More

    ಮಾನನಷ್ಟ ಮೊಕದ್ದಮೆ ಪ್ರಕರಣ; ಅರ್ಜಿ ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ

    ಅಹಮದಬಾದ್​: 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಂಸತ್​ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಕೊಂಚ ರಿಲೀಪ್​ ದೊರೆತಿದೆ.

    2 ವರ್ಷಗಳ ಜೈಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನಡೆಸುವುದಾಗಿ ಗುಜರಾತ್​ ಹೈಕೋರ್ಟ್​ ತಿಳಿಸಿದೆ.

    ಮೇ 2ಕ್ಕೆ ಮುಂದೂಡಿಕೆ

    ಅರ್ಜಿ ವಿಚಾರಣೆ ನಡೆಸಿದ ಹೇಮಂತ್ ಪ್ರಚಕ್ ಅವರಿದ್ದ ಏಕಸದಸ್ಯ ಪೀಠವು ರಾಹುಲ್ ಪರ ವಕೀಲರು ಶಿಕ್ಷೆಗೆ ತಡೆಯಾಜ್ಞೆ ನೀಡಲು ಆರು ಮೂಲಭೂತ ಆಧಾರಗಳನ್ನು ಮಂಡಿಸಿ ಶಿಕ್ಷೆಗೆ ತಡೆ ನೀಡುವಂತೆ ನ್ಯಾಯಪೀಠಕ್ಕೆ ಒತ್ತಾಯಿಸಿದ್ದಾರೆ.

    ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮೇ2ಕ್ಕೆ ಮುಂದೂಡಿದ್ದರು.

    Rahul HC

    ಇದನ್ನೂ ಓದಿ: ಮೋದಿಯವರೇ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ: ಸಿದ್ದರಾಮಯ್ಯ

    ಎಚ್ಚರದಿಂದರಬೇಕು

    ಈ ವೇಳೆ ಮಾತನಾಡಿದ ನ್ಯಾಯಾಧೀಶರು ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ಹೇಳಿಕೆಗಳನ್ನು ನೀಡುವ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಜನರನ್ನು ಪ್ರತಿನಿಧಿಸುವವರು ತಮ್ಮ ಹೇಳಿಕೆಯನ್ನು ಎಚ್ಚರಿಕೆಯಿಂದ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಹಿಂದೆ ರಾಹುಲ್​ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ನ್ಯಾಯಾಧೀಶರು ಹಿಂದೆ ಸರಿದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts