More

    ರಾಯಚೋಟಿ ಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆದ ಜಾತ್ರಾ ಮಹೋತ್ಸವ, ಬೃಹತ್ ಚಂಡಿ ಹೋಮ

    ರಾಯಚೋಟಿ (ಆಂಧ್ರಪ್ರದೇಶ): ರಾಯಚೋಟಿ ಕ್ಷೇತ್ರದ ಶ್ರೀವೀರಭದ್ರ ದೇವರ ಹಾಗೂ ಭದ್ರಕಾಳಿ ಅಮ್ಮನವರ 10 ದಿನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶಿವರಾತ್ರಿ ಅಮಾವಾಸ್ಯೆಯ ಸಂದರ್ಭದಲ್ಲಿ ಸೋಮವಾರ ದೇವಾಲಯದ ಪ್ರಾಂಗಣದಲ್ಲಿ ಬೃಹತ್ ಚಂಡಿಹೋಮ ಜರುಗಿತು.

    ವಿಶೇಷವಾಗಿ ನಿರ್ಮಿಸಲಾಗಿದ್ದ ಹೋಮಕುಂಡದಲ್ಲಿ ಸತತ 5 ತಾಸುಗಳ ವರೆಗೆ ಕೊ;ಲನು ಭಾರತಿ ಪಂಚಾಂಗಕರ್ತರು ಹಾಗೂ ನಂದ್ಯಾಲ ಬ್ರಹ್ಮಶ್ರೀ ನಂದುಲಮಠದ ಶ್ರೀಶಶಿಭೂಷಣ ಸಿದ್ಧಾಂತಿ ಸ್ವಾಮೀಜಿ ನೇತೃತ್ವದಲ್ಲಿ ಜರುಗಿದ ಈ ಚಂಡಿ ಹೋಮದಲ್ಲಿ ಶಿವಶ್ರೀ ಎಂ. ರಾಚಯೋಗೀಶ ಶಾಸ್ತ್ರಿ ಸೇರಿದಂತೆ ಹಲವಾರು ವೈದಿಕರು ಪಾಲ್ಗೊಂಡರು.

    ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆ ಸಂಪಗಾಂವ ಕಟಾಪುರಿ ಹಿರೇಮಠದ ಶ್ರೀಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವದಿಸಿದರು.

    ರಾಯಚೋಟಿ ಶ್ರೀವೀರಭದ್ರೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷೆ ಪೋಲಂರೆಡ್ಡಿ ವಿಜಯಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಡಿ.ವ್ಹಿ.ರಮಣರೆಡ್ಡಿ, ಧರ್ಮದರ್ಶಿ ಸಿ.ಎಂ. ಶಿವಶರಣ ಕಲಬುರ್ಗಿ, ಹುಬ್ಬಳ್ಳಿಯ ರಾಯಚೋಟಿ ಶ್ರೀವೀರಭದ್ರೇಶ್ವರಸ್ವಾಮಿ ರಥೋತ್ಸವ ಸೇವಾ ಸಮಿತಿಯ ಗಿರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ಶಂಕರ ಕುರ್ತಕೋಟಿ, ರಮೇಶಕುಮಾರ ಬುಡರಕಟ್ಟಿಮಠ, ಗೋವಾದ ಶಂಕರ ಹಿರೇಮಠ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತಗಣ ಪಾಲ್ಗೊಂಡು ಶ್ರೀವೀರಭದ್ರ ದೇವರ ಹಾಗೂ ಭದ್ರಕಾಳಿ ಅಮ್ಮನವರ ಆಶೀರ್ವಾದ ಪಡೆದರು.

    ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

    ಅಳಿಯನನ್ನೇ ಅಪಹರಿಸಿ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿದ ಅತ್ತೆ; ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಮತ್ತು ಕುಟುಂಬಸ್ಥರ ವಿರುದ್ಧ ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts