More

    ಒಂದೇ ರೈಡ್‌ಗೆ ದಾಖಲೆ 8 ಅಂಕ ಬಿಟ್ಟುಕೊಟ್ಟು ಸೋತ ಬೆಂಗಳೂರು ಬುಲ್ಸ್

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ತಂಡದ ಮೊಹಮದ್ ನಬಿಬಕ್ಷ್ ನಡೆಸಿದ ಒಂದೇ ರೈಡಿಂಗ್‌ಗೆ 8 ಅಂಕಗಳನ್ನು ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯಲ್ಲಿ ಸತತ 2ನೇ ಸೋಲು ಅನುಭವಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಬುಲ್ಸ್ ತಂಡ 39-40ರಿಂದ ಬೆಂಗಾಲ್‌ಗೆ ಶರಣಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡಿತು. ಬುಲ್ಸ್ 40 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಡೆಲ್ಲಿ (42) ಅಗ್ರಸ್ಥಾನ ಕಾಯ್ದುಕೊಂಡಿದೆ.

    ಮೊದಲಾರ್ಧದಲ್ಲಿ 13-14ರಿಂದ ಅಲ್ಪ ಹಿನ್ನಡೆ ಕಂಡಿದ್ದ ಬುಲ್ಸ್ ದ್ವಿತೀಯಾರ್ಧದ ಆರಂಭದಲ್ಲೇ ತಿರುಗೇಟು ನೀಡಿ ಪಂದ್ಯದ 29ನೇ ನಿಮಿಷದ ವೇಳೆ 27-21ರಿಂದ ಮುನ್ನಡೆ ಸಾಧಿಸಿತ್ತು. ಆದರೆ ಆ ವೇಳೆ ರೈಡಿಂಗ್‌ಗೆ ಬಂದ ನಬಿಬಕ್ಷ್‌ರನ್ನು ಔಟ್ ಮಾಡಿದರೂ, ಎಲ್ಲ ಡಿೆಂಡರ್‌ಗಳು ಲಾಬಿಗೆ (ಹಳದಿ ಮಾರ್ಕ್) ಹೋದ ಕಾರಣ ಬುಲ್ಸ್ ತಂಡ 1 ಬೋನಸ್ ಮತ್ತು 7 ಟೆಕ್ನಿಕಲ್ ಅಂಕಗಳ ಸಹಿತ ಒಟ್ಟು 8 ಅಂಕ ಬಿಟ್ಟುಕೊಟ್ಟಿತು. ಈ ತೀರ್ಪಿನ ವಿರುದ್ಧ 2 ಬಾರಿ ರಿವೀವ್ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಇದರಿಂದ 28-29ರಿಂದ ಹಿನ್ನಡೆ ಕಂಡ ಬುಲ್ಸ್ ಬಳಿಕ ಪಂದ್ಯದ ಮೇಲಿನ ಹಿಡಿತವನ್ನೂ ಕಳೆದುಕೊಂಡಿತು. ನಾಯಕ ಪವನ್ ಶೆರಾವತ್ (13) ಹೋರಾಟ ವ್ಯರ್ಥವಾಯಿತು.

    ನಬಿಬಕ್ಷ್ (8) ಪ್ರೊ ಕಬಡ್ಡಿ ಇತಿಹಾಸದಲ್ಲಿ ಒಂದೇ ರೈಡಿಂಗ್‌ನಲ್ಲಿ ಗರಿಷ್ಠ ಅಂಕ ಗಳಿಸಿದ ದಾಖಲೆ ಬರೆದರು. ಈ ಮುನ್ನ ಪ್ರದೀಪ್ ನರ್ವಾಲ್ 6 ಅಂಕ ಗಳಿಸಿದ್ದು ದಾಖಲೆಯಾಗಿತ್ತು.

    ಗುಜರಾತ್‌ಗೆ ಜಯ
    ಸಂಘಟಿತ ನಿರ್ವಹಣೆ ತೋರಿದ ಗುಜರಾತ್ ಜೈಂಟ್ಸ್ ತಂಡ ದಿನದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 37-35ರಿಂದ ರೋಚಕ ಗೆಲುವು ದಾಖಲಿಸಿತು. ಮೊದಲಾರ್ಧದಲ್ಲಿ 17-14ರಿಂದ ಮುನ್ನಡೆ ಸಾಧಿಸಿದ್ದ ಗುಜರಾತ್, ಮಂಜೀತ್ (12) ಮತ್ತು ಅಜಿಂಕ್ಯ ಪವಾರ್ (10) ದಿಟ್ಟ ಹೋರಾಟದ ನಡುವೆಯೂ ದ್ವಿತೀಯಾರ್ಧದಲ್ಲೂ ಮುನ್ನಡೆ ಕಾಯ್ದುಕೊಂಡು ಜಯಿಸಿತು.

    ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಮೂವರು ಭಾರತೀಯರಿಗೆ ಸ್ಥಾನ, ಏಕದಿನದಲ್ಲಿ ನಿರಾಸೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts