More

    GST Revenue Collection: ಬಡವರಿಂದಲೇ ಜಿಎಸ್​ಟಿ ಗರಿಷ್ಠ ಸಂಗ್ರಹ- ಅಕ್ಟೋಬರ್​ನಲ್ಲಿ ಖಜಾನೆಗೆ 1.72 ಲಕ್ಷ ಕೋಟಿ ರೂ. ಜಮೆ

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹವು ಜನಸಾಮಾನ್ಯರ ಆದಾಯ ಮತ್ತಯ ಖರ್ಚಿನ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ. ಕೇಂದ್ರದ ಈ ಪರೋಕ್ಷ ತೆರಿಗೆಯಿಂದ ದೇಶ ಮತ್ತು ಸಮಾಜವನ್ನು ಪ್ರಭಾವಿತವಾಗಿದೆ. ಕೇಂದ್ರ ಸರ್ಕಾರ ಆದಾಯವನ್ನು ಹೆಚ್ಚಿಸಿಕೊಳ್ಳಲು ಪರೋಕ್ಷ ತೆರಿಗೆ ಮೇಲೆ ಆಧಾರಪಡುತ್ತಿದೆ. ಸರ್ಕಾರದ ಉತ್ಪನ್ನಗಳ ಮಾರಾಟ, ಅನುದಾನ, ಅಭಿವೃದ್ಧಿ ಕಾರ್ಯಕ್ರಮಗಳು, ಕೃಷಿ, ಕಾಮಗಾರಿಗಳು, ಪ್ರವಾಸೋದ್ಯಮ, ವೈದ್ಯಕೀಯ…ಹೀಗೆ ಹತ್ತು ಹಲವು ಆದಾಯ ಮಾರ್ಗಗಳಿದ್ದರೂ ಜಿಎಸ್​ಟಿ ಆದಾಯ ಸಂಗ್ರಹವೇ ಅಧಿಕವಾಗಿರುವುದು ವಿಶೇಷವಾಗಿದೆ.

    ಇದನ್ನೂ ಓದಿ: IPL: 5 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಸೌದಿ ಅರೇಬಿಯಾ!
    ದೇಶದಲ್ಲಿ ಜಿಎಸ್​ಟಿ ಆದಾಯ ಸಂಗ್ರಹ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು, 2023 ರ ಅಕ್ಟೋಬರ್ 2023 ರಲ್ಲಿ 1.72 ಲಕ್ಷ ಕೋಟಿ ರೂ. ಖಜಾನೆಗೆ ಜಮೆಯಾಗಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಂಗ್ರಹಿಸಲಾದ ಆದಾಯಕ್ಕೆ ಹೋಲಿಸಿದರೆ ಶೇ.13 ಹೆಚ್ಚಾಗಿದೆ. ಪ್ರತಿ ತಿಂಗಳು 1.6 ಲಕ್ಷ ಕೋಟಿ ರೂ.ಗಿಂತ ಅಧಿಕ ಆದಾಯ ಜಿಎಸ್​ಟಿ ರೂಪದಲ್ಲಿ ಹರಿದು ಬರುತ್ತಿದೆ. ಆದರೆ ಕಳೆದ ಅಕ್ಟೋಬರ್ ನಲ್ಲಿ ಸಂಗ್ರಹವಾದ 1,72,003 ಕೋಟಿ ರೂ. ಆದಾಯವು 2ನೇ ಅತ್ಯಧಿಕ ತೆರಿಗೆ ಸಂಗ್ರಹವಾಗಿ ದಾಖಲೆ ಬರೆದಿದೆ. ಇದೇ ವರ್ಷ ಏಪ್ರಿಲ್​ನಲ್ಲಿ 1.87 ಲಕ್ಷ ಕೋಟಿ ರೂ. ಅತ್ಯಧಿಕ ಆದಾಯ ಸಂಗ್ರಹವಾಗಿತ್ತು.

    ಅಕ್ಟೋಬರ್​ನಲ್ಲಿ 30,062 ಕೋಟಿ ರೂ.ಕೇಂದ್ರ ಸರಕು ಮತ್ತು ಸೇವಾ ತೆರಿಗೆ, 38,171 ಕೋಟಿ ರೂ.ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST), 91,315 ಕೋಟಿ ರೂ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 42,127 ಕೋಟಿ ರೂ ಒಳಗೊಂಡಿದೆ) ಸಮಗ್ರ ಸರಕು ಮತ್ತು ಸೇವೆಗಳು ತೆರಿಗೆ ಮತ್ತು 12,456 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,294 ಕೋಟಿ ಸೇರಿದಂತೆ) ಸೆಸ್ ಒಳಗೊಂಡಿದೆ.
    ಅಕ್ಟೋಬರ್ 2023 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು CGST ಗಾಗಿ 72,934 ಕೋಟಿ ಮತ್ತು SGST ಗಾಗಿ 74,785 ಕೋಟಿಗಳಷ್ಟಿದೆ.
    ವಿಶ್ವದಾದ್ಯಂತ ಅಧಿಕ ದ್ರವ್ಯೋಲ್ಬಣ, ಯುದ್ಧ, ಅನಿಶ್ಚಿತತೆ ಕಾರಣದಿಂದ ತೆರಿಗೆ ಸಂಗ್ರಹ ಕಡಿಮೆಯಾಗಿದ್ದರೂ, ಭಾರತದಲ್ಲಿ ಆರ್ಥಿಕತೆ ಬಲಗೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದು ಭಾರತ ಸೇರಿ ವಿಶ್ವಕ್ಕೆ ಒಳ್ಳೇಯ ಸಂದೇಶವೇ ಆಗಿದೆ. ಆದರೆ ಜಿಎಸ್​ಟಿ ತೆರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜನಸಾಮಾನ್ಯರ ಮೇಲಾಗುತ್ತಿದೆ. ಹೀಗಾಗಿ ಹೆಚ್ಚು ತೆರಿಗೆ ಸಂಗ್ರಹ ಜನಸಾಮಾನ್ಯರು ಅದರಲ್ಲೂ ಬಡವರಿಂದ ಹರಿದು ಬರುತ್ತಿದೆ ಎಂದು ಈ ಕುರಿತು ಅಧ್ಯಯನ ನಡೆಸಿರುವ ಆಕ್ಸ್​ಪಾಮ್​ ಸಂಸ್ಥೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts