More

    ಪ್ರಧಾನಿ ಮೋದಿಗೆ ಅಭಿನಂದನಾ ಪತ್ರ ಬರೆಯಲು ಶಿಕ್ಷಕರ ಸೂಚನೆ; ಕೆಲವು ಪಾಲಕರ ವಿರೋಧಕ್ಕೆ ಮಣಿದು ಕ್ಷಮೆಯಾಚಿಸಿದ ಶಾಲೆ

    ಗುಜರಾತ್​: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲವಾಗಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನಾ ಪತ್ರ ಬರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದ ಗುಜರಾತ್​ನ ಲಿಟ್ಲ್​ ಸ್ಟಾರ್​ ಸ್ಕೂಲ್​ಗುರುವಾರ ಕೆಲವು ಪಾಲಕರ ವಿರೋಧಕ್ಕೆ ಮಣಿದು ಕ್ಷಮೆಯಾಚಿಸಿದೆ.

    ಗುಜರಾತ್​ನ ಲಿಟ್ಲ್​ ಸ್ಟಾರ್​ ಸ್ಕೂಲ್​ನಲ್ಲಿ ಶಿಕ್ಷಕರು ಬುಧವಾರ ತರಗತಿಯ ಬೋರ್ಡ್​ ಮೇಲೆ “ಅಭಿನಂದನೆಗಳು. ನಾನು, ಭಾರತದ ಪ್ರಜೆ, ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಸಿಎಎ ವಿಚಾರದಲ್ಲಿ ಅಭಿನಂದಿಸುತ್ತೇನೆ. ಜತೆಗೆ ನಾನು ಮತ್ತು ನನ್ನ ಕುಟುಂಬ ಕಾಯ್ದೆಯನ್ನು ಬೆಂಬಲಿಸುತ್ತೇವೆ ಎಂದು ಬರೆದಿದ್ದಾರೆ. ಇದನ್ನು ಪತ್ರಗಳಲ್ಲಿ ಬರೆದು ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ಕಚೇರಿ ವಿಳಾಸಕ್ಕೆ ಕಳುಹಿಸುವಂತೆ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಒಂದು ವೇಳೆ ಪತ್ರ ಬರೆಯದಿದ್ದಲ್ಲಿ ಆಂತರಿಕ ಪರೀಕ್ಷೆಯಲ್ಲಿ ಅಂಕ ಕಡಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

    ಶಾಲೆಯಲ್ಲಿ ಇಡೀ ದಿನ ಕಾಯ್ದೆಗೆ ಬೆಂಬಲವಾಗಿ ಮೋದಿಗೆ ಅಭಿನಂದನಾ ಸಂದೇಶಗಳನ್ನು ಬರೆಯುವಂತೆ ಹೇಳಿದ್ದಾರೆ. ನನ್ನ ಮಗಳಿಗೆ ಸಮಸ್ಯೆ ಅರ್ಥವಾಗುತ್ತಿಲ್ಲ. ಅವಳು ಅದರ ಭಾಗವಾಗಲು ಒತ್ತಾಯಿಸಲಾಗುತ್ತಿದೆ, ಆದರೆ ಅದು ನಮಗೆ ಇಷ್ಟವಿಲ್ಲ ಎಂದು 6ನೇ ತರಗತಿ ವಿದ್ಯಾರ್ಥಿನಿ ಪಾಲಕರು ಪತ್ರಿಕೆಗೆ ತಿಳಿಸಿದ್ದಾರೆ.

    ನೂರಾರು ಪಾಲಕರು ಶಾಲೆಗೆ ಭೇಟಿ ನೀಡಿ, ಆಡಳಿತ ಮಂಡಳಿ ವರ್ತನೆಯನ್ನು ಪ್ರಶ್ನಿಸಿದಾಗ, ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಕೆಲ ಶಿಕ್ಷಕರಿಂದ ಈ ರೀತಿ ತಪ್ಪಾಗಿದೆ ಎಂದು ತಿಳಿಸಿ ಪಾಲಕರ ಕ್ಷಮೆಯಾಚಿಸಿದ್ದಾರೆ.

    ಕಳೆದ ವಾರ ಅಹಮದಾಬಾದ್‌ನ ಶಾಲೆಯ 800 ವಿದ್ಯಾರ್ಥಿಗಳಿಗೆ ಬಿಜೆಪಿ ಕಾರ್ಯಕರ್ತರು ಶಾಲಾ ಪ್ರಾಂಶುಪಾಲರ ಹೆಸರಲ್ಲಿ ಪೋಸ್ಟ್​ ಕಾರ್ಡ್​ ವಿತರಿಸಿ ಪತ್ರ ಬರೆಯುವಂತೆ ಸೂಚಿಸಿದ್ದರು ಎಂದು ಇದೇ ವೇಳೆ ಪಾಲಕರಿಗೆ ಮನವರಿಕೆ ಮಾಡಿಕೊಟ್ಟಿದೆ. (ಏಜೆನ್ಸಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts