More

    ಗುಬ್ಬಿ ಮಟನ್‌ಸ್ಟಾಲ್ ಸಂಕೀರ್ಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ; ಮೌಲಸೌಲಭ್ಯ ಕಲ್ಪಿಸಲು ಒತ್ತಾಯ

    ಗುಬ್ಬಿ : ಪಟ್ಟಣದ ಸಂತೇಮೈದಾನದಲ್ಲಿರುವ ಪಟ್ಟಣ ಪಂಚಾಯಿತಿಯ ಮಟನ್‌ಸ್ಟಾಲ್ ಸಂಕೀರ್ಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಬೀದಿ ಸೇರುತ್ತಿದ್ದು, ಮಾಂಸ ತಿನ್ನಲು ನಾಯಿಗಳ ಹಿಂಡೇ ಸೇರುತ್ತಿರುವುದರಿಂದ ಸಾರ್ವಜನಿಕರು ಓಡಾಡಲು ಹೆದರುವಂತಾಗಿದೆ.

    ತ್ಯಾಜ್ಯ ವಿಲೇವಾರಿ ಮಾಡುವ ಗೋಜಿಗೆ ಹೋಗದ ಅಂಗಡಿಯವರು, ಹೊರಭಾಗದಲ್ಲಿ ಕಾದು ಕುಳಿತ ನಾಯಿಗಳಿಗೆ ಮಾಂಸದ ತ್ಯಾಜ್ಯ ಬಿಸಾಡಿ ತಮ್ಮ ಕೆಲಸ ಮುಗಿಯಿತು ಎಂದು ಕೈತೊಳೆದುಕೊಳ್ಳುತ್ತಾರೆ. ತ್ಯಾಜ್ಯ ತಿಂದ ನಾಯಿಗಳು ಯಾವ ಕ್ಷಣದಲ್ಲಾದರೂ ಪಾದಚಾರಿಗಳ ಮೇಲೆರಗುತ್ತದೆ. ಈ ಪೈಕಿ ಸಣ್ಣ ಮಕ್ಕಳ ಮೇಲೆ ಬಿದ್ದು, ಜೀವ ಹಾನಿ ಮಾಡುವ ಸಾಧ್ಯತೆ ಹೆಚ್ಚಿದೆ.

    ಪಟ್ಟಣ ಪಂಚಾಯಿತಿ ನಿರ್ಮಿಸಿದ ಮಟನ್ ಸ್ಟಾಲ್‌ಗಳ ಸಂಕೀರ್ಣ ಸಂತೇ ಮೈದಾನದ ಒಂದು ಭಾಗದಲ್ಲಿ ತಲೆ ಎತ್ತಿದೆ. ಪಟ್ಟಣ ಪಂಚಾಯಿತಿ ಇಲ್ಲಿ ಮೂಲ ಸವಲತ್ತು ಒದಗಿಸಿಲ್ಲ. ತ್ಯಾಜ್ಯ ವಿಲೇವಾರಿ ಬಗ್ಗೆ ಕಿಂಚಿತ್ತೂ ಕಾಳಜಿವಹಿಸಿಲ್ಲ. ಅಂಗಡಿಗಳಿಂದ ಹೊರ ಹರಿಯುವ ತ್ಯಾಜ್ಯದ ನೀರು, ರಕ್ತ ಮಿಶ್ರಿತ ನೀರು ಎಲ್ಲವೂ ಅಲ್ಲೇ ಚರಂಡಿಯಲ್ಲೇ ಸ್ಥಗಿತಗೊಂಡಿದೆ. ಸರಾಗವಾಗಿ ನೀರು ಹರಿಯದ ಚರಂಡಿಯಿಂದ ಸ್ಥಳೀಯ ಸಂತೇ ವ್ಯಾಪಾರಿಗಳು ಮೂಗು ಮುಚ್ಚಿ ಕುಳಿತುಕೊಳ್ಳುವ ದುಸ್ಥಿತಿ ಎದುರಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಸೆಳೆದರೂ ತಲೆ ಕೆಡಿಸಿಕೊಂಡಿಲ್ಲ ಎಂದು ವ್ಯಾಪಾರಿಗಳು ಆಕ್ರೋಶ ಹೊರಹಾಕಿದರು.

    ಮಟನ್ ಸ್ಟಾಲ್‌ಗಳ ನಿರ್ವಹಣೆ ಬಗ್ಗೆ ಅಧಿಕಾರಿಗಳು ಎಂದಿಗೂ ಪರಿಶೀಲಿಸಿಲ್ಲ. ಈ ಬಗ್ಗೆ ಮುಖ್ಯಾಧಿಕಾರಿ ಯೋಗೇಶ್ ಅವರನ್ನು ಕೇಳಿದರೇ ಮಟನ್ ಸ್ಟಾಲ್‌ಗಳ ಮಾಲೀಕರು ತ್ಯಾಜ್ಯ ವಿಲೇವಾರಿ ಮಾಡಬೇಕು. ವಿಲೇವಾರಿ ಘಟಕಕ್ಕೆ ತೆರಳಿ ಗುಂಡಿ ತೋಡಿ ತ್ಯಾಜ್ಯ ಮುಚ್ಚಬೇಕು ಎಂದು ಹೇಳುತ್ತಾರೆ.

    ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಟ್ಟು : ಅಧಿಕಾರಿಗಳು ಮಟನ್ ಸ್ಟಾಲ್‌ಗಳಿಗೆ ಮೂಲಸೌಕರ್ಯ ಮಾಡಿಕೊಡಬೇಕಿದೆ. ಜತೆಗೆ ನಿತ್ಯ ಪರಿಶೀಲನೆಗೆ ಸಿಬ್ಬಂದಿ ನೇಮಕ ಮಾಡಬೇಕಿದೆ. ತ್ಯಾಜ್ಯ, ನಾಯಿಗಳ ಪಾಲಾಗುತ್ತಿರುವ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ಮಾಂಸದಂಗಡಿ ನಿರ್ವಹಣೆ ಬಗ್ಗೆ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಿದೆ.
    ಮಟನ್ ವ್ಯಾಪಾರಿಗಳೂ ತ್ಯಾಜ್ಯವಿಲೇವಾರಿ ಮಾಡದೆ ಅಲ್ಲಿಯೇ ಸಂಕೀರ್ಣದ ಪಕ್ಕ ನಾಯಿಗಳಿಗೆ ಬಿಸಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಪಟ್ಟಣದ ಸಂತೇಮೈದಾನದ ಪಟ್ಟಣ ಪಂಚಾಯಿತಿಯ ಮಟನ್‌ಸ್ಟಾಲ್ ಸಂಕೀರ್ಣದ ಅಂಗಡಿ ಮಾಲೀಕರ ಜತೆ ಸಭೆ ನಡೆಸಿ ನಿಗದಿತ ಸ್ಥಳಗಳಲ್ಲಿ ಮಾಂಸಕ ತ್ಯಾಜ್ಯ ಹಾಕುವಂತೆ ಸೂಚಿಸಲಾಗುವುದು.
    ಅಣ್ಣಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts