More

    ದೇಶದ ಗಡಿ ಕಾಯುವುದು ಹೆಮ್ಮೆಯ ವಿಷಯ

    ಎನ್.ಆರ್.ಪುರ: ದೇಶ ಸೇವೆ ಮಾಡಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ನಿವೃತ್ತ ಯೋಧ ಶಿಬು ಹೇಳಿದರು.
    ದೇಶ ಸೇವೆಯಿಂದ ನಿವೃತ್ತರಾಗಿ ಪಟ್ಟಣಕ್ಕೆ ಆಗಮಿಸಿದಾಗ ಜೇಸಿ ಸಂಸ್ಥೆ ಹಾಗೂ ಇತರೆ ಸಂಘ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶದ ಗಡಿ ಕಾಯುವುದು ಹೆಮ್ಮೆಯ ವಿಷಯ. ಅಂತಹ ಅವಕಾಶಗಳು ಎಲ್ಲರಿಗೂ ದೊರಕುವುದಿಲ್ಲ. ಅಂತಹ ಸೇವೆಯನ್ನು ನಾನು 20 ವರ್ಷ 6 ತಿಂಗಳು ಮಾಡಿರುವುದು ನನ್ನ ಹೆಮ್ಮೆ. ದೇಶದ ಗಡಿ ಭಾಗದಲ್ಲಿಲ್ಲದೆ ವಿದೇಶದಲ್ಲೂ ಸೇವೆ ಸಲ್ಲಿಸಲು ಅವಕಾಶ ನನಗೆ ದೊರೆಯಿತು ಎಂದರು.
    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ದೇಶ ಕಾಯುತ್ತಿರುವ ಯೋಧರು ದೇಶದಲ್ಲಿ ಉಗ್ರರ ದೇಶ ದ್ರೋಹಿ ಚಟುವಟಿಕೆ ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ. ನಾವು ದೇಶದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸುತ್ತಿರುವುದು ದೇಶದ ಗಡಿ ಕಾಯುತ್ತಿರುವ ಯೋಧರ ಪರಿಶ್ರಮದಿಂದ ಎಂದರು.
    ಜೇಸೀ ಸಂಸ್ಥೆ ಅಧ್ಯಕ್ಷ ಗಂಗಾಧರ್ ಮಾತನಾಡಿ, ನಿವೃತ್ತ ಯೋಧ ಶಿಬು ವಿಶ್ವ ಸಂಸ್ಥೆಯ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದು, ದಕ್ಷಿಣ ಆಫ್ರಿಕಾದ ಕಾಂಗೋದಲ್ಲಿ 1ವರ್ಷ ಸೇವೆ ಸಲ್ಲಿಸಿದ್ದಾರೆ. ಆರು ಪದಕ ಪಡೆದಿರುವುದು ನಮ್ಮ ಊರಿಗೇ ಹೆಮ್ಮೆಯ ವಿಷಯ ಎಂದರು.
    ನಿವೃತ್ತ ಸೈನಿಕರ ಸಂಘದ ಸದಸ್ಯ ಡೇವೀಸ್ ಮಾತನಾಡಿ, ಕೆಲವರು ಬಯಸಿದರೂ ಕೂಡ ದೇಶ ಸೇವೆ ಅವಕಾಶ ಸಿಗುವುದಿಲ್ಲ. ಜಾತಿ, ಮತ, ಧರ್ಮ, ಪಕ್ಷ ಭಾಷೆಗಳನ್ನು ಮೀರಿದ ಸೇವೆ ದೇಶ ಸೇವೆಯಾಗಿದೆ. ಈ ಸೇವೆಯಲ್ಲಿ ಬರೀ ತ್ಯಾಗವೇ ತುಂಬಿರುತ್ತದೆ. ಇದರಲ್ಲಿ ಯಾವುದೇ ಪ್ರತಿಲಾಕ್ಷೆ ಇರುವುದಿಲ್ಲ. ನಿವೃತ್ತ ಯೋಧರನ್ನು ಎಲ್ಲರೂ ಕೃತಜ್ಞತ ಮನೋಭಾವದಿಂದ ಕಾಣಬೇಕು ಎಂದರು.
    ಜೇಸಿ ಸಂಸ್ಥೆ ಕಾರ್ಯದರ್ಶಿ ಮಿಥುನ್, ನಿವೃತ್ತ ಯೋಧರಾದ ಜಾನಿ, ಗಣೇಶ್, ಮ್ಯಥ್ಯೂ, ರಂಜು,ಸೋಮಶೇಖರ್, ಬೆನ್ನಿ, ಸುನೀಲ್, ಸಜಿ, ಜೇಸೀ ಪದಾಧಿಕಾರಿಗಳಾದ ಅಪೂರ್ವ ರಾಘು, ಅರ್ಜುನ್, ಪುರುಷೋತ್ತಮ್, ಅಕ್ಷತ್‌ಪುಟ್ಟು, ಅಣ್ಣಪ್ಪ, ಜೀವೇಂದ್ರ, ಜಗದೀಶ್, ಸಿಜು, ಬೋಗೇಶ್ ಮತ್ತು ಜೇಸಿ ಸಂಸ್ಥೆ, ಅಭಿನವ ಬಳಗ, ಆಟೋ ಚಾಲಕರ, ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts