More

    12 ಗ್ರಾಪಂಗಳಿಗೆ ಚುನಾವಣೆ

    ಗುಳೇದಗುಡ್ಡ: ತಾಲೂಕಿನ ಮಸ್ಟ್‌ರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹಾಗೂ ಎಸ್‌ಪಿ ಲೋಕೇಶ ಜಗಲಾಸರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಗುಳೇದಗುಡ್ಡ ತಾಲೂಕಿನ 12 ಗ್ರಾಪಂಗಳಿಗೆ ಎರಡನೇ ಹಂತದ ಗ್ರಾಪಂ ಚುನಾವಣೆ ಡಿ.27ರಂದು ನಡೆಯಲಿದ್ದು, ತಾಲೂಕಾಡಳಿತ ನಗರದ ಬಾಲಕರ ಸರ್ಕಾರಿ ಪಪೂ ಮಹಾವಿದ್ಯಾಲಯದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

    ಮತಪೆಟ್ಟಿಗೆ, ಬ್ಯಾಲೆಟ್ ಪೇಪರ್, ಮತದಾರರ ಪ್ರತಿ, ಸ್ಯಾನಿಟೈಸರ್ ಸೇರಿ ಅಗತ್ಯ ಸಾಮಗ್ರಿಗಳನ್ನು ತಾಲೂಕು ಆಡಳಿತ ಚುನಾವಣೆ ಸಿಬ್ಬಂದಿಗೆ ವಿತರಿಸಿತು. ತಾಲೂಕಿನ 62 ಮತಗಟ್ಟೆಗಳ ಪೈಕಿ 7 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ 55 ಮತಗಟ್ಟೆಗಳಿಗೆ ಚುನಾವಣೆ ನಡೆಯಲಿದೆ.

    ತಾಲೂಕಿನ ಹಾನಾಪುರ ಎಸ್.ಪಿ., ನಾಗರಾಳ ಎಸ್.ಪಿ., ಹಳದೂರ, ಪರ್ವತಿ, ಲಾಯದಗುಂದಿ, ಕೋಟೆಕಲ್ಲ, ಕೆಲವಡಿ, ಕಟಗೇರಿ, ಜಮ್ಮನಕಟ್ಟಿ, ಹಂಸನೂರ, ಹಂಗರಗಿ, ಮಂಗಳಗುಡ್ಡ ಸೇರಿ 12 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 156 ಸ್ಥಾನಗಳಿಗೆ 351 ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.

    6 ಅತಿ ಸೂಕ್ಷ್ಮ, 15 ಸೂಕ್ಷ್ಮ ಮತಗಟ್ಟೆಗಳನ್ನು ಗುರತಿಸಲಾಗಿದೆ. ಗುಳೇದಗುಡ್ಡ ತಾಲೂಕಿನಲ್ಲಿ ಮತದಾರರ ಸಂಖ್ಯೆ 40745 ಇದ್ದು, ಪುರುಷ 20646 ಹಾಗೂ ಮಹಿಳೆ 20098 ಹಾಗೂ ಓರ್ವ ಇತರ ಮತದಾರರಿದ್ದಾರೆ.

    ಗ್ರಾಪಂ ಚುನಾವಣೆಗೆ ಒಟ್ಟು 300 ಸಿಬ್ಬಂದಿಯನ್ನು ಕಾರ್ಯನಿರ್ವಹಣೆಗೆ ನೇಮಿಸಲಾಗಿದೆ. ಅಧ್ಯಕ್ಷಾಧಿಕಾರಿ, ಮೊದಲನೇ ಮತಗಟ್ಟೆ ಅಧಿಕಾರಿ, ಎರಡನೇ ಹಾಗೂ 3ನೇ ಮತಗಟ್ಟೆ ಅಧಿಕಾರಿಗಳು ಹಾಗೂ ಇಬ್ಬರು ಸಿಪಿಐ, ನಾಲ್ವರು ಪಿಎಸ್‌ಐ, 9 ಜನ ಎಎಸ್‌ಐ, 64 ಪೊಲೀಸ್, 12 ಗೃಹರಕ್ಷಕ ದಳ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts