More

    ಜಗತ್ತಿನಲ್ಲಿ ಗುರು ಶ್ರೇಷ್ಠ

    ತೇರದಾಳ: ಅವಧೂತ ಸಂಪ್ರದಾಯವು ಅಧ್ಯಾತ್ಮಿಕ ವೈಶಿಷ್ಟೃಗಳನ್ನು ಒಳಗೊಂಡಿದೆ. ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಉನ್ನತಿಗಾಗಿ ಇಂತಹ ಮಠಗಳ ಕೊಡುಗೆ ಅನನ್ಯವಾಗಿದೆ ಎಂದು ರಬಕವಿಯ ಬ್ರಹ್ಮಾನಂದ ಮಠದ ಗುರುಸಿದ್ಧೇಶ್ವರ ಶ್ರೀ ಹೇಳಿದರು.

    ತಾಲೂಕಿನ ಹನಗಂಡಿ ಗ್ರಾಮದ ಅವಧೂತ ಆಶ್ರಮದಲ್ಲಿ ಮಂಗಳವಾರ ರಾಮಾನಂದ ಅವಧೂತ ಶ್ರೀಗಳ 28ನೇ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

    ಭೂಮಿ ಮೇಲೆ ಗುರು ಶ್ರೇಷ್ಠನಾಗಿದ್ದಾನೆ. ಹಾಗಾಗಿ ಭಕ್ತರು ಗುರುವಿನಲ್ಲಿ ಅಪಾರ ನಂಬಿಕೆ ಮತ್ತು ಶ್ರದ್ಧೆ ಇಟ್ಟುಕೊಂಡು ಮುಕ್ತಿಯ ದಾರಿಯತ್ತ ಸಾಗಬೇಕು ಎಂದರು.

    ಶೇಗುಣಸಿ ಹನುಮಂತ ಮಹಾರಾಜರು, ಆಶ್ರಮದ ಜಗದೀಶ್ವರ ಶ್ರೀ, ಚಿದಾನಂದ ಅವಧೂತ ಶ್ರೀ, ಘೆನಮ್ಮತಾಯಿ, ಹಳಿಂಗಳಿ ಕಮರಿಮಠದ ಶರಣಬಸವದೇವರು, ಬನಹಟ್ಟಿಯ ಶಿವಶರಣೆ ಅಶ್ವಿನಿ ಗೆದ್ದಪ್ಪನವರ ಮಾತನಾಡಿ, ಜಗತ್ತಿನಲ್ಲಿ ಗುರು ಶ್ರೇಷ್ಠನಾಗಿದ್ದು, ತ್ರಿಮೂರ್ತಿಗಳು ಸೇರಿ ದೇವಾನುದೇವತೆಗಳ ಕೃಪೆಗಾಗಿ ಗುರುವನ್ನು ಆರಾಧಿಸಬೇಕು. ಗುರುವಿನಲ್ಲಿ ಮಾಡುವ ಅನನ್ಯ ಭಕ್ತಿ ಲೋಕೋದ್ಧಾರದ ಜತೆಗೆ ಮನುಷ್ಯನ ಬದುಕು ಪಾವನವಾಗುತ್ತದೆ ಎಂದರು.

    ಮುಖಂಡರಾದ ನಿಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಬಾಗಪ್ಪ ಹನಗಂಡಿ, ಸಿದ್ದಪ್ಪ ಪೂಜಾರಿ ಇತರರಿದ್ದರು. ಇದಕ್ಕೂ ಮುನ್ನ ಆಶ್ರಮದಲ್ಲಿ ವಿಶೇಷ ಪೂಜೆಗಳು ನಡೆದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರ ಪಲ್ಲಕ್ಕಿ ಉತ್ಸವ, ಕುಂಭಮೇಳವು ವಿವಿಧ ವಾದ್ಯಗಳೊಂದಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts