More

    ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ: ರಾಜ್ಯ ಕಾರ್ಯದರ್ಶಿ ಡಾ.ಸರ್ಜಾಶಂಕರ್ ಹರಳಿಮಠ ಒತ್ತಾಯ

    ಮಂಡ್ಯ: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮಾನವೀಯ ದೃಷ್ಟಿಯಿಂದ ಸೇವಾ ಭದ್ರತೆ ಒದಗಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ರಾಜ್ಯ ಕಾರ್ಯದರ್ಶಿ ಡಾ.ಸರ್ಜಾಶಂಕರ್ ಹರಳಿಮಠ ಒತ್ತಾಯಿಸಿದರು.
    ಕಾಲೇಜುಗಳಲ್ಲಿ ಶೇ.70ಕ್ಕಿಂತ ಹೆಚ್ಚು ಶೈಕ್ಷಣಿಕ ಕೆಲಸವನ್ನು ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಿದ್ದಾರೆ. ಪೂರ್ಣಕಾಲಿಕ ಪ್ರಾಧ್ಯಾಪಕರು ನಿರ್ವಹಿಸುವ ಎಲ್ಲ ಕಾರ್ಯಗಳನ್ನು ಕಿಂಚಿತ್ತೂ ಲೋಪವಿಲ್ಲದಂತೆ ಮಾಡುತ್ತಿದ್ದೇವೆ. ಆದರೆ ನಮಗೆ ಸೇವಾಭದ್ರತೆ ಇಲ್ಲದೆ, ಕನಿಷ್ಟ ಮಟ್ಟದಲ್ಲಿ ಗೌರವಧನ ಪಡೆಯುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
    ಹಲವು ವರ್ಷದಿಂದ ರಜೆ ಸೌಲಭ್ಯ, ನೇಮಕಾತಿಗಳಲ್ಲಿ ಮೀಸಲಾತಿ ಮತ್ತು ವಯೋಮಿತಿ ಸಡಿಲಿಕೆ, ವೇತನ ಸಹಿತ ಮಾತೃತ್ವ ರಜೆ, ಪಿತೃತ್ವ ರಜೆ, ವಿಮಾ ಸೌಲಭ್ಯ, ಇಎಸ್‌ಐ, ಇಪಿಎಸ್ ಸೇರಿದಂತೆ ಮುಂತಾದ ಕಾರ್ಮಿಕ ಸೌಲಭ್ಯಗಳಿಂದ ವಂಚಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಯಶಸ್ವಿ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅತಿಥಿ ಉಪನ್ಯಾಸಕರಿಗೆ ತ್ವರಿತವಾಗಿ ಸೇವಾ ಸಕ್ರಮಾತಿ/ಸೇವಾ ಭದ್ರತೆ/ಸೇವಾ ವಿಲೀನಾತಿ ಒದಗಿಸಬೇಕು ಸೇರಿದಂತೆ ಪ್ರಮುಖ 15 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
    ರಾಜ್ಯ ಉಪಾಧ್ಯಕ್ಷ ದೀಪಾ ಸಿಂಗ್, ಕಾರ್ಯದರ್ಶಿ ಶಿವಕುಮಾರ್, ಕಾರ್ಯಕಾರಿಣಿ ಸದಸ್ಯರಾದ ಡಾ.ಇಂದ್ರಕುಮಾರ್, ಡಾ.ಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts