More

    VIDEO: ಟ್ರಂಪ್​-ಮೋದಿ ರೋಡ್​ ಶೋಕ್ಕೆ ಸಿದ್ಧತೆ; ಸಬರಮತಿ ಆಶ್ರಮದ ಬಳಿ ನೃತ್ಯ ಮಾಡುತ್ತಿರುವ ಕಾಶ್ಮೀರಿ ಕಲಾವಿದರು, ಏರ್​ಪೋರ್ಟ್​ನಲ್ಲಿ ಶಾಲಾ ಮಕ್ಕಳ ಡಾನ್ಸ್​

    ಅಹ್ಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿತ್ತಿರುವ ಆರನೇ ಅಧ್ಯಕ್ಷ. ಹಾಗೇ ಭಾರತಕ್ಕೆ ಅವರ ಪ್ರಥಮ ಭೇಟಿ.

    ಇಂದು ಅಹಮದಾಬಾದ್​ನ ಮೊಟೆರೋ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಟ್ರಂಪ್​ ಬಳಿಕ ರೋಡ್​ ಶೋ ನಡೆಸಲಿದ್ದಾರೆ. ಈ ವೇಳೆ ನರೇಂದ್ರ ಮೋದಿ ಜೊತೆಯಾಗಲಿದ್ದಾರೆ. ಹಾಗೇ ಟ್ರಂಪ್​ ಪತ್ನಿ, ಮಗಳು, ಅಳಿಯ ಕೂಡ ಇರಲಿದ್ದಾರೆ ಎನ್ನಲಾಗಿದೆ.

    ಟ್ರಂಪ್​-ಮೋದಿ ರೋಡ್​ ಶೋ ವೇಳೆ ನೃತ್ಯಪ್ರದರ್ಶನ ನಡೆಯಲಿದ್ದು ಜಮ್ಮು-ಕಾಶ್ಮೀರದಿಂದ ಈಗಾಗಲೇ ಕಲಾವಿದರು ಆಗಮಿಸಿದ್ದಾರೆ. ಜಮ್ಮುಕಾಶ್ಮೀರದ ನೃತ್ಯ ಕಲಾವಿದರು ಈಗಾಗಲೇ ಅಹಮದಾಬಾದ್​ನ ಸಬರಮತಿ ಆಶ್ರಮದ ಎದುರು ನೃತ್ಯ ಮಾಡುತ್ತಿದ್ದಾರೆ.

    ಟ್ರಂಪ್​ ಅವರಿಗೆ ನಮ್ಮ ದೇಶದ ಸಾಂಸ್ಕೃತಿಕ ಸೌಂದರ್ಯವನ್ನೂ ತೋರಿಸಲು ಸಿದ್ಧತೆ ನಡೆದಿದೆ. ಆಯಾ ರಾಜ್ಯಗಳ, ವಿವಿಧ ಪ್ರಾಂತ್ಯಗಳ ವಿಶೇಷತೆ ಪ್ರದರ್ಶನಕ್ಕಾಗಿ ಪ್ರತ್ಯೇಕವಾಗಿ 50 ವೇದಿಕೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕಲಾವಿದರು ತಮ್ಮ ಕಲೆ, ಸಂಸ್ಕೃತಿಗಳ ಚಿತ್ರಣ ನೀಡಲಿದ್ದಾರೆ.

    ಹಾಗೇ ಡೊನಾಲ್ಡ್​ ಟ್ರಂಪ್​ ಬಂದು ಇಳಿಯಲಿರುವ ಅಹಮದಾಬಾದ್​ ಏರ್​ಪೋರ್ಟ್​ ಬಳಿ ಶಾಲಾ ಮಕ್ಕಳ ನೃತ್ಯತಂಡವೊಂದು ಡಾನ್ಸ್​ ಮಾಡುತ್ತಿದೆ. ಇವರೂ ಕೂಡ ರೋಡ್ ಶೋ ವೇಳೆ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts