ ಚಿಂತನೆ ಕುರಿತು ಮಾತನಾಡಿದರು. ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ, ಮುಖಂಡರಾದ ವಸಂತಕುಮಾರ್, ಚೇತನ್, ಮಧುಕರ್, ಶಿವಮ್ಮ, ನಾಗರಾಜು, ಬಿ.ವಿ.ಲಿಖಿತ್, ಬಿ.ಎನ್.ವಾಗೀಶ್, ಜಗಣ್ಣ, ಮಲ್ಲಿಕಾರ್ಜುನಶೆಟ್ಟಿ, ಮುತ್ತಣ್ಣ, ಹಾಸನ ಸಂವೇದನಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎನ್.ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

    ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಬೆಟ್ಟಸೋಗೆ ಬಿ.ವಿ. ಶಿವಮೂರ್ತಿ ಅವರನ್ನು ಸನ್ಮಾನಿಸಲಾಯಿತು. 2020ರ ಕ್ಯಾಲೆಂಡ್ ಬಿಡುಗಡೆ ಮಾಡಲಾಯಿತು. ಶ್ರೀ ಸಿದ್ದಲಿಂಗೇಶ್ವರ ಪುರೋಹಿತ ಕುಟೀರದ ದಿನೇಶ್ ಶಾಸ್ತ್ರಿ ಅವರು 2020ರ ತೂಗು ಪಂಚಾಗ ವಿತರಿಸಿದರು. ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts