More

    ಕೊಳಚೆ ನಿಮೂಲನಾ ಮಂಡಳಿಯಿಂದ ಕಡೂರಲ್ಲಿ 404 ಮನೆಗಳ ನಿರ್ಮಾಣ

    ಕಡೂರು: ಕರ್ನಾಟಕ ರಾಜ್ಯ ಕೊಳಚೆ ನಿಮೂಲನಾ ಮಂಡಳಿಯಿಂದ ಕಡೂರು ಪುರಸಭೆ ವ್ಯಾಪ್ತಿಯ 404 ಫಲಾನುಭವಿಗಳ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇದಕ್ಕಾಗಿ 18.44 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಂಡಳಿ ತಾಂತ್ರಿಕ ನಿರ್ದೇಶಕ ಎಚ್.ಎಂ.ಮೋಹನ್​ಕುಮಾರ್ ಹೇಳಿದರು.

    ಪಟ್ಟಣದ ಭೋವಿ ಕಾಲನಿ ಹಾಗೂ ಅಂಬೇಡ್ಕರ್ ನಗರದಲ್ಲಿ ಮಂಗಳವಾರ ಮಂಡಳಿಯಿಂದ ನಿರ್ವಿುಸುತ್ತಿರುವ ಮನೆಗಳ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಕಡೂರು ಪಟ್ಟಣದಲ್ಲಿ ಸುಮಾರು 16 ಕೊಳಚೆ ಪ್ರದೇಶಗಳಿವೆ. ಮಂಡಳಿಯಿಂದ ಈ ಪ್ರದೇಶದ ನಿವೇಶನ ರಹಿತ ಬಡವರಿಗೆ 404 ಮನೆಗಳನ್ನು ನಿರ್ವಿುಸಲಾಗುವುದು. ಇದರಲ್ಲಿ 291 ಮನೆಗಳ ಫಲಾನುಭವಿಗಳ ಮೂಲ ಬಂಡವಾಳವನ್ನು ಈಗಾಗಲೇ ಇಲಾಖೆಗೆ ಪಾವತಿಸಿದ್ದಾರೆ. ಪಲಾನುಭವಿಗೆ 4.61 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ವಿುಸಿ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

    ಪರಿಶಿಷ್ಟ ಜಾತಿ ಮತ್ತು ವರ್ಗದ ಫಲಾನುಭವಿಗಳು 46,100 ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳು 69,150 ಹಣವನ್ನು ಮೂಲ ಬಂಡವಾಳವಾಗಿ ಪಾವತಿಸ ಬೇಕಿದೆ. 70 ಸಾಮಾನ್ಯ ವರ್ಗದ ಬಡವರು ಈಗಾಗಲೇ ಹಣ ಪಾವತಿ ಮಾಡಿದ್ದಾರೆ. ಪ್ರಾರಂಭದಲ್ಲಿ ಭೋವಿ ಕಾಲನಿ ಮತ್ತು ಅಂಬೇಡ್ಕರ್ ನಗರದಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

    ಬೀರೂರು ಪಟ್ಟಣದಲ್ಲಿ 300 ಮನೆ ನಿರ್ವಣಕ್ಕೆ ಮಂಡಳಿಯಿಂದ ಟೆಂಡರ್ ಕರೆಯಲಾಗುವುದು. ತರೀಕೆರೆ ತಾಲೂಕಿನಲ್ಲಿ 250 ಮನೆಗಳು ಮಂಜೂರಾಗಿದ್ದು, 9 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಡೂರು ಪಟ್ಟಣದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.

    ಮಂಡಳಿ ಮೈಸೂರು ವಿಭಾಗದ ಕಾರ್ಯಪಾಲ ಇಂಜಿನಿಯರ್ ಚನ್ನಕೇಶವ ಗೌಡ, ಹಾಸನ ವಿಭಾಗದ ಸಹಾಯಕ ಇಂಜಿನಿಯರ್ ಯಶವಂತ್, ರವಿಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts