More

    ಎಂಟೇ ತಿಂಗಳಲ್ಲಿ ಗ್ಯಾರಂಟಿ ಸಾಕಾರ

    ಸಾಗರ: ಚುನಾವಣೆಗೂ ಮುನ್ನ ನಿಮ್ಮ ಮನೆ ಬಾಗಿಲಿಗೆ ಬಂದಾಗ ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ನಿಮಗೆ ವಾಗ್ದಾನ ಮಾಡಿದ್ದೆವು. ಸರ್ಕಾರ ಬಂದು ಕೇವಲ 8 ತಿಂಗಳಲ್ಲಿ ಅವೆಲ್ಲವನ್ನೂ ಪೂರೈಸಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
    ನಗರಸಭೆಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ನಗರಸಭೆಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಯ ಲಾನುಭವಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಯಾವ ಸರ್ಕಾರ ನಿಮ್ಮ ಪರವಾಗಿ ಇರುತ್ತದೆಯೋ ಅದನ್ನು ವ್ಯವಸ್ಥಿತವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
    ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುತ್ತಿರುವ ಅನುದಾನ ತೀರ ಕಡಿಮೆಯಾಗಿದೆ. ಆದರೂ ರಾಜ್ಯ ಸರ್ಕಾರ 5 ಗ್ಯಾರಂಟಿಗಳ ಮೂಲಕ ಬಡವರನ್ನು ಆರ್ಥಿಕ ಸದೃಢರನ್ನಾಗಿಸಲು ಇಂತಹ ಪೂರಕ ಯೋಜನೆಗಳನ್ನು ಜಾರಿಗೆ ತಂದು ಜನಮುಖಿಯಾಗಿದ್ದರೆ, ವಿರೋಧ ಪಕ್ಷಗಳು ನಾವು ಜನತೆಯನ್ನು ಸೋಮಾರಿ ಮಾಡುತ್ತಿದ್ದೇವೆ ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಶ್ರೀಮಂತರ ಕೈಯಲ್ಲಿ ಹಣ ಹೋದರೆ ಅವರು ಬ್ಯಾಂಕ್‌ಗಳಲ್ಲಿ ಡಿಪಾಜಿಟ್ ಮಾಡುತ್ತಾರೆ. ಮಧ್ಯಮ ವರ್ಗದವರ ಕೈಯಲ್ಲಿ ಹಣ ಸೇರಿದರೆ ಅದನ್ನು ದೈನಂದಿನ ಬದುಕಿಗಾಗಿ ಚಲಾವಣೆ ಮಾಡುತ್ತಾರೆ. ಇದರಿಂದ ವ್ಯಾಪಾರ ವಹಿವಾಟು ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ಹೇಳಿದರು.
    ಜಿಲ್ಲಾಡಳಿತದ 32 ಇಲಾಖೆಗಳು ಇಲ್ಲಿ ಸೇರಿ ಸಮಾವೇಶ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಸಾಗರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕೇಂದ್ರ ಸರ್ಕಾರ ಒಂದು ಮಗುವಿಗೆ 6 ಸಾವಿರ ರೂ.ಗಳ ಆರ್ಥಿಕ ಸಹಕಾರ ನೀಡಬೇಕು. ಆದರೆ ಈಗ ಕೇವಲ 2,820 ರೂ.ಗಳನ್ನು ನೀಡಲಾಗುತ್ತಿದೆ. ಆದರೂ ಮಕ್ಕಳಿಗೆ ನೀಡಬೇಕಾದ ಸೌಲಭ್ಯದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಮುಂದಿನ ವಾರ, ಹದಿನೈದು ದಿನದೊಳಗಾಗಿ ರಾಜ್ಯದ ಎಲ್ಲ ಶಾಲೆಯ ಮಕ್ಕಳಿಗೆ ವಾರದಲ್ಲಿ 3 ದಿನ ರಾಗಿ ಮಾಲ್ಟ್ ಕೊಡಲಾಗುತ್ತದೆ,ಎಂದ ಅವರು, ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಜನತೆಯ ಕ್ಷಮೆ ಕೋರಿದರು.
    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸರ್ಕಾರದ 5 ಗ್ಯಾರಂಟಿ ದೇಶದ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ನಿರ್ಮಿಸಿದೆ. ಗ್ಯಾರಂಟಿ ಕಾರ್ಡ್ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಲೇ ಇವೆ. ಲಾನುಭವಿಗಳು ಅವರ ಬಾಯಿ ಮುಚ್ಚಿಸಿದ್ದಾರೆ. ಏನಾದರೂ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
    ಜಿಲ್ಲೆಯಲ್ಲಿ ಶಂಕಿತ ಮಂಗನ ಕಾಯಿಲೆಯಿಂದ ಇಬ್ಬರು ಮತಪಟ್ಟಿದ್ದಾರೆ. ಅವರಿಗೆ 5 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
    ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಉಪವಿಭಾಗಾಧಿಕಾರಿ ಯತೀಶ್, ತಾಪಂ ಇಒ ನಾಗೇಶ್ ಬ್ಯಾಲಾಳ, ಪರಮೇಶ್ವರಪ್ಪ, ವೆಂಕಟೇಶ್, ಶ್ರೀೀಧರಮೂರ್ತಿ, ಸಂತೋಷ್, ಪರಶುರಾಮಪ್ಪ, ಉಮಾಪತಿ, ಡಾ. ಉಮಾದೇವಿ ಇತರರಿದ್ದರು. ವಿವಿಧ ಇಲಾಖೆಯ ಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಲಾಯಿತು. ಗ್ಯಾರಂಟಿ ಯೋಜನೆಯಲ್ಲಿ ಲಾನುಭವಿಗಳಿಗೆ ಸಮಸ್ಯೆ ಉಂಟಾಗಿದ್ದಲ್ಲಿ ಅದರ ಮುಖ್ಯಸ್ಥರನ್ನು ಕರೆಸಿ ಅವರಿಗೆ ತಿಳಿವಳಿಕೆ ನೀಡಲಾಯಿತು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
    ಹಂಡೆ ನೀರು ಸ್ನಾನ ಮಾಡಬೇಡಿ: ಈ ವರ್ಷ ವಾಡಿಕೆ ಮಳೆ ತುಂಬ ಕಡಿಮೆಯಾಗಿದೆ, ಸಾಗರ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ, ಬೋರ್‌ವೆಲ್‌ಗಳಲ್ಲಿ ನೀರಿಲ್ಲ, ಕೆರೆಕಟ್ಟೆಗಳು ಬತ್ತುತ್ತಿವೆ. ಅಂದು ಶರಾವತಿ ಹಿನ್ನೀರನ್ನು ಕುಡಿಯಲು ತರಲು ಯೋಜನೆ ರೂಪಿಸಿದ್ದಕ್ಕೆ ಇಂದು ಸ್ವಲ್ಪ ಉಸಿರಾಡುವಂತಾಗಿದೆ. ಬರುವ ದಿನಗಳಲ್ಲಿ ತಾಲೂಕಿನ ಹಳ್ಳಿಗಳಿಗೆ ಈ ಯೋಜನೆಯನ್ನು ವ್ಯವಸ್ಥಿತವಾಗಿ ವಿಸ್ತರಿಸಲಾಗುತ್ತದೆ ಎಂದು ಗೋಪಾಲಕೃಷ್ಣ ಬೇಳೂರು ಮಲೆನಾಡಿನಲ್ಲಿ ಹಂಡೆ ತುಂಬ ಸ್ನಾನ ಮಾಡುವ ಸಂಪ್ರದಾಯವಿದೆ. ಈ ವರ್ಷ ಮಳೆ ಕಡಿಮೆ ಇರುವುದರಿಂದ ದಯಮಾಡಿ ಎಲ್ಲರೂ ಸ್ನಾನವನ್ನು ಒಂದು ಬಕೆಟ್‌ಗೆ ಮೀಸಲಾಗಿರಿ ಎಂದು ಕೋರಿದಾಗ ಸಭೆ ನಗೆಗಡಲಿನಲ್ಲಿ ತೇಲಿತು.
    ಬೇಳೂರು ಹೊಗಳಿದ ಮಧು: ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಮ್ಮ ಭಾಷಣದ ಆರಂಭದಲ್ಲಿ ಗೋಪಾಲಕೃಷ್ಣ ಬೇಳೂರು ಅವರನ್ನು ಹೊಗಳಿ ಗುಣಗಾನ ಮಾಡಿದರು. ಗೋಪಾಲಕೃಷ್ಣ ಅವರು ಬಂಗಾರಪ್ಪ ಅವರ ಮಾನಸ ಪುತ್ರರು.ರಾಜಕಾರಣದಲ್ಲಿ ಬಂಗಾರಪ್ಪನವರ ರೀತಿಯಲ್ಲಿಯೇ ಬಡವರ ಪರ ಸದಾ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಾಗ ಪ್ರೇಕ್ಷಕರ ಕರತಾಡನ ಹೆಚ್ಚಾಯಿತು. ರಾಜ್ಯದ ಜನತೆ ಭೂಮಿ ನೀಡಿದ ಕಾಗೋಡು ತಿಮ್ಮಪ್ಪ ಅವರನ್ನು ಎಂದಿಗೂ ಮರೆಯುವಂತಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಬೇಳೂರು ಅವರು ಶಾಸಕರಾಗಿ, ನಿಗಮದ ಅಧ್ಯಕ್ಷರಾಗಿ ಸರ್ಕಾರ ನೀಡಿರುವ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿಭಾಯಿಸುತ್ತೇವೆ. ಮಲೆನಾಡಿನ ಭೂಮಿ ಸಮಸ್ಯೆ ಅದರಲ್ಲಿಯೂ ಶರಾವತಿ ಮುಳುಗಡೆಯ ಸಂತ್ರಸ್ತರ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.
    ಪ್ರತಿ ತಿಂಗಳು 8.53 ಕೋಟಿ ರೂ.: ಸಾಗರ ತಾಲೂಕಿನಲ್ಲಿ ಶಕ್ತಿ ಯೋಜನೆಯಡಿ ಈಗಾಗಲೇ 12,913 ಜನ ಮಹಿಳಾ ಪ್ರಯಾಣಿಕರು ಪ್ರತಿ ದಿನ ಪ್ರಯಾಣಿಸುತ್ತಾರೆ. 30,56,350 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದೊಂದು ಐತಿಹಾಸಿಕವಾದ ದಾಖಲೆ ಎಂದು ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಬಣ್ಣಿಸಿದರು. ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ 1,8,734 ಮನೆಗಳಿಗೆ ಉಚಿತ ಸೌಲಭ್ಯ ನೀಡಲಾಗಿದೆ. ಗಹಲಕ್ಷ್ಮಿ ಯೋಜನೆಯಲ್ಲಿ 42,658 ಲಾನುಭವಿಗಳಿದ್ದು ಇವರ ಖಾತೆಗೆ ಪ್ರತಿ ತಿಂಗಳು ಜಮೆ ಆಗುತ್ತಿರುವ ಮೊತ್ತ 8.53 ಕೋಟಿ ರೂಪಾಯಿ, ಅನ್ನಭಾಗ್ಯ, ಯುವನಿಧಿ ಯೋಜನೆಯೂ ವ್ಯವಸ್ಥಿತವಾಗಿ ಮುನ್ನಡೆದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts