More

    ಜಿಲ್ಲಾದ್ಯಂತ ಸಂಡೇ ಲಾಕ್​ಡೌನ್​ಗೆ ಉತ್ತಮ ಬೆಂಬಲ

    ವಿಜಯವಾಣಿ ಸುದ್ದಿಜಾಲ ಹಾವೇರಿ/ರಾಣೆಬೆನ್ನೂರ

    ಕೋವಿಡ್-19 ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೊಷಿಸಿದ ಸಂಡೇ ಲಾಕ್​ಡೌನ್​ಗೆ 2ನೇ ವಾರವೂ ನಗರ ಸೇರಿ ಜಿಲ್ಲೆಯಾದ್ಯಂತ ಜನತೆಯಿಂದ ಉತ್ತಮ ಸ್ಪಂದನೆ ದೊರೆಯಿತು.

    ಸದಾ ಜನರಿಂದ ಕೂಡಿರುತ್ತಿದ್ದ ಜಿಲ್ಲೆಯ ನಗರ ಹಾಗೂ ಪಟ್ಟಣದ ಬಸ್ ನಿಲ್ದಾಣಗಳು, ತರಕಾರಿ ಮಾರುಕಟ್ಟೆ, ದಿನಸಿ ಮಾರುಕಟ್ಟೆ ಸೇರಿ ಇತರ ಪ್ರಮುಖ ರಸ್ತೆಗಳು, ಮಾರುಕಟ್ಟೆಗಳು ಖಾಲಿ ಖಾಲಿಯಾಗಿದ್ದವು. ನಗರ ಸಾರಿಗೆ ಸೇರಿ ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ಜನನಿಬಿಡಿ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣಗಳೂ ಬಿಕೋ ಎನ್ನುತ್ತಿದ್ದವು.

    ಅಗತ್ಯ ವಸ್ತುಗಳಾದ ಹಾಲು, ಔಷಧ, ಪೆಟ್ರೋಲ್ ಬಂಕ್, ತರಕಾರಿ, ಹೋಟೆಲ್​ನಲ್ಲಿ ಪಾರ್ಸಲ್, ಮಾಂಸ ಮಾರಾಟಕ್ಕೆ ಅವಕಾಶ ನೀಡಿತ್ತಾದರೂ ಜನತೆ ಹೊರ ಬರದ ಕಾರಣ ವ್ಯಾಪಾರವೂ ಅಷ್ಟಕಷ್ಟೇ ಎನ್ನುವಂತೆ ಕಂಡು ಬಂದಿತು.

    ಲಾಕ್​ಡೌನ್ ಮುನ್ಸೂಚನೆಯಿಂದಾಗಿ ಬಹುತೇಕ ಜನರು ಶನಿವಾರವೇ ವಸ್ತುಗಳನ್ನು ಖರೀದಿ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಾಣಲಿಲ್ಲ. ಈಗಾಗಲೇ ಕರೊನಾ ಹಾವಳಿಯಿಂದ ಜನರಲ್ಲೂ ಭಯ ಹುಟ್ಟಿದ್ದರಿಂದ ಅನಗತ್ಯ ಓಡಾಟ ನಡೆಸುವವರ ಸಂಖ್ಯೆಯಲ್ಲೂ ಇಳಿಕೆಯಾಗಿತ್ತು.

    ಪೊಲೀಸರಿಗೆ ದಂಡ ತೆತ್ತರು: ಹಾವೇರಿ ಹಾಗೂ ರಾಣೆಬೆನ್ನೂರ ನಗರದಲ್ಲಿ 2ನೇ ಭಾನುವಾರ ಮಾಸ್ಕ್ ಧರಿಸದೇ ಓಡಾಟ ನಡೆಸುವವರ ಹಾಗೂ ಅನಗತ್ಯವಾಗಿ ಮನೆಯಿಂದ ಹೊರ ಬಂದ ಬೈಕ್ ಸವಾರರಿಗೆ ಪೊಲೀಸರು 200 ರೂ., 500 ರೂ. ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts