More

    ಗಂಜಿಗೇರಿ ಕೆರೆಗೆ ತಡೆಗೋಡೆ ನಿರ್ಮಿಸಿ

    ಗುಳೇದಗುಡ್ಡ: ಸಮೀಪದ ಗಂಜಿಗೇರಿ ಕೆರೆಗೆ ತಡೆಗೋಡೆ ನಿರ್ಮಿಸುವುದು ಬ್ರಿಟಿಷರ ಕಾಲದಿಂದಲೂ ಅರ್ಧಕ್ಕೆ ನಿಂತಿದ್ದನ್ನು ಪೂರ್ಣಗೊಳಿಸಿ ನೀರು ಹೊಲಗಳಿಗೆ ನುಗ್ಗದಂತೆ ಮಾಡಬೇಕು ಎಂದು ಕೆರೆ ಅಕ್ಕಪಕ್ಕದ ಜಮೀನಿನ ಮಾಲೀಕರು ಆಗ್ರಹಿಸಿದ್ದಾರೆ.

    ಈ ಭಾಗದಲ್ಲಿ ಸಾಕಷ್ಟು ಮಳೆಯಾದ ಕಾರಣ ನೀರು ಗಂಜಿಗೇರಿ ಕೆರೆಗೆ ಹರಿದು ಬರುತ್ತಿದೆ. ಕೆರೆ ತುಂಬಿ ಹೆಚ್ಚಾದ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಅಪಾರ ಬೆಳೆ ಹಾನಿಯಾಗುತ್ತಿದೆ. ಈ ಭಾಗದ ಅಂದಾಜು 90 ಎಕರೆ ಜಮೀನುಗಳಿಗೆ ಈ ಗಂಜಿಗೇರಿ ಕೆರೆಯ ಹೆಚ್ಚಾದ ನೀರು ನುಗ್ಗುತ್ತಿದೆ ಎಂದು ಕೆರೆ ಸುತ್ತಲಿನ ಜಮೀನು ಮಾಲೀಕರು ದೂರಿದ್ದಾರೆ.

    ಕೂಡಲೇ ಅಧಿಕಾರಿಗಳು ಕ್ರಮವಹಿಸಿ ಅರ್ಧಕ್ಕೆ ನಿಂತಿರುವ ಗಂಜಿಗೇರಿಯ ಕೆರೆಗೆ ತಡೆಗೋಡೆ ಪೂರ್ಣಗೊಳಿಸಿ ಹೊಲಗಳಿಗೆ ನೀರು ಹರಿದು ಹೋಗದಂತೆ ಮಾಡಬೇಕು. ಹೆಚ್ಚಾದ ಕೆರೆಯ ನೀರು ರಾಜಮಾರ್ಗದಿಂದ ಹರಿದು ಹೋಗುವಂತೆ ಮಾಡಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆರೆ ಸುತ್ತಲಿನ ಜಮೀನು ಮಾಲೀಕರಾದ ಯಲ್ಲಪ್ಪ ಮನ್ನಿಕಟ್ಟಿ, ಮಂಜುನಾಥ ತಿಪ್ಪಾ ಮತ್ತಿತರರು ಒತ್ತಾಯಿಸಿದ್ದಾರೆ.

    ಗುಳೇದಗುಡ್ಡ ಸಮೀಪದ ಗಂಜಿಗೇರಿ ಕೆರೆ ನೀರು ರೈತರ ಜಮೀನುಗಳಿಗೆ ನುಗ್ಗುವುದನ್ನು ಸ್ಥಳ ಪರಿಶೀಲನೆ ಮಾಡುವಂತೆ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ತಾಲೂಕು ಪಂಚಾಯಿತಿ ಅನುದಾನದಲ್ಲಿ ಕೆರೆಗೆ ತಡೆಗೋಡೆ ನಿರ್ಮಿಸಲು ಆದ್ಯತೆ ನೀಡಲಾಗುವುದು.
    ಸತೀಶ ನಾಯಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts