More

    ಪಾಕಿಸ್ತಾನದ ಷೇರು ಮಾರುಕಟ್ಟೆ ಮೇಲೆ ಉಗ್ರರ ದಾಳಿ; ಭಯೋತ್ಪಾದಕರೂ ಸೇರಿ 9 ಮಂದಿ ಸಾವು

    ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಷೇರು ಮಾರುಕಟ್ಟೆ (ಪಾಕಿಸ್ತಾನ ಸ್ಟಾಕ್​ ಎಕ್ಸ್​​ಚೇಂಜ್ ಲಿಮಿಟೆಡ್​) ಕಟ್ಟಡದ ಮೇಲೆ ಉಗ್ರರ ದಾಳಿಯಾಗಿದ್ದು, ಇದರಲ್ಲಿ ಭಯೋತ್ಪಾದಕರೂ ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಇಂದು ಬೆಳಗ್ಗೆ ನಾಲ್ವರು ಶಸ್ತ್ರಧಾರಿ ಉಗ್ರರು ಷೇರು ಮಾರುಕಟ್ಟೆ ಮೇಲೆ ಗುಂಡು ಹಾಗೂ ಗ್ರೆನೇಡ್​ ದಾಳಿ ನಡೆಸಿದ್ದಾರೆ. ಅಲ್ಲಿನ ನಾಲ್ವರು ಸೆಕ್ಯೂರಿಟಿ ಗಾರ್ಡ್​ ಹಾಗೂ ಓರ್ವ ಪೊಲೀಸ್​ ಸಬ್​​ ಇನ್ಸ್​ಪೆಕ್ಟರ್​ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
    ಹಾಗೇ ನಾಲ್ವರೂ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್​ ರಕ್ಷಣಾ ಪಡೆ ಹೇಳಿದೆ.

    ಉಗ್ರರು ಮೊದಲು ಷೇರು ಮಾರುಕಟ್ಟೆಯ ಪ್ರಮುಖ ದ್ವಾರದ ಬಳಿ ಗ್ರನೇಡ್​ ದಾಳಿ ನಡೆಸಿದರು. ನಂತರ ಕಟ್ಟಡವನ್ನು ಪ್ರವೇಶಿಸಿ, ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿವೆ.

    ಪಾಕಿಸ್ತಾನದ ಸ್ಟಾಕ್​ ಎಕ್ಸ್​ಚೇಂಜ್​ ಮೇಲೆ ಗುಂಡಿನ ದಾಳಿ ನಡೆದಿದ್ದು ಖೇದಕರ. ಕಟ್ಟಡದ ಪಾರ್ಕಿಂಗ್​ ಪ್ರದೇಶದಿಂದ ಮೇನ್​ ಗೇಟ್ ಬಳಿ ಗ್ರೇನೇಡ್​ ದಾಳಿ ನಡೆಸಿ, ಸೀದಾ ಒಳಗೆ ನುಗ್ಗಿ ಗುಂಡು ಹಾರಿಸಿದರು ಎಂದು ಸ್ಟಾಕ್​ ಎಕ್ಸ್​ಚೇಂಜ್ ನಿರ್ದೇಶಕ ಅಬಿದ್​ ಅಲಿ ಹಬೀಬ್​ ತಿಳಿಸಿದ್ದಾರೆ.

    ಉಗ್ರರ ಗುಂಡಿನ ದಾಳಿಯಿಂದ ಕಟ್ಟಡದಲ್ಲಿದ್ದ ಎಲ್ಲರೂ ಭಯಭೀತರಾಗಿದ್ದಾರೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    ಸಿಂಧ್​ ಪ್ರಾಂತ್ಯದ ರಾಜ್ಯಪಾಲ ಇಮ್ರಾನ್​ ಇಸ್ಮಾಯಿಲ್​ ಟ್ವೀಟ್​ ಮೂಲಕ ಘಟನೆಯನ್ನು ಖಂಡಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸರು ಸುತ್ತುವರಿದಿದ್ದು, ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

    ಹಿಜ್ಬುಲ್‌ ಉಗ್ರರ ಹತ್ಯೆ: ಜಮ್ಮುವಿನ ದೋಡಾ ಈಗ ಭಯೋತ್ಪಾದನಾ ಮುಕ್ತ ಜಿಲ್ಲೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts