More

    ಹಸಿರು ಕ್ರಾಂತಿ ಹರಿಕಾರನ ಸ್ಮರಣೆ

    ಚಿಕ್ಕೋಡಿ: ಡಾ.ಬಾಬು ಜಗಜೀವನರಾಮ್ ದೇಶ ಕಂಡ ಮೌಲ್ಯಯುತ ರಾಜಕಾರಣಿ. ರೈತ, ಹಾಗೂ ಕುಶಲಕರ್ಮಿಗಳ ಅಭಿವೃದ್ಧಿಗೆ ಶ್ರಮಿಸಿದ ಹಸಿರು ಕ್ರಾಂತಿಯ ಹರಿಕಾರ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಸ್ಮರಿಸಿದ್ದಾರೆ.

    ಪಟ್ಟಣದ ಮಿನಿವಿಧಾನ ಸೌಧದ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಅವರ 114ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಕೆ.ಎನ್.ಕಟ್ಟಮ್ಮ, ಮಂಜುಳಾ ಹಾವನೂರ, ಪ್ರವೀಣ ಗಂಧ, ಜೆ.ಕೆ.ಪಮ್ಮಾರ, ಎಲ್.ಎಂ.ಜಯಗೋಣಿ, ಶಿವಾನಂದ ಮಾನಗಾವಿ, ಎಸ್.ಎಲ್.ಸವದಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.

    ಐಗಳಿ ವರದಿ: ಸ್ಥಳೀಯ ಗ್ರಾಪಂ ಕಚೇರಿಯಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಿಸ ಲಾಯಿತು. ಗ್ರಾಪಂ ಅಧ್ಯಕ್ಷೆ ರಾಜಶ್ರೀ ಪಾಟೀಲ, ಪಿಡಿಒ ರಾಜೇಂದ್ರ ಪಾಠಕ, ಶಂಕರಗೌಡ ಪಾಟೀಲ, ಶಿವಗೌಡ ಬಿರಾದರ, ಆಕಾಶ ಮಾದರ, ಶೆಟ್ಟೆಪ್ಪ ಹೊಸಮನಿ ಇದ್ದರು.

    ಮೇಖಳಿ ವರದಿ: ಗ್ರಾಮದ ಮಹಾತಂಗಿ ದೇವಸ್ಥಾನದ ಆವರಣದಲ್ಲಿ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ವಿವೇಕ ಹಟ್ಟಿಕರ, ಕುಮಾರ ಮರಭೀಮಗೋಳ, ಮುತ್ತು ಗೊಡಚಿ, ಪಿಡಿಒ ದಳವಾಯಿ, ಸಂಭಾಜಿ ಪೂಜೇರಿ, ಯಲ್ಲಪ್ಪ ಮಾದರ, ಸಹದೇವ ಡೊಂಗ್ರೆ, ಮಹಾದೇವ ಐಹೊಳೆ, ಸತ್ಯಪ್ಪ ಮಾದರ, ಮಾರುತಿ ಮಾಂಗ, ಸಾಗರ ದೊಡಮಣಿ, ಸಂತ್ರಾಮ ಮಾದರ ಇದ್ದರು.

    ಶೇಡಬಾಳದಲ್ಲಿ ಜಯಂತ್ಯುತ್ಸವ

    ಶೇಡಬಾಳ ಪಪಂನಲ್ಲಿ ಸೋಮವಾರ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ಬಿಜೆಪಿ ಯುವ ನಾಯಕ ಶ್ರೀನಿವಾಸ ಪಾಟೀಲ, ಪಪಂ ಅಧ್ಯಕ್ಷ ರವೀಂದ್ರ ಕಾಂಬಳೆ, ಶಾಂತಿನಾಥ ಮಾಲಗಾವೆ, ಉತ್ಕರ್ಷ್ ಪಾಟೀಲ, ಸುಭಾಷ ಢಾಲೆ, ಅನಿಲ ಸಗರೆ, ಪೋಪಟ ಕವಟಗಿ, ಸದಾಶಿವ ಮಾಂಗಲೆ, ರಾಜು ಚೌಗಲಾ, ಕುಮಾರ ಗುರವ, ಅಮಿತ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts