More

    ಟೋಕಿಯೊ ಒಲಿಂಪಿಕ್ಸ್ ಹೀರೋಗಳಿಗೆ ಅದ್ಧೂರಿ ಸ್ವಾಗತ

    ನವದೆಹಲಿ: ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಜಯಿಸಿ ತವರಿಗೆ ವಾಪಸಾದ ಪದಕ ವಿಜೇತರಿಗೆ ಸೋಮವಾರ ಅದ್ಧೂರಿ ಸ್ವಾಗತ ನೀಡಲಾಯಿತು. ಸ್ವರ್ಣ ಪದಕ ವಿಜೇತ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ, ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ, ಕಂಚಿನ ಪದಕ ವಿಜೇತ ಪುರುಷರ ಹಾಕಿ ತಂಡ, 4ನೇ ಸ್ಥಾನ ಪಡೆದ ಮಹಿಳಾ ಹಾಕಿ ತಂಡದ ಸದಸ್ಯರಿಗೆ ನೂರಾನು ಅಭಿಮಾನಿಗಳು ಸ್ವಾಗತ ಕೋರಿದರು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಹಾಗೂ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ ಐ) ವತಿಯಿಂದ ಪದಕ ವಿಜೇತರನ್ನು ಹೂಗೂಚ್ಛ ನೀಡಿ ಸ್ವಾಗತಿಸಲಾಯಿತು.

    ಟೋಕಿಯೊ ಹೀರೋಗಳು ಆಗಮಿಸುವ ವಿಷಯ ತಿಳಿದು ನೂನಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ತ್ರಿವರ್ಣ ಧ್ವಜ ಹಿಡಿದು ವಿಮಾನನಿಲ್ದಾಣದಲ್ಲಿ ಜಮಾಯಿಸಿದ್ದರು. ಕುಟುಂಬ ಸದಸ್ಯರು, ಸ್ಥಳೀಯ ರಾಜಕೀಯ ನಾಯಕರು ಸೇರಿದಂತೆ ನೆರೆದಿದ್ದ ಕ್ರೀಡಾಭಿಮಾನಿಗಳು ಪದಕ ವಿಜೇತರಿಗೆ ಜೈಕಾರ ಹಾಕಿದರು. ಸ್ಟಾರ್‌ಗಳನ್ನು ನೋಡುವ ಸಲುವಾಗಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆಯೇ ಏಕಾಏಕಿ ನುಗ್ಗಿದ ಪರಿಣಾಮ ವಿಮಾನನಿಲ್ದಾಣದಲ್ಲಿ ನೂಕುನುಗ್ಗಲು ಏರ್ಪಟ್ಟಿತು. ಇದೇ ವೇಳೆ ಚೋಪ್ರಾ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

    * ತೆರೆದ ವಾಹನದಲ್ಲಿ ಮೆರವಣಿಗೆ
    ಪದಕ ವಿಜೇತರು ವಿಮಾನದಿಂದ ಹೊರಬಂದ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಖಾಸಗಿ ಹೋಟೆಲ್‌ಗೆ ಕರೆತರಲಾಯಿತು. ರಸ್ತೆಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ಹೀರೋಗಳನ್ನು ನೋಡಿ ಪುಷ್ಪಾರ್ಚನೆ ಮಾಡಿದರು. ‘ಪದಕದೊಂದಿಗೆ ತವರಿಗೆ ಮರಳಿದ್ದು, ಸಂತೋಷ ತಂದಿದೆ. ನಾನು ಇಂಥ ಸ್ವಾಗತವನ್ನು ನಿರೀಕ್ಷೆ ಮಾಡಿದ್ದೆ’ ಎಂದು ನೀರಜ್ ಚೋಪ್ರಾ ಪ್ರತಿಯಿಸಿದರು. ನೀರಜ್ ಚೋಪ್ರಾ, ಪದಕ ವಿಜೇತ ಕುಸ್ತಿಪಟುಗಳಾದ ರವಿ ದಹಿಯಾ, ಭಜರಂಗ್ ಪೂನಿಯಾ, ಭಾರತ ಪುರುಷರ ಹಾಗೂ ಮಹಿಳಾ ತಂಡಗಳ ಸದಸ್ಯರು ಸೇರಿದಂತೆ ಸುಮಾರು 80 ಭಾರತೀಯ ಕ್ರೀಡಾಪಟುಗಳು ತವರಿಗೆ ವಾಪಸಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts