More

    ಗೃಹಲಕ್ಷ್ಮಿ ನೋಂದಣಿ; ಗ್ರಾ.ಪಂ.ಗಳಿಗೆ 4.36 ಕೋಟಿ ರೂ. ಬಿಡುಗಡೆ

    ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಅರ್ಜಿ ನೋಂದಣಿಗೆ ಸಂಬಂಧಿಸಿದ ನೋಂದಣಿ ಮತ್ತು ಮುದ್ರಣ ಸೇವಾ ಶುಲ್ಕ 4.36 ಕೋಟಿ ರೂ.(ಜಿಎಸ್‌ಟಿ ಒಳಗೊಂಡಂತೆ)ಗಳನ್ನು ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದೆ.

    ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಆರಂಭದ ದಿನಗಳಲ್ಲಿ ಲಾನುಭವಿಗಳಿಗೆ ಗೊಂದಲ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಲು ಸೂಚಿಸಿತ್ತು. ಅಲ್ಲದೆ, ನೋಂದಣಿಗೆ ಸೇವಾ ಶುಲ್ಕ ನೀಡುವ ಭರವಸೆ ನೀಡಿತ್ತು.

    ಜುಲೈ 20,2023 ರಿಂದ ಸೆ.13 ವರೆಗೆ 30,84, 441 ಲಾನುಭವಿಗಳು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಂಡಿದ್ದು, ಅದರ ಆಧಾರದ ಮೇಲೆ ಪ್ರತಿ ಅರ್ಜಿಗೆ 12 ರೂ.ಗಳಂತೆ 5951 ಗ್ರಾಮ ಪಂಚಾಯಿತಿಗಳಿಗೆ 4,36,75,685 ರೂ.ಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

    ಡಿಇಒಗಳಿಗೆ ನಿರಾಸೆ

    ಗೃಹಲಕ್ಷ್ಮಿ ಯೋಜನೆ ನೋಂದಣಿಯ ಹೆಚ್ಚುವರಿ ಕೆಲಸದ ಹೊರೆ ಹೊತ್ತ ಡೇಟಾ ಎಂಟ್ರಿ ಅಪರೇಟರ್(ಡಿಇಒ)ಗಳು ನೋಂದಣಿ ಮತ್ತು ಮುದ್ರಣ ಶುಲ್ಕದಲ್ಲಿ ತಮಗೂ ಪಾಲು ಸಿಗಬಹುದೆಂದು ನಿರೀಕ್ಷಿಸಿದ್ದರು. ಆದರೆ ಸರ್ಕಾರ ಗ್ರಾ.ಪಂ.ಗಳ ಖರ್ಚು ವೆಚ್ಚಗಳಿಗೆ ಈ ಹಣ ನೀಡಿರುವುದರಿಂದ ಡಿಇಒಗಳು ನಿರಾಶರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts