More

    ಗುರುಪರಂಪರೆ ಪ್ರತೀಕ ಗುರುಪಾದೇಶ್ವರ ಮಠ – ಹರಿಹರ ಪೀಠದ ವಚನಾನಂದ ಶ್ರೀ ಹೇಳಿಕೆ

    ವಿಜಯಪುರ: ಉತ್ತರ ಕರ್ನಾಟಕದಲ್ಲೇ ಬಬಲೇಶ್ವರ ಮಠವು ಗುರುಪಂರಂಪರೆಯ ಮಹಾಮಠವಾಗಿ ಪ್ರಭಾವ ಬೀರಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿಗಳು ಹೇಳಿದರು.

    ಬಬಲೇಶ್ವರದ ಬ್ರಹನ್ಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಾತಪಸ್ವಿ ಗುರುಪಾದೇಶ್ವರ ಶಿವಯೋಗಿಗಳ 180ನೇ ಪುಣ್ಯಸ್ಮರಣೆ, ಶ್ರಾವಣ ಮಾಸದ ಪುರಾಣ ಮಂಗಲೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

    ಈ ಹಿಂದೆ ಮಠದ ಪಟ್ಟಾಧ್ಯಕ್ಷರಾದ ಪೂರ್ವಾಚಾರ್ಯರು ಆಚಾರ ಸಂಪನ್ನರು, ಮಹಾತಪಸ್ವಿಗಳಾಗಿ ಅನೇಕ ಪವಾಡಗಳನ್ನು ಮಾಡಿದ್ದಾರೆ. ಅವರ ಪರಂಪರೆಯಲ್ಲಿ ಬೆಳೆದು ಬಂದ ಇಂದಿನ ಪೀಠಾಧ್ಯಕ್ಷ ಡಾ.ಮಹಾದೇವ ಶಿವಾಚಾರ್ಯರು ಕಾಶಿ ವಿದ್ವಾಂಸರು, ಲಿಂಗಪೂಜಾ ನಿಷ್ಠರು, ಸುಜ್ಞಾನಿಗಳೂ, ವಾಗ್ಮಿಗಳು ಆಗಿದ್ದಾರೆ. ಅವರ ಅವಧಿಯಲ್ಲಿ ಮಠವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇಂಥ ಸಮರ್ಥ ಧರ್ಮಾಚಾರ್ಯರಿಗೆ ನಮ್ಮ ಆಲಗೂರ ಪೀಠ ದೊರೆತಿದ್ದು, ಆ ಪೀಠವನ್ನು ಅಲ್ಪ ಕಾಲದಲ್ಲೇ ತೀವ್ರ ಗತಿಯಲ್ಲಿ ಅಭಿವೃದ್ಧಿಗೈದು ಸರ್ವರ ಪ್ರಶಂಸೆಗೆ ಪಾತ್ರರಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

    ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮರಸ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಬಬಲೇಶ್ವರ ಬ್ರಹನ್ಮಠದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಅವಿಸ್ಮರಣೀಯ ಎಂದರು.

    ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚಾಣಿ ಉಪನ್ಯಾಸ ನೀಡಿದರು. ಡಾ.ಸದಾಶಿವ ಬಾಬಾಸಾಹೇಬ ತಮಗೊಂಡ ಪರಿವಾರದಿಂದ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಆಲಗೂರ ಧರಿದೇವರ ಮಠದ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ, ಗುರುಬಸವ ಮರಿದೇವರು ಮತ್ತಿತರರಿದ್ದರು. ಶಿಕ್ಷಕ ಬಿ.ಐ.ಬಿರಾದಾರ ಸ್ವಾಗತಿಸಿದರು. ರುದ್ರಗೌಡ ಬಿರಾದಾರ ನಿರೂಪಿಸಿದರು.

    ಇದಕ್ಕೂ ಮುನ್ನ ಬೆಳಗ್ಗೆ ಗುರುಪಾದೇಶ್ವರ ಮಠದ ಚಾವಣಿ ಮೇಲೆ ಹರಿಹರ ಪಂಚಮಸಾಲಿ ಪೀಠದ ವಚನನಾಂದ ಸ್ವಾಮಿಗಳ ಮಹಾಪಾದಪೂಜೆ ಸಮಾರಂಭವು ವೇದಘೋಷದೊಂದಿಗೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts