More

    ಕೆರೆಗೆ ನದಿ ನೀರು, ಪ್ರಧಾನಿಗೆ ಪತ್ರ ; ಸಂಸದ ಜಿ.ಎಸ್.ಬಸವರಾಜು ಮಾಹಿತಿ ; ವ್ಯರ್ಥವಾಗಿ ಸಮುದ್ರಕ್ಕೆ ಸೇರುವ ನೀರಿನ ಸದ್ಬಳಕೆ ಅಗತ್ಯ

    ತುಮಕೂರು : ರಾಜ್ಯದ ಸಮಗ್ರ ನೀರಾವರಿ ಯೋಜನೆಯಲ್ಲಿ ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿವಾಭಿಮುಖವಾಗಿ ಹರಿದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನದಿಗಳ ನೀರನ್ನು ಪೂರ್ವಕ್ಕೆ ತಿರುಗಿಸಿ, ಇದನ್ನು ನೀರಾವರಿ ಯೋಜನೆಗೆ ಬಳಸಿಕೊಳ್ಳಬಹುದು. ನೇತ್ರಾವತಿ, ಕುವಾರಧಾರಾ, ವರದಾ, ಕಾಳಿ, ಶರಾವತಿ, ಅನಾಶಿನಿ, ಬೇಡ್ತಿ ಇತ್ಯಾದಿ 60ಕ್ಕೂ ಹೆಚ್ಚು ನದಿಗಳ 1998 ಟಿಎಂಸಿ ನೀರನ್ನು ಬರಗಾಲದಲ್ಲೂ ಹರಿಸಬಹುದು ಎಂದರು. ಅತಿ ಹೆಚ್ಚು ಮಳೆ ಬಿದ್ದಾಗ 800 ರಿಂದ 900 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದ್ದು, ಇದನ್ನು ಪೂರ್ಣ ಪ್ರವಾಣದಲ್ಲಿ ಬಳಸಿಕೊಳ್ಳಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಕೂಡ ಈ ಯೋಜನೆ ರೂಪಿಸಿದ್ದರು ಎಂದರು.

    ನನ್ನ ಹಲವಾರು ವರ್ಷಗಳ ಕನಸಿನ ಯೋಜನೆ ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಕಾರ್ಯಕ್ರಮ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ರಾಜ್ಯ ಸಣ್ಣ ನೀರಾವರಿ ಇಲಾಖೆ ವತಿಯಿಂದ ಈಗಾಗಲೇ ಸಲ್ಲಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳ ಕೆರೆ, ಕಟ್ಟೆಗಳ ಸೇರ್ಪಡೆ ಬಗ್ಗೆ ಆ.30ರಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಯ ಎಲ್ಲ ಗ್ರಾಮಗಳ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ನಲ್ಲಿ ಸಂಪರ್ಕ ವಾಡಲು ಕೇಂದ್ರ ಸರ್ಕಾರದ ವಾರ್ಗಸೂಚಿಯಂತೆ ಪ್ರತಿಯೊಂದು ಗ್ರಾಮದ ‘ವಿಲೇಜ್ ಆ್ಯಕ್ಷನ್ ಪ್ಲಾನ್’ ವಾಡಲು ಜಿಲ್ಲೆಯ 330 ಗ್ರಾಪಂಗಳಿಗೂ ಈಗಾಗಲೇ ಸೂಚನೆ ನೀಡಲಾಗಿದ್ದು, ಇದೇ ವಾದರಿಯಲ್ಲಿ ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಿಗೂ ಸೂಚಿಸಲಾಗಿದೆ ಎಂದರು.

    ಆ.30 ರಂದು ರಾಜ್ಯದ ನದಿ ಜೋಡಣೆ ನೋಡಲ್ ಅಧಿಕಾರಿ ಜತೆ ಸವಾಲೋಚನೆ ಸಭೆ ನಡೆಸಲಾಗುವುದು. ನಂತರ ನಿಖರವಾದ ವಾಹಿತಿಯೊಂದಿಗೆ ದೆಹಲಿಗೆ ತೆರಳಿ ತುಮಕೂರು ಜಿಲ್ಲೆಯ ಮತ್ತು ರಾಜ್ಯದ ನೀರಾವರಿ ಯೋಜನೆಗಳ ಕಡತಗಳ ಅನುಸರಣೆ ವಾಡಲಾಗುವುದು. ನೀರಾವರಿ ಯೋಜನೆ ಅನುಷ್ಠಾನಕ್ಕೆ ಈಗಲೂ ಪ್ರತಿ ದಿವಸವೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಜತೆ ನಿಕಟ ಸಂಪರ್ಕದಲ್ಲಿದ್ದೇನೆ ಎಂದರು.

    ಮದಲೂರು ಕೆರೆಗೆ ಹೇಮೆ ಹಂಚಿಕೆ : ಶಿರಾ ತಾಲೂಕಿಗೆ 0.89 ಟಿಎಂಸಿ ನೀರು ನಿಗದಿಯಾಗಿದ್ದು, ಇದರಲ್ಲಿ ಮದಲೂರು ಕೆರೆಗೂ 0.5 ಟಿಎಂಸಿ ನೀರು ಹರಿಸಿಕೊಳ್ಳಬಹುದು. ಈ ಹಿಂದೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗಲೇ ವೈ.ಕೆ.ರಾಮಯ್ಯ, ನಾನು ಹಾಗೂ ಜಯಚಂದ್ರ ಹೋರಾಟ ಮಾಡಿ ನೀರು ಹಂಚಿಕೆ ಮಾಡಿಸಿದ್ದೇವೆ ಎಂದರು. ಶಿರಾ ತಾಲೂಕಿಗೆ ನೀರು ಹರಿಸುವ ವಿಚಾರವಾಗಿ ವೈ.ಕೆ.ರಾಮಯ್ಯ ತೀವ್ರವಾಗಿ ವಿರೋಧಿಸಿದ್ದನ್ನು ನಾನು ಒಪ್ಪಲಿಲ್ಲ, ಶಿರಾ ಸಹ ಕರ್ನಾಟಕ ರಾಜ್ಯದಲ್ಲೇ ಇದೆ. ಅದೇನು ಪಾಕಿಸ್ತಾನದಲ್ಲಿಲ್ಲ, ಕುಡಿಯುವ ನೀರಿಗಾಗಿ ಹರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದೆ ಎಂದರು.

    ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗಿದೆ. ಈ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರಬಹುದು. ಹಂಚಿಕೆಯಾಗಿರುವ ನೀರು ಮದಲೂರು ಕೆರೆ ತಲುಪಲು ನಾಲೆಯಲ್ಲಿರುವ ಚೆಕ್‌ಡ್ಯಾಂ ಅಡ್ಡಿಯಾಗಿದ್ದು, ಅದಕ್ಕೆ ಗೇಟ್ ಅಳವಡಿಸಿ ನೀರು ತೆಗೆದುಕೊಂಡು ಹೋಗಬಹುದು.
    ಜಿ.ಎಸ್.ಬಸವರಾಜು, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts