More

    ಉಪ ಮುಖ್ಯಮಂತ್ರಿಯಾಗಿಯೇ ನಿವೃತ್ತಿ

    ಗುರುಮಠಕಲ್: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಪಘಾತಕ್ಕೀಡಾದಾಗ ಪ್ರತಿಪಕ್ಷದವರು ಹಾಗೂ ಹಿತಶತ್ರುಗಳು ಚಿಂಚನಸೂರ್ ಕಾಲು ಕಳೆದುಕೊಂಡಿದ್ದು, ಎರಡು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅಪಪ್ರಚಾರ ಮಾಡಿ ಮತದಾರರನ್ನು ವಿಚಲಿತಗೊಳಿಸಿದ್ದಾರೆ ಎಂದು ಮಾಜಿ ಎಂಎಲ್‌ಸಿ ಬಾಬುರಾವ ಚಿಂಚನಸೂರ್ ಕಿಡಿಕಾರಿದ್ದಾರೆ.

    ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ಕೋಲಿ ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸುತ್ತೇನೆ. ನಾನು ಉಪಮಖ್ಯಮಂತ್ರಿ ಆಗಿಯೇ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಬಾಬುರಾವ್ ರಾಜಕೀಯ ಮುಗಿದಿಲ್ಲ ಎಂದು ಘೋಷಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಡಾ.ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೇಶ ಕಾಂಗ್ರೆಸ್‌ಮಯವಾಗಲಿದೆ. ರಾಜ್ಯದ ಜನ ಬಿಜೆಪಿ ಆಡಳಿತವನ್ನು ಧಿಕ್ಕರಿಸಿ ಕಳೆದ ಚುನಾವಣೆಯಲ್ಲಿ ಪ್ರಚಂಡ ೧೩೬ ಸೀಟುಗಳಲ್ಲಿ ಗೆಲ್ಲಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ರಾಧಾಕೃಷ್ಣ ದೊಡ್ಡಮನಿ ಪಕ್ಷದ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದ್ದು, ಪ್ರಚಂಡ ಬಹುಮತದಿಂದ ಗೆಲ್ಲಿಸಿ ಮಲ್ಲಿಕಾರ್ಜುನ ಖರ್ಗೆ ಕೈ ಇನ್ನಷ್ಟು ಬಲಪಡಿಸುವ ಹುಮ್ಮಸ್ಸು ಬಂದಿದೆ ಎಂದು ತಿಳಿಸಿದರು.

    ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಬ್ಲಾಕ್ ಅಧ್ಯಕ್ಷ ಕೃಷ್ಣಾ ಚಪೆಟ್ಲಾ, ಸೈದಾಪುರ ಬ್ಲಾಕ್ ಅಧ್ಯಕ್ಷ ನಿರಂಜನರೆಡ್ಡಿ, ಮುಖಂಡರಾದ ಶರಣಪ್ಪ ಮಾನೇಗಾರ, ಮಹಿಪಾಲರೆಡ್ಡಿ ಹತ್ತಿಕುಣಿ, ಶ್ರೇಣಿಕಕುಮಾರ ದೋಖಾ, ಅಮರೇಶ್ವರಿ ಚಿಂಚನಸೂರ್, ವಿಶ್ವನಾಥ ನೀಲಹಳ್ಳಿ, ಖಾಜಾ ಮೈನೋದ್ದೀನ್, ಸಂಜೀವಕುಮಾರ ಚಂದಾಪುರ, ಕೃಷ್ಣ ಮೇದಾರ, ರವೀಂದ್ರರೆಡ್ಡಿ ಮಾಲಿಪಾಟೀಲ್, ಆನಂದ ಬೋಯಿನ್, ಸೈಯದ್ ಬಾಬಾ, ಕರೀಂ ಸಾಬ್, ವಿಜಯಕುಮಾರ ನಿರೇಟಿ, ಸಾಯಬಣ್ಣ ಹೂಗಾರ, ಅಖ್ತರ್ ಪ್ಯಾರೆ, ಚಾಂದಪಾಶಾ, ಅಶೋಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts